ಕನಕಗಿರಿ: ಹುಲಿಹೈದರ್ ಗ್ರಾಮದಲ್ಲಿ ಘರ್ಷಣೆ, ಇಬ್ಬರ ಸಾವು ಪ್ರಕರಣ: 25ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದ ಪೊಲೀಸ್
ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದ ಘರ್ಷಣೆಯಲ್ಲಿ ಇಬ್ಬರ ಸಾವು ಪ್ರಕರಣ ಸಂಬಂಧ 25ಕ್ಕೂ ಹೆಚ್ಚು ಜನರನ್ನು ಕನಕಗಿರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಪ್ಪಳ: ಜಿಲ್ಲೆಯ ಕನಕಗಿರಿ (Kanakagiri) ತಾಲೂಕಿನ ಹುಲಿಹೈದರ್ ಗ್ರಾಮದ ಘರ್ಷಣೆಯಲ್ಲಿ ಇಬ್ಬರ ಸಾವು ಪ್ರಕರಣ ಸಂಬಂಧ 25ಕ್ಕೂ ಹೆಚ್ಚು ಜನರನ್ನು ಕನಕಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ 58 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಎರಡು ಗುಂಪುಗಳ ನಡುವೆ ನಡೆದ ಗಲಾಟೆ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಿಸಿಕ್ಯಾಮರಾ ದೃಶ್ಯಗಳನ್ನಾಧರಿಸಿ 25ಕ್ಕೂ ಹೆಚ್ಚು ಜನರು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಿನ್ನೆ (ಆಗಸ್ಟ್ 11) ಮಾರಾಮಾರಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಯಂಕಪ್ಪ ತಳವಾರ (60), ಭಾಷಾಸಾಬ್ (22) ಮೃತರು. ಆರು ಮಂದಿ ಗಾಯಗೊಂಡಿದ್ದಾರೆ. ಧರ್ಮಣ್ಣ ಹರಿಜನ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಗೆಳೆತನದ ಕಾರಣಕ್ಕೆ ಘರ್ಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ: ಕನಕಗಿರಿ: ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ; ಇಬ್ಬರ ಹತ್ಯೆ
ಉಪ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಸಿಎಂಗೆ ಪತ್ರ:
ಕಳೆದ ವರ್ಷವೇ ಹುಲಿಹೈದರ್ ಗ್ರಾಮದಲ್ಲಿ ಉಪ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬಿಜೆಪಿ ಕಾರ್ಯಕರ್ತ ಹನುಮೇಶ್ ಹುಳಕಿಹಾಳ ಪತ್ರ ಬರೆದಿದ್ದರು. ಹುಲಿಹೈದರ್ ಗ್ರಾಮದಲ್ಲಿ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಠಾಣೆಗೆ ಈ ಹಿಂದಯೇ ಬೇಡಿಕೆ ಗ್ರಾಮಸ್ಥರು ಇಟ್ಟಿದ್ದರು. ಸರ್ಕಾರದ ನಿರ್ಲಕ್ಷ್ಯವೇ ಗಲಾಟೆಗೆ ಕಾರಣವಾಯ್ತಾ ಎನ್ನುವ ಪ್ರಶ್ನೆ ಉಂಟಾಗಿದೆ. ಅಷ್ಟೊಂದು ಕೋಲು ಹಿಡಿದುಕೊಂಡು ಬರಲು ಇದೊಂದು ಪೂರ್ವ ನಿಯೋಜಿತ ಕೃತ್ಯವೇ ಅನ್ನೋ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಗ್ರಾಮದಲ್ಲಿ ಕಾನೂನಿನ ಭಯವಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: Mohammad Fazil: ಫಾಜಿಲ್ ಹತ್ಯೆ ಪ್ರಕರಣ; ತಡರಾತ್ರಿ ಪೊಲೀಸರ ಕಾರ್ಯಾಚರಣೆ, ನಾಲ್ವರ ಬಂಧನ
ಮಹಿಳೆಯರು ಓಡಾಡೋ ಹಾಗಿಲ್ಲ, ಕುಡಿದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಹುಲಿಹೈದರ್ ಗ್ರಾಮದಲ್ಲಿ ಉಪ ಪೊಲೀಸ್ ಠಾಣೆ ಮಂಜೂರು ಮಾಡಲು ಕಳೆದ ವರ್ಷ ಮುಖ್ಯಮಂತ್ರಿಗಳಿಗೆ ಹನಮೇಶ್ ಪತ್ರ ಬರೆದಿದ್ದರು. ಸಾಮಾನ್ಯ ಜನ ಗ್ರಾಮದಲ್ಲಿ ಇರುವದೇ ಬೇಡ, ಬೇರೆ ಊರಿಗೆ ಹೋಗಿ ಜೀವನ ಸಾಗಿಸೋ ಪರಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಠಾಣೆ ಮಂಜೂರು ಮಾಡಿ ಮಹಿಳೆಯರಿಗೆ, ದುರ್ಬಲರಿಗೆ ರಕ್ಷಣೆ ಮಾಡಿಕೊಡಬೇಕೆಂದು ಪತ್ರ ಬರೆದಿದ್ದ ಬಿಜೆಪಿ ಕಾರ್ಯಕರ್ತ.
ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Fri, 12 August 22