ಕೊಪ್ಪಳ, ಫೆಬ್ರವರಿ 19: ಲಂಬಾಣಿ ಜನರನ್ನು ಮಂತಾತರ ಮಾಡುವ ಪ್ರಯತ್ನ ನಡೀತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಲಂಬಾಣಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಆ ಜನರ ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮತಾಂತರ ದೇಶಕ್ಕೆ ಅಂಟಿಕೊಂಡ ದೊಡ್ಡ ವೈರಸ್ ಮತ್ತು ಕ್ಯಾನ್ಸರ್. ಮೂರು ಸಾವಿರ ಚರ್ಚ್ಗಳು ಕಾನೂನು ಬಾಹಿರ. ಮತಾಂತರ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅನಧಿಕೃತ ಚರ್ಚ್ಗಳನ್ನು ಬುಲ್ಡೋಜರ್ ಮೂಲಕ ಒಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಸತಿ ಶಾಲೆಗಳ ಬರಹ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ನವರು ಬಾಬರ್ ಪರವಾಗಿ ನಿಂತರೇ ವಿನಃ ರಾಮನ ಪರ ನಿಲ್ಲಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂಗಳು ಮೇಲೆ ದೌರ್ಜನ್ಯ ಮಾಡುತ್ತಿದೆ. ಕೈ ಮುಗಿದು ಒಳಗೆ ಬಾ ಅಂದರೆ ಕಾಂಗ್ರೆಸ್ನವರಿಗೆ ಏನು ತೊಂದರೆ ಮಾಡಿತು. ಒಳಗೆ ಬೇಕಾದರೆ ಪ್ರಶ್ನೆ ಮಾಡಲಿ ಎಂದು ಕಿಡಿಕಾರಿದ್ದಾರೆ.
ಗಣೇಶ ಹಬ್ಬ ಮಾಡಿದರೆ, ಸರಸ್ವತಿ ಪುಜೆ ಮಾಡಿದರೆ ನಿಮಗೇನು ತೊಂದರೆ. ಮುಸ್ಲಿಂ ಓಲೈಕೆಗಾಗಿ ಈ ರೀತಿ ಸರ್ಕಾರ ಮಾಡುತ್ತಿದೆ. ನಿಮಗೆ ಹ್ಯಾಗ್ ಬೇಕೋ ಹಾಗೆ ಬದಲಾಯಿಸ್ತೀರಾ? ಸಿಎಂ ಸಿದ್ದರಾಮಯ್ಯಗಂತ ಕುಂಕುಮ ಕಂಡರೆ ಆಗಲ್ಲ. ಆದರೆ ದರ್ಗಾಕ್ಕೆ ಹೋಗುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ನೂರು ರಾಮ ಮಂದಿರ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಬಜೆಟ್ನಲ್ಲಿ ಅನುದಾನ ನೀಡಲಿಲ್ಲ. ಆದರೆ ಮುಸ್ಲಿಂರಿಗೆ ಅನೇಕ ರೀತಿಯ ಅನುದಾನ ನೀಡಿದ್ದಾರೆ. ರಾಮ ಮಂದಿರದ ಆನಂದವನ್ನು ತಡೆದುಕೊಳ್ಳಲು ಕಾಂಗ್ರೆಸ್ನವರಿಗೆ ಆಗುತ್ತಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ.
ಇದನ್ನೂ ಓದಿ: ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್
ಸುಪ್ರೀಂ ಕೋರ್ಟ್ 63 ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ಅಂತ ಹೇಳಿದೆ. ಇಂತಲ್ಲಿಯೇ ಗುದ್ದಲಿ ಇಟ್ಟು ನಿರ್ಮಾಣ ಮಾಡಿ ಅಂತ ಹೇಳಿಲ್ಲ. ರಾಮನ ಬಗ್ಗೆ ಏನಾದರೂ ಮಾತನಾಡಿದರೆ ರಾಮನ ಶಾಪ ತಟ್ಟುತ್ತೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:13 pm, Mon, 19 February 24