ಕೊಪ್ಪಳ: ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತ, ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡುತ್ತಿರುವ ರೈತರು

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳದಲ್ಲಿ ರೈತರು ಕೊತ್ತಂಬರಿ ಸೊಪ್ಪಿನ ಬೆಳೆ ನಾಶ ಮಾಡಿದ್ದಾರೆ. ಟಾವು ಮಾಡಿ, ಮಾರುಕಟ್ಟೆಗೆ ಸಾಗಾಟ ಮಾಡಲು ಆಗುವ ವೆಚ್ಚವು ಕೂಡ ಬರದೇ ಇದ್ದಿದ್ದರಿಂದ ಬೆಳೆ ನಾಶ ಮಾಡ್ತಿದ್ದಾರೆ. ಈ ವರ್ಷ ಒಂದು ಎಕರೆ ಕೊತಂಬರಿ ಸೊಪ್ಪು ಕೇವಲ 1000 ದಿಂದ 2000 ರೂಪಾಯಿಗೆ ಮಾರಾಟವಾಗಿದೆ.

ಕೊಪ್ಪಳ: ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತ, ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡುತ್ತಿರುವ ರೈತರು
ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತ, ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ
Follow us
| Updated By: ಆಯೇಷಾ ಬಾನು

Updated on: Jul 18, 2024 | 12:09 PM

ಕೊಪ್ಪಳ, ಜುಲೈ.18: ಒಂದು ತಿಂಗಳ ಹಿಂದೆ ದರ ಏರಿಸಿಕೊಂಡಿದ್ದ ಕೊತ್ತಂಬರಿ ಸೊಪ್ಪಿನ (Coriander)  ಬೆಲೆಯು ದಿಢೀರನೆ ಕುಸಿದೆ. ಅಡುಗೆಯ ಅಂದ ಹೆಚ್ಚಿಸಲು, ರುಚಿ ಹೆಚ್ಚಿಸಲು ಬಹು ಬಳಕೆಯ ಕೊತ್ತಂಬರಿ ಸೊಪ್ಪಿನ ದರ ಒಂದು ತಿಂಗಳ ಹಿಂದೆ ಒಂದು ಕಂತೆಗೆ ಬರೋಬ್ಬರಿ 80 ರೂ. ಇತ್ತು. ಆದರೆ ಈಗ ದರ ಕುಸಿದಿದೆ. ಇದರಿಂದ ಕಂಗಾಲಾದ ಕೊಪ್ಪಳ (Koppal) ರೈತರು ತಾವೇ ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳದಲ್ಲಿ ರೈತರು ಕೊತ್ತಂಬರಿ ಸೊಪ್ಪಿನ ಬೆಳೆ ನಾಶ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಬೆಲೆ ಸಿಗದಿದ್ದಕ್ಕೆ, ಕೊತ್ತಂಬರಿ ಸೊಪ್ಪಿನ ಬೆಲೆ ದಿಢೀ‌ರ್ ಕುಸಿದಿದ್ದಕ್ಕೆ ಬೆಳೆ ನಾಶ ಪಡಿಸಿದ್ದಾರೆ. ಯರೇಹಂಚಿನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರು ನೂರಾರು ಎಕರೆ ಕೊತಂಬರಿ ಬೆಳೆದಿದ್ದರು. ಸದ್ಯ ಈಗ ಕೊತ್ತಂಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈ ವರ್ಷ ಒಂದು ಎಕರೆ ಕೊತಂಬರಿ ಸೊಪ್ಪು ಕೇವಲ 1000 ದಿಂದ 2000 ರೂಪಾಯಿಗೆ ಮಾರಾಟವಾಗಿದೆ. ವ್ಯಾಪಾರಸ್ಥರು ಕಡಿಮೆ ಬೆಲೆಗೆ ಕೊತ್ತಂಬರಿ ಖರೀದಿ ಮಾಡುತ್ತಿದ್ದಾರೆ.

ಕಳೆದ ವರ್ಷ ಒಂದು ಎಕರೆ ಕೊತ್ತಂಬರಿ ಸೊಪ್ಪು 16 ರಿಂದ 20 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ಯರೇಹಂಚಿನಾಳ ಗ್ರಾಮದ ರೈತ ಮಹಾಂತೇಶ್ ಕೋಳೂರ ಅವರು ಬೆಳೆ ನಾಶ ಮಾಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ 8 ಎಕರೆಯಲ್ಲಿ ಕೊತ್ತಂಬರಿ ಬೆಳೆದಿದ್ದೆ. ಆದರೆ ಕಟಾವು ಮಾಡಿ, ಮಾರುಕಟ್ಟೆಗೆ ಸಾಗಾಟ ಮಾಡಲು ಆಗುವ ವೆಚ್ಚವು ಕೂಡ ಬರದೇ ಇದ್ದಿದ್ದರಿಂದ ಬೆಳೆ ನಾಶ ಮಾಡ್ತಿದ್ದೀನಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಜಿಟಿ ಮಾಲ್ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಬೇಕು: ಶರಣಗೌಡ ಕಂದ್ಕೂರ್

ರೈತನಿಗೆ ಅವಮಾನಿಸಿದ್ದ ಜಿಟಿ ಮಾಲ್​ ವಿರುದ್ಧ FIR

ಪಂಚೆ ಧರಿಸಿದ ರೈತನಿಗೆ ಅಪಮಾನ ಮಾಡಿರುವ ಜಿ.ಟಿ. ಮಾಲ್ ವಿರುದ್ಧ FIR ದಾಖಲಿಸಲಾಗಿದೆ. ದೂರುದಾರ ಧರ್ಮರಾಜಗೌಡ ದೂರಿನ ಹಿನ್ನಲೆ ಮಾಲ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿರುದ್ಧ ಕೆಪಿ ಅಗ್ರಹಾರ ಠಾಣೆಯಲ್ಲಿ ಬಿಎನ್ ಎಸ್ 126(2) ಅಡಿ ಕೇಸ್ ದಾಖಲು ಮಾಡಲಾಗಿದೆ. ಮೊನ್ನೆ ರಾತ್ರಿ ಟಿಕೆಟ್​ ಪಡೆದು ಸಿನಿಮಾ ನೋಡಲು ಹೋಗ್ತಿದ್ದ ವೇಳೆ ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಹಾವೇರಿಯ ಫಕೀರಪ್ಪರನ್ನ ಮಾಲ್​ ಒಳಗೆ ಬಿಡದೇ ಸಿಬ್ಬಂದಿ ಅವಮಾನಿಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ