ಕೊಪ್ಪಳ, ಡಿಸೆಂಬರ್ 15: ಹುಚ್ಚು ನಾಯಿ (Dog) ಕಡಿದು ಬಾಲಕ ಸೇರಿದಂತೆ 10 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಷ್ಟಗಿ (Kustagi) ಪಟ್ಟಣದ ಗಜೇಂದ್ರಗಡ ರಸ್ತೆಯ ಮುದ್ದಾನೇಶ್ವರ ಮಠದಲ್ಲಿ ನಡೆದಿದೆ. ಘಟನೆ ನಂತರ ಸಾರ್ವಜನಿಕರು ನಾಯಿಯನ್ನು ಹಿಡಿದು ಕೊಂದಿದ್ದಾರೆ. ಗಾಯಾಳುಗಳಿಗೆ ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಷ್ಟಗಿಯಲ್ಲಿ ನಾಯಿ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.
ಕುಷ್ಟಗಿ ಪಟ್ಟಣದ ಗೌಡರುಣಿ, ಇಂದಿರಾ ನಗರ, ಭೋವಿ ಓಣಿ, ಚೆಲುವಾದಿ ಓಣಿ ಸೇರಿದಂತೆ ಬಹುತೇಕ ಏರಿಯಾಗಳಲ್ಲಿನ ಜನರಿಗೆ ಹುಚ್ಚು ನಾಯಿ ಕಚ್ಚಿದೆ. ಮಗುವಿನ ಕೆನ್ನೆಯ ಭಾಗ, ಮಹಿಳೆಯ ತೊಡೆಹಿಂದಿನ ಭಾಗ ಮತ್ತು ಮಹಿಳೆಯ ಮೊಣಕಾಲು ಕೈ ಭಾಗದಲ್ಲಿ, ಓರ್ವನ ಕಾಲು ಕೈಗಳು ಸೇರಿದಂತೆ ಹತ್ತಾರು ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.
ಇದನ್ನೂ ಓದಿ: ಅಯ್ಯೋ ಪಾಪಿ, ಆ ಮುಗ್ಧ ಜೀವ ನಿನಗೇನೊ ಮಾಡಿತ್ತು? ನಾಯಿ ಮರಿಯನ್ನು ಎತ್ತಿ ನೆಲಕ್ಕೆ ಬಡಿದ ಕ್ರೂರಿ
ಇಷ್ಟೆಲ್ಲಾ ಅನಾಹುತ ಸಂಭವಿಸಿದರೂ ಸಹ ಪುರಸಭೆಯ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 am, Fri, 15 December 23