ಪ್ರತ್ಯೇಕ ಘಟನೆ: ಅಪಘಾತದಲ್ಲಿ ತಂದೆ-ಮಗನ ಸಾವು, ನದಿಯಲ್ಲಿ ತಾಯಿ-ಮಕ್ಕಳ ಶವ ಪತ್ತೆ
ಕೊಪ್ಪಳ ತಾಲೂಕಿನ ಅಮರೇಶ್ವರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಐಗುಂದ ಗ್ರಾಮದ ಕೂಟಿಯಾಲ ನದಿಯಲ್ಲಿ ತಾಯಿ-ಮಕ್ಕಳ ದೇಹ ಪತ್ತೆಯಾಗಿದೆ.
ಕೊಪ್ಪಳ ಡಿ.04: ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಅಮರೇಶ್ವರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಮೌನೇಶ್ ಬಡಿಗೇರ (31), ತಂದೆ ದೇವಿಂದ್ರಪ್ಪ ಬಡಿಗೇರ (55) ಮೃತ ದುರ್ದೈವಿಗಳು. ಮೃತರು ಕೊಪ್ಪಳ ತಾಲೂಕಿನ ಇರಕಲಗಡ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಮುನಿರಾಬಾದ್ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನದಿಯಲ್ಲಿ ತಾಯಿ-ಮಕ್ಕಳ ಮೃತ ದೇಹ ಪತ್ತೆ
ಮಡಿಕೇರಿ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಐಗುಂದ ಗ್ರಾಮದ ಕೂಟಿಯಾಲ ನದಿಯಲ್ಲಿ ತಾಯಿ-ಮಕ್ಕಳ ದೇಹ ಪತ್ತೆಯಾಗಿದೆ. ತಾಯಿ ಅಶ್ವಿನಿ (45) ಮಕ್ಕಳಾದ ನಿಖಿತಾ ಮತ್ತು ನವ್ಯ ದೇಹ ನದಿಯಲ್ಲಿ ಪತ್ತೆಯಾಗಿದೆ. ತಾಯಿ ಮತ್ತು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಾರು ಅಪಘಾತ: ಭವಾನಿ ರೇವಣ್ಣ ವಿಡಿಯೋ ವೈರಲ್, ಬೈಕ್ ಸವಾರನ ವಿರುದ್ಧ ಕೇಸ್ ಬುಕ್
ಅನೈತಿಕ ಸಂಬಂಧ ಆರೋಪ, ವ್ಯಕ್ತಿಯ ಬರ್ಬರ ಕೊಲೆ
ಮೈಸೂರು: ಅನೈತಿಕ ಸಂಬಂಧದ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ (39) ಕೊಲೆಯಾದ ವ್ಯಕ್ತಿ. ಸೋಮಯ್ಯ ಕೊಲೆ ಆರೋಪಿ. ಆರೋಪಿ ಸೋಮಯ್ಯ ಪತ್ನಿ ಜೊತೆ ಮಹದೇವಸ್ವಾಮಿ ಅನೈತಿಕ ಸಂಬಂಧ ಹೊಂದಿದ್ದನು ಎಂಬ ಆರೋಪವಿದೆ.
ಈ ವಿಚಾರಕ್ಕೆ ಆರೋಪಿ ಸೋಮಯ್ಯ, ನಿನ್ನೆ (ಡಿ.04)ರ ರಾತ್ರಿ ಗ್ರಾಮದ ಮಾರಮ್ಮನ ದೇವಾಲಯದಲ್ಲಿ ಮಲಗಿದ್ದ ಮಹದೇವಸ್ವಾಮಿಯನ್ನು ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿ ಸೋಮಯ್ಯ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Mon, 4 December 23