ಕೊಪ್ಪಳ, ಆಗಸ್ಟ್.18: ಕ್ಷೌರ ಮಾಡುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ (Murder) ಅಂತ್ಯ ಕಂಡಿದೆ. ಕೊಪ್ಪಳ (Koppal) ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ಕ್ಷೌರಿಕ ದಲಿತ ಯುವಕನ ಕೊಲೆ ಮಾಡಿದ್ದಾನೆ. ಯಮನೂರಸ್ವಾಮಿ ಬಂಡಿಹಾಳ(27) ಕೊಲೆಯಾದ ಯುವಕ. ಕಟಿಂಗ್ ಮಾಡುವ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಲಾಗಿದೆ.
ನಿನ್ನೆ ಕಟಿಂಗ್ ಮಾಡಿಸಿಕೊಳ್ಳಲು ಯಮನೂರಸ್ವಾಮಿ ಬಂಡಿಹಾಳ ಕಟಿಂಗ್ ಶಾಪ್ಗೆ ಬಂದಿದ್ದರು. ಈ ವೇಳೆ ಕ್ಷೌರಿಕ ಮುದಕಪ್ಪ ಹಡಪದ ಹಾಗೂ ಯಮನೂರಸ್ವಾಮಿ ಬಂಡಿಹಾಳ ನಡುವೆ ಜಗಳ ಶುರುವಾಗಿತ್ತು. ಆಗ ಮುದಕಪ್ಪ ತನ್ನ ಕೈಯಲ್ಲಿದ್ದ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ಕ್ಷೌರಿಕ ಮುದಕಪ್ಪ ಹಡಪದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದಕ್ಕೆ ಜಗಳ ನಡೆದು ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಜೊತೆಗೆ ಕ್ಷೌರಿಕನಿಂದ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗದಗ: ಸರ್ಕಾರಿ ಬಸ್, ಕಾರು ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು