ಗಂಗಾವತಿ: ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ; ಬೀಗಿ ಪೊಲೀಸ್ ಬಂದೋಬಸ್ತ್
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಇಂದು(ಡಿ.9) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thawar chand Gehlot) ಬೆಳಿಗ್ಗೆ 7.40 ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇತ್ತೀಚಿಗಷ್ಟೇ ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು. ಇನ್ನು ರಾಜ್ಯಪಾಲರ ಆಗಮನ ಹಿನ್ನೆಲೆ ಅಂಜನಾದ್ರಿ ಬೆಟ್ಟದಲ್ಲಿ ಬೀಗಿ ಪೋಲಿಸ್ ಭದ್ರತೆ ಆಯೋಜಿಸಲಾಗಿತ್ತು. ಇನ್ನು ಪೂಜೆ ಸಲ್ಲಿಸಿದ ಬಳಿಕ ಬಳ್ಳಾರಿಗೆ ತೆರಳಲಿರುವ ರಾಜ್ಯಪಾಲ ಗೆಹ್ಲೋಟ್.
ರಾಜ್ಯಪಾಲರು ಬರುವ ವೇಳೆ ಪೂಜಾ ವಿವಾದ; ವಿದ್ಯಾದಾಸ ಬಾಬಾರಿಂದ ಹೈಡ್ರಾಮ
ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ರಾಜ್ಯಪಾಲರು ಬರುವ ವೇಳೆ ಪೂಜೆ ಮಾಡುವ ವಿಚಾರವಾಗಿ ವಿದ್ಯಾದಾಸ ಬಾಬಾ ಹೈಡ್ರಾಮಾ ಮಾಡಿದ್ದಾರೆ. ಬಾಬಾಗೆ ಪೂಜೆ ಮಾಡಲು ಅಧಿಕಾರಿಗಳು ಅವಕಾಶ ನೀಡದ ಹಿನ್ನಲೆ ಸ್ಥಳದಲ್ಲಿಯೇ ಧರಣಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಪೊಲೀಸರು ವಿದ್ಯಾದಾಸರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ವಿದ್ಯಾದಾಸ ಬಾಬಾ ಸ್ವಾಮೀಜಿ ಮೇಲೆ ವಿವಾದ ಹಿನ್ನಲೆ ಪೂಜೆಯಿಂದ ಬಿಡಿಸಲಾಗಿತ್ತು. ಇದೀಗ ನ್ಯಾಯಾಲಯದ ಮುಖಾಂತರ ಮತ್ತೆ ಅವಕಾಶ ಪಡೆದಿರುವ ಬಾಬಾ. ಅಂಜನಾದ್ರಿಯಲ್ಲಿ ಪೂಜೆಗೆ ಅವಕಾಶ ನೀಡುವಂತೆ ಆಗ್ರಹ ಮಾಡಿದ್ದಾರೆ. ಆದರೆ ಕೊಪ್ಪಳ ಜಿಲ್ಲಾಡಳಿತದಿಂದ ಪೂಜೆಗೆ ನಿರಾಕರಣೆ ಮಾಡಲಾಗಿದ್ದು, ವಿದ್ಯಾದಾಸ ಹಾಗೂ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ವಿದ್ಯಾದಾಸರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂಜನಾದ್ರಿಯಲ್ಲಿ ನನಗೆ ಪೂಜೆ ಮಾಡುವುದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ ಎನ್ನುತ್ತಿರುವ ಬಾಬಾ. ಆದರೆ ಸರ್ಕಾರ ಇವಾಗ ಬೇರೆಯವರನ್ನ ನೇಮಿಸಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂದು ಕಿಡಿಕಾರಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 am, Fri, 9 December 22