Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾವತಿ ಪ್ರತ್ಯೇಕ ಜಿಲ್ಲೆ ಕೂಗು; ಕಾವೇರಿ ಹೋರಾಟದ ನಡುವೆ ಸರ್ಕಾರಕ್ಕೆ ಮತ್ತೊಂದು ತಲೆನೋವು

ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ಜೋರಾಗಿದೆ. ಇದರ ಜೊತೆಗೆ ಸದ್ಯ ಕರ್ನಾಟಕಲ್ಲಿ ಮತ್ತೊಂದು ಹೋರಾಟಕ್ಕೆ ಸದ್ದಿಲ್ಲದೆ ರೂಪರೇಷಗಳು ಶುರುವಾಗಿದೆ‌. ಸದ್ಯದಲ್ಲೆ ಸರ್ಕಾರಕ್ಕೆ ಮತ್ತೊಂದು ಹೋರಾಟದ ತಲೆ ಬಿಸಿ ಶುರುವಾಗೋ ಭೀತಿ ಎದುರಾಗಿದೆ. ಅಷ್ಟಕ್ಕೂ ಯಾವುದಾ ಆ ಹೋರಾಟ ಅಂತೀರಾ? ಈ ಸ್ಟೊರಿ ನೋಡಿ.

ಗಂಗಾವತಿ ಪ್ರತ್ಯೇಕ ಜಿಲ್ಲೆ ಕೂಗು; ಕಾವೇರಿ ಹೋರಾಟದ ನಡುವೆ ಸರ್ಕಾರಕ್ಕೆ ಮತ್ತೊಂದು ತಲೆನೋವು
ಗಂಗಾವತಿ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2023 | 9:27 AM

ಕೊಪ್ಪಳ, ಸೆ.29: ಜಿಲ್ಲೆಯ ಗಂಗಾವತಿ ಭಾಗದ ಹಾಲಿ ಮಾಜಿ ಜನಪ್ರತಿನಿಧಿಗಳು, ಸಂಘಟನೆಯ ಮುಖಂಡರು ಸಾರ್ವಜನಿಕರು ಸೇರಿ ಸಭೆ ನಡೆಸಿದ್ದಾರೆ. ಹೀಗೆ ಸಭೆ ನಡೆಸಿದ ಈ ಜನರು ಮತ್ತೊಂದು ಹೋರಾಟಕ್ಕೆ ಅಡಿಪಾಯ ಶುರು ಮಾಡಿದ್ದಾರೆ. ಹೌದು, ಕೊಪ್ಪಳ(Koppala) ಜಿಲ್ಲೆಯಲ್ಲಿರುವ ಗಂಗಾವತಿ(Gangavati) ತಾಲೂಕನ್ನು ಹೊಸ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು, ನೂತನ ಜಿಲ್ಲೆಗೆ ಕಿಷ್ಕಿಂದಾ ಜಿಲ್ಲೆ ಎಂದು ನಾಮಕರಣ ಮಾಡಬೇಕು ಎನ್ನುವ ಕೂಗು ಸದ್ಯ ಗಂಗಾವತಿಯಲ್ಲಿ ಕೇಳಿ ಬರುತ್ತಿದೆ. ಕಳೆದ ಕೆಲವು ದಿನಗಳಿಂದ ತೆರೆಮರೆಯಲ್ಲಿದ್ದ ಕಿಷ್ಕಿಂದಾ ಜಿಲ್ಲೆಯ ಕೂಗು ಸದ್ಯ ಬಹಿರಂಗವಾಗಿಯೇ ಪೂರ್ವಭಾವಿ ಸಭೆ ನಡೆದಿದೆ.

ಗಂಗಾವತಿಯ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಆ ಭಾಗದ ಮುಖಂಡರಿಂದ ನೂತನ ಕಿಷ್ಕಿಂದಾ ಜಿಲ್ಲೆ ರಚನೆಗೆ ಒತ್ತಾಯ ಕೇಳಿ ಬಂದಿದೆ. ಈ ಸಭೆಗೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗುರು ಸೇರಿ ಹಲವು ರಾಜಕಿಯ ಮುಖಂಡರು, ಹಾಲಿ ಮಾಜಿ ಜನಪ್ರತಿನಿಧಿಗಳು ಭಾಗವಹಿಸಿ. ಕಿಷ್ಕಿಂದಾ ಜಿಲ್ಲಾ ರಚನೆಗೆ ಸಹಮತ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಕಿಷ್ಕಿಂದಾ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಿದ್ದಾರೆ.

ಇದನ್ನೂ ಓದಿ:ಶಿರಸಿ ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತಾಡಲು ನಾನು ಉಸ್ತುವಾರಿ ಸಚಿವನಲ್ಲ: ಶಿವರಾಮ ಹೆಬ್ಬಾರ್​

ಸದ್ಯ ಗಂಗಾವತಿ ನಗರ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವ್ಯಾಪಾರ ವಹಿವಾಟು ಹೊಂದಿದೆ. ಅಷ್ಟೆ ಅಲ್ಲದೆ ಗಂಗಾವತಿಯ ಆನೆಗೊಂದಿ ಭಾಗ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಅಷ್ಟೆ ಅಲ್ಲದೇ ಹನುಮ ಜನಿಸಿದ ಸ್ಥಳ ಅಂಜನಾದ್ರಿ ಇರೋದು ಕೂಡ ಇದೆ ಗಂಗಾವತಿ ತಾಲೂಕಿನಲ್ಲಿ‌. ಸದ್ಯ ಈ ಭಾಗ ಜಿಲ್ಲಾ ಕೇಂದ್ರ ಕೊಪ್ಪಳದಿಂದ 50 ಕಿ ಮಿ ದೂರದಲ್ಲಿದ್ದು, ಅಭಿವೃದ್ಧಿ ಕುಂಟಿತವಾಗಿದೆ. ಹೀಗಾಗಿ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯಿಂದ ದೂರದಲ್ಲಿರುವ ಸಿಂದನೂರು, ಕಂಪ್ಲಿ, ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಗೆ ಬರೋ ಕನಕಗಿರಿ, ಕಾರಟಗಿ, ಗಂಗಾವತಿ ತಾಲೂಕುಗಳನ್ನ ಒಟ್ಟಿಗೆ ಸೇರಿಸಿ ಕಿಷ್ಕಿಂದಾ ಜಿಲ್ಲೆಯ ನೂತ‌ನ ಜಿಲ್ಲೆಯಾಗಿ ಮಾಡಬೇಕು ಎನ್ನುವುದು ಇಲ್ಲಿನ ಜನರ ಕೂಗಾಗಿದೆ.

ಇನ್ನು ಈ ಕುರಿತು ಮಾತನಾಡಿದ ಹೋರಾಟಗಾರರು ‘ಕಿಷ್ಕಿಂದಾ ಜಿಲ್ಲೆಯಾದ್ರೆ ಗಂಗಾವತಿ ಸೇರಿದಂತೆ ಉಳಿದ ತಾಲೂಕುಗಳು ಅಭಿವೃದ್ಧಿಯಾಗತ್ತದೆ. ಭತ್ತದ ಕಣಜ ಎಂದೆ ಹೆಸರಾಗಿರುವ ಗಂಗಾವತಿ, ಆನೆಗೊಂದಿ ಭಾಗಕ್ಕೆ ಹೆಚ್ಚಿನ ಅನುಧಾನ ಸಿಕ್ಕು ಜಿಲ್ಲೆಯ ಜನರು ಅಭಿವೃದ್ಧಿ ಕಾಣುತ್ತಾರೆ. ಹೀಗಾಗಿ ಕಿಷ್ಕಿಂದಾ ಜಿಲ್ಲೆ ರಚನೆ ಅನಿವಾರ್ಯವಾಗಿದೆ. ಸರ್ಕಾರ ಈ ಬಗ್ಗೆ ಗಮನ ನೀಡಿ ಹೋರಾಟ ಆರಂಭಕ್ಕೂ ಮುನ್ನವೇ ಸರ್ಕಾರ ಕಿಷ್ಕಿಂದಾ ಜಿಲ್ಲೆಯ ಘೋಷಣೆ ಮಾಡಬೇಕು. ಇಲ್ಲವಾದ್ರೆ ಈ ಭಾಗದ ಜನರು ಹೋರಾಟದ ಮೂಲಕ ಜಿಲ್ಲಾ ರಚನೆ ಮಾಡಿಕೊಳ್ಳಬೇಕಾಗುತ್ತೆ ಎನ್ನುತ್ತಾರೆ .

ಇದನ್ನೂ ಓದಿ:ಚಿಕ್ಕೋಡಿ: ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ; ಚಳಿಗಾಲ ಅಧಿವೇಶನ ಮುಗಿಯುವವರೆಗೂ ನಿರಂತರ ಹೋರಾಟ

ಸದ್ಯ ಗಂಗಾವತಿಯನ್ನ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲು ಬೇಕಾದ ಎಲ್ಲಾ ಮಾನದಂಡಗಳು ಗಂಗಾವತಿ ಹೊಂದಿದೆ. ಜನಸಂಖ್ಯೆ, ಬೌಗೋಳಿಕ ವಿಸ್ತೀರ್ಣ, ರಸ್ತೆ ರೈಲು ಮಾರ್ಗಗಳು, ಕೈಗಾರಿಕೆ, ವ್ಯಾಪಾರ ವಹಿವಾಟು, ಎಲ್ಲ ಅರ್ಹತೆಯೂ ಗಂಗಾವತಿಗೆ ಇದ್ದಾಗಲೂ ಸರ್ಕಾರ ಜಿಲ್ಲಾ ರಚನೆ ಮಾಡಲು ವಿಳಂಭ ಮಾಡಬಾರದು, ಕೂಡಲೇ ಜಿಲ್ಲೆಯಾಗಿ ರಚನೆ ಮಾಡಬೇಕು ಎಂದು ಈ ಭಾಗದ ಜನರ ಆಗ್ರಹಿಸಿದ್ದು,  ರಾಜ್ಯ ಸರ್ಕಾರ ಈ ಬೇಡಿಕೆಯನ್ನ ಯಾವ ರೀತಿ ಬಗೆ ಹರಿಸುತ್ತದೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ