ತೀವ್ರ ಸ್ವರೂಪ ಪಡೆದ ಗವಿ ಸಿದ್ದಪ್ಪ ಕೊಲೆ ಕೇಸ್: ಕೊಪ್ಪಳ ಬಂದ್​ಗೆ ಕರೆ ನೀಡಿದ ಹಿಂದೂ ಸಂಘಟನೆಗಳು

ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ (kill) ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ (Koppal) ನಗರದ ವಾರ್ಡ್​ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್​ ಎಂಬುವನೇ ಗವಿಸಿದ್ದಪ್ಪ ನಾಯಕ​ನನ್ನು ಕೊಲೆ ಮಾಡಿದ್ದು, ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ನಾಯಕ ಸಮುದಾಯ ಹಾಗೂ ಹಿಂದೂ ಸಂಘಟನೆಗಳು ಕೊಪ್ಪಳ ಬಂದ್​ ಗೆ ಕರೆ ನೀಡಿವೆ.

ತೀವ್ರ ಸ್ವರೂಪ ಪಡೆದ ಗವಿ ಸಿದ್ದಪ್ಪ ಕೊಲೆ ಕೇಸ್: ಕೊಪ್ಪಳ ಬಂದ್​ಗೆ ಕರೆ ನೀಡಿದ ಹಿಂದೂ ಸಂಘಟನೆಗಳು
ಕೊಲೆಯಾದ ಗವಿಸಿದ್ದಪ್ಪ
Updated By: ರಮೇಶ್ ಬಿ. ಜವಳಗೇರಾ

Updated on: Aug 05, 2025 | 9:36 PM

ಕೊಪ್ಪಳ, (ಆಗಸ್ಟ್ 05):  ನಗರದ ವಾರ್ಡ್​ 3ರ ಮಸೀದಿ ಮುಂಭಾಗದಲ್ಲಿ ನಡೆದಿದ್ದ ಗವಿಸಿದ್ದಪ್ಪ (Gavisiddappa Murder Case) ನಾಯಕ​ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕ ಸಾದಿಕ್ ಕೋಲ್ಕಾರ್ ಎನ್ನುವಾತ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದು, ಸಂಬಂಧ ಪೊಲೀಸರು ಈಗಾಗಲೇ ಹಂತಕ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಂದೆಡೆ ನಾಯಕ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳು ಗವಿಸಿದ್ದಪ್ಪನ ಕೊಲೆ ಖಂಡಿಸಿದ್ದು, ಸಂಬಂಧ ಇದೇ ಆಗಸ್ಟ್ 08ರಂದು ಕೊಪ್ಪಳ  (Koppal) ಜಿಲ್ಲಾ ಬಂದ್ ಗೆ ಕರೆ ನೀಡಿವೆ. ಹೀಗಾಗಿ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ.

ಗವಿಸಿದ್ದಪ್ಪ ಮುಸ್ಲಿ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಇನ್ನು ಅದೇ ಹುಡುಗಿಯನ್ನು ಹಂತಕ ಸಾದಿಕ ಸಹ ಪ್ರತಿಸಿಸುತ್ತಿದ್ದ. ಅಲ್ಲದೇ ಆಕೆಯನ್ನು ಮದುವೆಯಾಗಬೇಕೆಂದುಕೊಂಡಿದ್ದ. ಆದ್ರೆ, ಗವಿಸಿದ್ದಪ್ಪ ಪ್ರೀತಿಸುವ ವಿಚಾರ ತಿಳಿಯುತ್ತಿದ್ದಂತೆಯೇ ಸಾದಿಕ್ ಆಕ್ರೋಶಗೊಂಡಿದ್ದು, ಭಾನುವಾರ ರಾತ್ರಿ ಕೊಪ್ಪಳ (Koppal) ನಗರದ ವಾರ್ಡ್​ 3ರ ಮಸೀದಿ ಮುಂಭಾಗದಲ್ಲಿ ಸಾದಿಕ್, ಗವಿಸಿದ್ದಪ್ಪನನ್ನು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಪರಿಣಾಮ ಗವಿಸಿದ್ದಪ್ಪ ಸಾವನ್ನಪ್ಪಿದ್ದು, ಇದು ನಾಯಕ ಸಮುದಾಯ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ
ತೀವ್ರ ಸ್ವರೂಪ ಪಡೆದ ಗವಿಸಿದ್ದಪ್ಪ ಕೊಲೆ: ಹಿಂದೂ ಸಂಘಟನೆಗಳ ಸಭೆ
ನನ್ಮಗ ಇದ್ದೂ ಸತ್ತಂತೆ, ಸಾಧಿಕ್​ ಗೆ ಶಿಕ್ಷೆ ಆಗ್ಬೇಕು ಎಂದ ತಂದೆ
ಮೃತ ಗವಿಸಿದ್ದಪ್ಪನ ಕೈಗೆ ರಾಖಿ ಕಟ್ಟಿ ವಿದಾಯ ಹೇಳಿದ ಸಹೋದರಿಯರು
ಲವ್ ಅಫೇರ್ ಹಿನ್ನೆಲೆಯಲ್ಲಿ ಯುವಕನ ಕೊಲೆ, ಹಂತಕನನ್ನು ಸೆರೆಹಿಡಿದ ಪೊಲೀಸ್

ಇದನ್ನೂ ಓದಿ: ಮಸೀದಿ ಎದುರಲ್ಲೇ ಯುವಕನ ಭೀಕರ ಕೊಲೆ: ಬೆಚ್ಚಿಬಿದ್ದ ಕೊಪ್ಪಳ ಜನ, ಮುಳುವಾಯ್ತು ಪ್ರೀತಿ!

ಈಗಾಗಲೇ ಹಿಂದೂ ಸಂಘಟನೆಗಳು ಒಂದು ಸುತ್ತಿನ ಸಭೆ ಮಾಡಿದ್ದು, ಹೋರಾಟದ ಬಗ್ಗೆ ಚರ್ಚೆ ನಡೆಸಿವೆ. ಇನ್ನು ಇಂದು (ಆಗಸ್ಟ್ 05) ಮಾಜಿ ಸಚಿವ ಶ್ರೀರಾಮುಲು ಸಹ ತಮ್ಮ ಸಮುದಾಯದ ಗವಿಸಿದ್ದಪ್ಪನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆಗಸ್ಟ್ 08ರಂದು ಕೊಪ್ಪಳ ಜಿಲ್ಲಾ ಬಂದ್ಗೆ ಕರೆ ನೀಡಲಾಗಿದೆ.

ಶ್ರೀರಾಮುಲು ಹೇಳಿದ್ದೇನು?

ರವಿವಾರ 7.30 ಕ್ಕೆ ಮದ್ಯ ಕೊಪ್ಪಳದಲ್ಲಿ ಯುವಕನ ಕೊಲೆಯಾಗಿದೆ. ಗವಿ ಸಿದ್ದಪ್ಪ ನಾಯಕ್ ನನ್ನ ಸಾದಿಕ್ ರುಂಡ ಕತ್ತರಿಸಿ ಮರ್ಡರ್ ಮಾಡಿದ್ದಾನೆ. ಯಾವ ಧೈರ್ಯದ ಮೇಲೆ ಸಾದಿಕ್ ಕೊಲೆ ಮಾಡಿದ್ದಾನೆ. ಹತ್ತು ಹದಿನೈದು ಜನ ಸೇರಿ ಕೊಲೆ ಮಾಡಿದ್ದಾರೆ. ಎಸ್ ಪಿ ಗಂಟೆಗೊಮ್ಮೆ ಮಾತು ಬದಲಾವಣೆ ಮಾಡುತ್ತಿದ್ದಾರೆ. ಮದ್ಯರಾತ್ರಿಯೇ ಮರಣೋತ್ತರ ಪರೀಕ್ಷೆ ಮಾಡಿಸಿದ್ದು, ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಪೊಲೀಸರ ಕೈವಾಡ ಇದೆಯಾ? ರಾಜಕಾರಣಿಗಳ ಕೈವಾಡ ಇದೆಯಾ? ಪಿ.ಎಫ್ ಐ ಸಂಘಟನೆಯ ಕೈವಾಡ ಇದೆಯಾ ಅನ್ನೋದು ಹೊರ ಬರಬೇಕು. ಕೊಲೆ ಮಾಡಿದ ಸಾದಿಕ್ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪಾತಾಳದಲ್ಲಿ ಮುಚ್ಚಿಟ್ಟರೂ ನಾವು ಬಿಡಲ್ಲ

 ನಾನು ಅವರ ಮನೆಯವರಿಗೆ ಧೈರ್ಯ ತುಂಬಲು ಬಂದಿದ್ದೇನೆ. ಬರೋ ಶುಕ್ರವಾರ ಕೊಪ್ಪಳದಲ್ಲಿ ಹೋರಾಟ ಮಾಡುತ್ತೇನೆ. ಸಾದಿಕ್ ಮಚ್ಚು ಹಿಡಿದು ರೀಲ್ಸ್ ಮಾಡುತ್ತಾನೆ. ಡ್ರಗ್ಸ್ ತಗೆದುಕೊಂಡು ಹೊಗೆ ಬಿಡುತ್ತಾನೆ. ಕೇಸರಿ ಬಗ್ಗೆ ಮಾತಾಡ್ತಾನೆ. ಸಾದಿಕ್ ಹಿಂದೆ ಇರೋ ಯಾರನ್ನಾದರೂ ಪಾತಾಳದಲ್ಲಿ ಮುಚ್ಚಿಟ್ಟರೂ ನಾವು ಬಿಡಲ್ಲ ಸಮಾಜದ ಮುಖಂಡರು ಏನೇ ತೀರ್ಮಾನ ತಗೆದುಕೊಂಡರು ನಾನು ಬದ್ದ. ನನ್ನ ಜೀವ ಹೋದರೂ ನಾನು ಹೋರಾಟ ಬಿಡಲ್ಲ ಎಂದರು.