AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿ ಮುಂದೆಯೇ ಗವಿಸಿದ್ದಪ್ಪನನ್ನು ಸಾದಿಕ್ ಕೊಲೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ

ಕಳೆದ ಎರಡು ದಿನಗಳ ಹಿಂದೆ ಕೊಪ್ಪಳದಲ್ಲಿ ಭೀಕರ ಕೊಲೆಯಾಗಿತ್ತು. ನಡು ರಸ್ತೆಯಲ್ಲಿ 27 ವರ್ಷದ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಗವಿಸಿದ್ದಪ್ಪನನ್ನು ಕೊಲೆ ಮಾಡಿ, ಆರೋಪಿ ಸಾಧಿಕ್​ ಪೊಲೀಸರ ಎದುರು ಶರಣಾಗಿದ್ದನು. ಪೊಲೀಸರು ಪ್ರಕರಣ ಸಂಬಂಧ ಸಾಧಿಕ್​ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಈ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದೆ.

ಮಸೀದಿ ಮುಂದೆಯೇ ಗವಿಸಿದ್ದಪ್ಪನನ್ನು ಸಾದಿಕ್ ಕೊಲೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ
ಕೊಲೆಯಾದ ಗವಿಸಿದ್ದಪ್ಪ
ಶಿವಕುಮಾರ್ ಪತ್ತಾರ್
| Edited By: ವಿವೇಕ ಬಿರಾದಾರ|

Updated on: Aug 05, 2025 | 10:21 PM

Share

ಕೊಪ್ಪಳ, ಆಗಸ್ಟ್ 05: ರವಿವಾರ (ಆ.03) ರಾತ್ರಿ ಕೊಪ್ಪಳದ (Koppal) ವಾರ್ಡ್ ನಂಬರ್ 3ರಲ್ಲಿನ ಮಸೀದಿ ಮುಂಭಾಗ ಗವಿಸಿದ್ದಪ್ಪ (27)ನ (Gavisiddappa) ಕೊಲೆಯಾಗಿತ್ತು. ಯುವಕ ಸಾಧಿಕ್ ಕೊಲೆ ಮಾಡಿದ ಆರೋಪಿ. ಆರೋಪಿ ಸಾಧಿಕ್ ಮಚ್ಚಿನಿಂದ ಕೊಚ್ಚಿ ಕೊಲೆ ಗವಿಸಿದ್ದಪ್ಪನನ್ನು ಕೊಲೆ ಮಾಡಿ ಪೊಲೀಸರ (Police) ಎದುರು ಶರಣಾಗಿದ್ದನು. ಗವಿಸಿದ್ದಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಧಿಕ್​ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಧಿಕ್​, ಗೇಸುದರಾಜ್, ನಿಜಾಮುದ್ದೀನ್ ಹಾಗೂ ಮೆಹಬೂಬ್ ಅಲಿಯಾಸ್ ಗಿಡ್ಡ ಬಂಧಿತರು.

ರಿವಿಲ್​ ಆಯ್ತು ಟ್ರ್ಯಾಂಗಲ್​ ಲವ್​ ಸ್ಟೋರಿ

ಕೊಲೆಯಾದ ಗವಿಸಿದ್ದಪ್ಪ ಕೊಪ್ಪಳದ ಕುರಬರ ಓಣಿ ನಿವಾಸಿಯಾಗಿದ್ದಾನೆ. ತಂದೆ-ತಾಯಿಗೆ ಒಬ್ಬನೇ ಮಗ, ಮೂವರು ಸಹೋದರಿಯರು ಇದ್ದಾರೆ. ಕಾರು ಚಾಲಕನಾಗಿದ್ದ ಗವಿಸಿದ್ದಪ್ಪ ಪಕ್ಕಾ ಹಿಂದೂತ್ವವಾದಿಯಾಗಿದ್ದನು. ಗವಿಸಿದ್ದಪ್ಪನು ಕಳೆದ 2-3 ವರ್ಷಗಳ ಹಿಂದೆ ಕೊಪ್ಪಳದ ಶಾಂತಿ ಆಗ್ರೋದಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಶಾಂತಿ ಆಗ್ರೋದಲ್ಲಿ ಕೆಲಸ ಮಾಡತಿದ್ದ ಓರ್ವ ಮುಸ್ಲಿಂ ಯುವತಿ ಸ್ನೇಹ ಬೆಳಸಿದ್ದಾನೆ. ಸ್ನೇಹ ಪ್ರೇಮಕ್ಕೆ ತಿರುಗಿದೆ. ಕಳೆದ ಐದು ತಿಂಗಳ ಹಿಂದೆ ಇಬ್ಬರು ಮದುವೆಯಾಗಬೇಕೆಂದು ಓಡಿ ಹೋಗಿದ್ದರು. ಆದರೆ, ಈ ಸಂದರ್ಭದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು. ಕೊನೆಗೆ ಮನೆಯವರು ಜಾತಿ ಬೇರೆ ಬೇರೆಯಾಗತ್ತದೆ ಅಂತ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಮನೆಯವರು ಬುದ್ದಿವಾದ ಹೇಳಿದ ಬಳಿಕ ಗವಿಸಿದ್ದಪ್ಪ ಸೈಲೆಂಟ್​ ಆಗಿದ್ದನು.

ಮುಸ್ಲಿಂ ಯುವತಿ ಗವಿಸಿದ್ದಪ್ಪನಕ್ಕಿಂತ ಮೊದಲು ಆರೋಪಿ ಸಾಧಿಕ್​ನನ್ನು ಪ್ರೀತಿಸುತ್ತಿದ್ದಳಂತೆ.‌ ಸಾಧಿಕ್​ನೊಂದಿಗೆ ಬ್ರೇಕಪ್ ಮಾಡಿಕೊಂಡಿಕೊಂಡು, ಗವಿಸಿದ್ದಪ್ಪನನ್ನು ಪ್ರೀತಿ ಮಾಡಲು ಆರಂಭಿಸಿದ್ದಳು ಎಂಬುವುದು ಪೊಲೀಸರ ತನಿಖೆಗೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ
Image
ತೀವ್ರ ಸ್ವರೂಪ ಪಡೆದು ಗವಿ ಸಿದ್ದಪ್ಪ ಕೊಲೆ ಕೇಸ್: ಕೊಪ್ಪಳ ಬಂದ್​​ಗೆ ಕರೆ
Image
ನನ್ಮಗ ಇದ್ದೂ ಸತ್ತಂತೆ, ಸಾಧಿಕ್​ ಗೆ ಶಿಕ್ಷೆ ಆಗ್ಬೇಕು ಎಂದ ತಂದೆ
Image
ಮೃತ ಗವಿಸಿದ್ದಪ್ಪನ ಕೈಗೆ ರಾಖಿ ಕಟ್ಟಿ ವಿದಾಯ ಹೇಳಿದ ಸಹೋದರಿಯರು
Image
ಯುವಕನ ಭೀಕರ ಕೊಲೆಗೆ ಬೆಚ್ಚಿಬಿದ್ದ ಜನ: ಮುಳುವಾಯ್ತು ಪ್ರೀತಿ!

ಕೊಲೆ ಮಾಡಲು ಕಾರಣವೇನು?

ಗವಿಸಿದ್ದಪ್ಪ ತನ್ನ ಮಾಜಿ ಪ್ರೇಯಸಿ ಮುಸ್ಲಿಂ ಯುವತಿಗೆ ಟಾರ್ಚರ್ ಕೊಡುತ್ತಿದ್ದನಂತೆ. ಈ ಕಾರಣದಿಂದ ಕೊಲೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ರಾಮ್​ ಎಲ್​. ಅರಸಿದ್ಧಿ ಅವರು ಹೇಳಿದ್ದಾರೆ.

ಗವಿಸಿದ್ದಪ್ಪನ ಕೊಲೆಗೆ ಮುಸ್ಲಿಂ ಯುವತಿ ಕಾರಣ ಎಂದು ಗವಿಸಿದ್ದಪ್ಪನ ತಂದೆ ಹೇಳಿದ್ದಾರೆ. ನಾನು ಅವಳ ವಿರುದ್ಧವೂ ದೂರು ಕೊಡುತ್ತೇನೆ. ಮುಸ್ಲಿಂ ಯುವತಿಗೆ ನನ್ನ ಮಗ ಟಾರ್ಚರ್ ಕೊಟ್ಟಿಲ್ಲ. ಎಸ್​ಪಿ ಸುಳ್ಳು ಹೇಳತ್ತಿದ್ದಾರೆ. ಮುಸ್ಲಿಂ ಯುವತಿ ಹಾಗೂ ಗವಿಸಿದ್ದಪ್ಪ ಪ್ರೀತಿ ಮಾಡುವ ವಿಚಾರ ಎರಡೂ ಮನೆಯವರಿಗೆ ಗೊತ್ತಿತ್ತು. ಅವಳೇ ನಮ್ಮ ಮಗನಿಗೆ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದಳು. ಕೊಲೆಗೆ ಸಾಧಿಕ್ ಹಾಗೂ ಮುಸ್ಲಿಂ ಯುವತಿ ಇಬ್ಬರು ಕಾರಣ ಎಂದಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ತಿರುವು ಪಡೆದುಕೊಂಡ ಕೇಸ್

ಗವಿಸಿದ್ದಪ್ಪ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಕೊಲೆಯಾದ ಗವಿಸಿದ್ದಪ್ಪ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕನಾಗಿದ್ದು, ಸಮುದಾಯ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅಮಾಯಕ ಯುವಕನ ಕೊಲೆ ಖಂಡಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ವಾಲ್ಮೀಕಿ ಸಮುದಾಯದವರು ಚಿಂತನೆ ಮಾಡಿದ್ದಾರೆ.

ಇಂದು ಕೊಪ್ಪಳದ ವಾಲ್ಮೀಕಿ ಭವನದಲ್ಲಿ ಸಭೆ ಮಾಡಿದ ಮುಖಂಡರು, ಶುಕ್ರವಾರ ದೊಡ್ಡ ಹೋರಾಟ ಮಾಡುವ ತೀರ್ಮಾನ ಮಾಡಿದ್ದಾರೆ. ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ, ಮಾಜಿ ಸಚಿವ ಶ್ರೀರಾಮುಲು ಕೂಡ ಭಾಗಿಯಾಗಿದ್ದರು. ಸಭೆ ಬಳಿಕ ಶ್ರೀರಾಮುಲು ಗವಿಸಿದ್ದಪ್ಪ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳಿದರು.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಗವಿಸಿದ್ದಪ್ಪ ಕೊಲೆ: ಹಿಂದೂ ಸಂಘಟನೆಗಳ ಸಭೆ, ಅತ್ತ ಮತ್ತೆ ಮೂವರು ಆರೋಪಿಗಳು ವಶಕ್ಕೆ

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಕೊಲೆ ಆರೋಪಿ ಪಿಎಫ್​ಐ ಸಂಘಟನೆಯುಲ್ಲಿದ್ದನು. ಈ ಕೊಲೆ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಗವಿಸಿದ್ದಪ್ಪ ಪೊಲೀಸರ ನಿರ್ಲಕ್ಷ್ಯಕ್ಕೆ ಕೊಲೆಯಾಗಿದ್ದಾನೆ ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Shivakumar Pattar
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​