Jumma masjid: ಜುಮ್ಮಾ ಮಸೀದಿಗೆ ಭೇಟಿ ನೀಡುವ ಮೂಲಕ ಸೌಹಾರ್ದತೆ ಮೆರೆದ ಗವಿಸಿದ್ದೇಶ್ವರ ಸ್ವಾಮೀಜಿ, ಏನು ಹೇಳಿದರು?
Gavisiddeshwara swamiji: ಇತ್ತೀಚಿನ ದಿನಗಳಲ್ಲಿ ಧರ್ಮ ಧರ್ಮಗಳ ನಡುವೆ ಗಲಭೆಗಳಾಗುತ್ತಿರುವಾಗ ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲಕುಂಟಾದ ಜುಮ್ಮಾ ಮಸೀದಿಗೆ ಭೇಟಿ ನೀಡುವ ಮೂಲಕ ಸೌಹಾರ್ದತೆ ಮೆರೆದಿರುವುದು ಅನುಕರಣಿಯವೇ ಸರಿ.
ಕೊಪ್ಪಳದ ಗವಿಮಠದ ಪೀಠಾಧಿಪತಿಗಳಾದ ಗವಿಸಿದ್ದೇಶ್ವರ ಸ್ವಾಮೀಜಿ (Gavisiddeshwara swamiji) ಯಾವಾಗಲೂ ಇತರ ಸ್ವಾಮೀಜಿಯವರಿಗಿಂತ ಭಿನ್ನವಾಗಿಯೇ ಕೆಲಸ ಮಾಡುತ್ತಾರೆ. ಈಗ ಅಂತಹುದ್ದೆ ಕೆಲಸವೊಂದನ್ನು ಮಾಡಿದ್ದಾರೆ. ಇದು ಇಡೀ ಸಮಾಜಕ್ಕೆ ಮಾದರಿಯಾಗುವಂತಹ ಹಾಗೂ ಸಮಾಜದಲ್ಲಿ ಭಾವೈಕ್ಯತೆ ಸಾರುವಂತಹ ಕೆಲಸ. ಈ ಬಾರಿ ಅವರು ಮಸೀದಿಗೆ ಭೇಟಿ ನೀಡುವ ಮೂಲಕ ತಾವು ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ (jumma masjid).
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ (hirevankulakunta village) ಗವಿಸಿದ್ದೇಶ್ವರ ಸ್ಚಾಮೀಜಿಗಳ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿದಿನ ಸಂಜೆ ಪ್ರವಚನ ಕಾರ್ಯಕ್ರಮ ಜರಗುತ್ತಿದೆ. ಇದರ ಮಧ್ಯೆ ಪ್ರತಿದಿನ ಒಂದೊಂದು ಹಳ್ಳಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಪಾದಯಾತ್ರೆ ಮಾಡುತ್ತಾರೆ. ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲಕುಂಟಾ ಗ್ರಾಮದ ಜುಮ್ಮಾ ಮಸೀದಿಗೆ ಭೇಟಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ.
ಜುಮ್ಮಾ ಮಸೀದಿಯಲ್ಲಿ ಸ್ವಾಮೀಜಿ ಏನು ಮಾತನಾಡಿದರು ಅಂದರೆ… ಗವಿಸಿದ್ದೇಶ್ವರ ಸ್ವಾಮೀಜಿ ಮಾತುಗಳೆಂದರೆ ಸಾಕು ಅವುಗಳಿಗೊಂದು ತೂಕ ಹೆಚ್ಚು. ಅವರು ಮಾತನಾಡುವ ಪ್ರತಿಯೊಂದು ಮಾತೂ ಸಹ ಎಂತಹವರನ್ನೂ ಒಂದು ಕ್ಷಣ ಮಂತ್ರಮುಗ್ಧಗೊಳಿಸುತ್ತದೆ. ಮಸೀದಿಗೆ ಭೇಟಿ ನೀಡಿದ್ದ ವೇಳೆ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಮುಸ್ಲಿಂ ಸಮುದಾಯದವರು ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಗವಿಸಿದ್ದೇಶ್ವರ ಸ್ವಾಮೀಜಿಗಳು ಭೂಮಿಯ ಮೇಲೆ ಬದುಕಿರುವ ಜೀವರಾಶಿಗಳಲ್ಲಿ ಮಾನವೀಯತೆ ಅತ್ಯಂತ ಶ್ರೇಷ್ಠವಾದದ್ದು, ಮನುಷ್ಯನಲ್ಲಿ ಭೇದ- ಭಾವ ಇರಬಾರದು. ಸದಾ ಒಳ್ಳೆಯ ಕಾರ್ಯಗಳಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು. ಜೊತೆಗೆ ಮನುಷ್ಯರಾದವರು ಸದಾ ತ್ಯಾಗದಲ್ಲಿ ತೊಡಗಿರಬೇಕು, ದಯಾ-ಕರುಣೆಯಿಂದ ಬಾಳಿದರೆ ಅದುವೇ ಸ್ವರ್ಗ. ಕೆಲ ದಿನಗಳ ಹಿಂದೆ ದೇಶದಲ್ಲಿ ಭೇದ- ಭಾವ ಹರಡುವ ವಾತಾವರಣ ಇತ್ತು. ಈ ರೀತಿಯ ಬೆಳವಣಿಗೆಗೆ ಅವಕಾಶ ಕೊಡದೇ ಪ್ರತಿಯೊಬ್ಬರೂ ಸಹೋದರರಂತೆ ಜೀವಿಸಬೇಕು ಎಂದು ಕರೆ ನೀಡಿದರು.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮ ಧರ್ಮಗಳ ನಡುವೆ ಗಲಭೆಗಳಾಗುತ್ತಿರುವಾಗ ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲಕುಂಟಾದ ಜುಮ್ಮಾ ಮಸೀದಿಗೆ ಭೇಟಿ ನೀಡುವ ಮೂಲಕ ಸೌಹಾರ್ದತೆ ಮೆರೆದಿರುವುದು ಅನುಕರಣಿಯವೇ ಸರಿ.
ಪ್ರೇಮ ವಿವಾಹಕ್ಕೆ ಮನೆಯವರ ವಿರೋಧ; ನಮಗೆ ಬದುಕಲು ರಕ್ಷಣೆ ನೀಡಿ, ಕೋಲಾರ ಎಸ್ಪಿಗೆ ದೂರು ನೀಡಿದ ನವ ಜೋಡಿ ಕೋಲಾರ: ಪ್ರೇಮ ವಿವಾಹಕ್ಕೆ ಮನೆಯವರ ವಿರೋಧ ಹಿನ್ನೆಲೆಯಲ್ಲಿ ಕುಟುಂಬಸ್ಥರ ವಿರುದ್ಧವೇ ನವಜೋಡಿ ದೂರು ನೀಡಿದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಆರ್. ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ. ಮಾರ್ಚ್ 7ರಂದು ತಿರುಪತಿಯಲ್ಲಿ ವಿವಾಹವಾಗಿದ್ದ ಶ್ರೀನಿವಾಸಪುರ ತಾಲೂಕಿನ ಆರ್.ತಿಮ್ಮಸಂದ್ರ ನವಿತಾ ಹಾಗೂ ಮೋಹನ್, ನವಿತಾ ಮಾವ ಲೋಕೇಶ್ನಿಂದ ಕೊಲೆ ಬೆದರಿಕೆ ಆರೋಪ ಹಿನ್ನೆಲೆ ಕೋಲಾರ ಎಸ್ಪಿ ಡಿ. ದೇವರಾಜ್ ಅವರಿಗೆ ದೂರು ನೀಡಿದ್ದಾರೆ.
ಪತಿ ಮೋಹನ್ ಅನ್ಯ ಜಾತಿಗೆ ಸೇರಿದ ಹಿನ್ನಲೆ ಮನೆಯವರು ಮದುವೆಗೆ ವಿರೋಧ ಮಾಡಿದ್ದರು. ಹೀಗಾಗಿ ನಮಗೆ ಬದುಕಲು ರಕ್ಷಣೆ ನೀಡಬೇಕೆಂದು ನವಿತ ಕೋಲಾರ ಎಸ್ಪಿ ಡಿ. ದೇವರಾಜ್ಗೆ ಮನವಿ ಮಾಡಿದ್ದಾಳೆ.
Published On - 7:50 pm, Mon, 21 March 22