Koppal News: ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಕಿರಾಣಿ ಅಂಗಡಿ: ಅಣ್ಣ-ತಮ್ಮ ದುರ್ಮರಣ
ಸಿಲಿಂಡರ್ ಲೀಕ್ ಆಗಿ ಹೊಟೆಲ್ ಹಾಗೂ ಟೀ ಪಾಯಿಂಟ್ ಹೊತ್ತಿ ಊರಿದಿರುವಂತಹ ಘಟನೆ ಕೊಪ್ಪಳ ನಗರದ ಗಡಿಯಾರ ಕಂಬ ಬಳಿ ನಡೆದಿದೆ.
ಕೊಪ್ಪಳ: ಕಿರಾಣಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ (short circuit) ನಿಂದ ಅಣ್ಣ ತಮ್ಮ ಸಾವನ್ನಪ್ಪಿರುವಂತಹ ಘಟನೆ ನಿನ್ನೆ ರಾತ್ರಿ ತಾಲೂಕಿನ ಕೋಮಲಾಪೂರದಲ್ಲಿ ನಡೆದಿದೆ. ಕಿರಾಣಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ಐದು ವರ್ಷದ ಜಯರಾಜ್ ಸುಟ್ಟು ಕರಕಾಲಾಗಿದ್ದ. 11 ವರ್ಷದ ಅಣ್ಣ ವಿನೋದರಾಜ್ ನಿನ್ನೆ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಅಣ್ಣ ವಿನೋದ್ ರಾಜ್ ಸಾವನ್ನಪ್ಪಿದ್ದಾನೆ. ಅಂಗಡಿಯಲ್ಲಿದ್ದ ಅಣ್ಣ ತಮ್ಮನನ್ನ ಕಾಪಾಡಲು ಗ್ರಾಮಸ್ಥರು ಹರಸಹಾಸ ಪಟಿದ್ದಾರೆ. ಒಳಗೆ ಹೋಗಲಾರದಷ್ಟು ಕಿರಾಣಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಲು ಹಿಡಿದು ಮಕ್ಕಳನ್ನ ಹೊರಗೆ ತಗೆಯಲು ಗ್ರಾಮಸ್ಥರು ಪ್ರಯತ್ನ ಮಾಡಿದ್ದು, ಬೆಂಕಿಯ ಕೆನ್ನಾಲಿಗೆಯಿಂದ ಅಂಗಡಿಯಲ್ಲಿಯೇ ಜಯರಾಜ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: Accident: ಬೈಕ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ: ದಂಪತಿ ಸೇರಿದಂತೆ ಮಗು ಸ್ಥಳದಲ್ಲೇ ದುರ್ಮರಣ
ಹೊಟೆಲ್ನಲ್ಲಿದ್ದ ಸಿಲಿಂಡರ್ ಲೀಕ್: ತಪ್ಪಿದ ಭಾರೀ ಅನಾಹುತ
ಸಿಲಿಂಡರ್ ಲೀಕ್ ಆಗಿ ಹೊಟೆಲ್ ಹಾಗೂ ಟೀ ಪಾಯಿಂಟ್ ಹೊತ್ತಿ ಊರಿದಿರುವಂತಹ ಘಟನೆ ಕೊಪ್ಪಳ ನಗರದ ಗಡಿಯಾರ ಕಂಬ ಬಳಿ ನಡೆದಿದೆ. ರಾತ್ರಿ ಹೊಟೆಲ್ನಲ್ಲಿದ್ದ ಸಿಲಿಂಡರ್ ಸರಿಯಾಗಿ ಆಫ್ ಮಾಡದೆ ಇರೋದ್ರಿಂದ ಸಿಲಿಂಡರ್ ಲೀಕ್ ಆಗಿ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಹೊಟೆಲ್ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಯಿತು. ಹೊಟೆಲ್ ಮೇಲ್ಭಾಗದಲ್ಲಿ ವಾಸ ಮಾಡ್ತಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಟೆಲ್ ಮೇಲ್ಭಾಗ ಎರಡು ಮನೆಗಳಿದ್ದು, ಮನೆಯಲ್ಲಿದ್ದವರನ್ನು ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಳಂಬೆಳಗ್ಗೆ ದಟ್ಟವಾದ ಹೊಗೆ ಕಂಡು ಜನ ಆತಂಕಕ್ಕೆ ಒಳಗಾಗಿದ್ದರು.
ನೆಲಮಂಗಲದಲ್ಲಿ ಕಟ್ಟಡ ಕಾರ್ಮಿಕನ ಭೀಕರ ಕೊಲೆ ಪ್ರಕರಣ
ನೆಲಮಂಗಲ: ನಗರದಲ್ಲಿ ಕಟ್ಟಡ ಕಾರ್ಮಿಕನ ಭೀಕರ ಕೊಲೆ ಪ್ರಕರಣ ಸಂಬಂಧ ಕೊಲೆಗೈದಿದ್ದ ಆರೋಪಿ ಮಿಲನ್(40) ಅರೆಸ್ಟ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಆಗಸ್ಟ್ 7ರಂದು ಬೈರನಹಳ್ಳಿಯ ಅನುಪ ನಗರದಲ್ಲಿ ಘಟನೆ ನಡೆದಿತ್ತು. ಕೊಲ್ಲಾಪುರ ಮೂಲದ ರಾಜ್ (30)ಕೊಲೆಯಾಗಿತ್ತು. ಕೆಲಸ ಬಿಟ್ಟು ಊರಿಗೆ ತೆರಳುವ ವಿಷಯವಾಗಿ ಕಿರಿಕ್ ಆಗಿದೆ. ಮದ್ಯದ ನಶೆಯಲ್ಲಿ ಸಿಮಟ್ ಇಟ್ಟಿಗೆಗೆ ತಲೆ ಗುದ್ದಿ ಆರೋಪಿ ಕೊಲೆಗೈದಿದ್ದ. ಕೊಲ್ಲಾಪುರ, ಹೈದರಾಬಾದ್, ಪೂನಾ ಸೇರಿದಂತೆ 5ಸಾವಿರ ಕಿಲೋಮೀಟರ್ನಷ್ಟು ಪೊಲೀಸರ ಪತ್ತೆಕಾರ್ಯ ಆರಂಭಿಸಿದ್ದರು. ಪೂನಾದಲ್ಲಿ ಅಪಾರ್ಟ್ಮೆಂಟ್ ವೊಂದರಲ್ಲಿ ಕೆಲಸ ಮಾಡುವ ವೇಳೆ ಬಲೆಗೆ ಬಿದಿದ್ದಾರೆ. ಮೊಬೈಲ್, ರೈಲ್ವೆ ಟಿಕೆಟ್, ಸೇರಿದಂತೆ ಹಲವು ವಸ್ತುಗಳು ಸಾಕ್ಷಿಗಾಗಿ ಜಪ್ತಿ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.