ರಾಜ್ಯದ ಜನರೇ ನನ್ನ ಸಂಪಾದನೆ, ಅವರ ಮಧ್ಯೆಯೇ ಸಾಯೋದು: ಹೆಚ್.ಡಿ. ಕುಮಾರಸ್ವಾಮಿ
ಬಿಜೆಪಿಯವರು ನಮ್ಮ ಮೈತ್ರಿ ಸರ್ಕಾರವನ್ನ ತೆಗೆದು ಈ ಭಾಗವನ್ನ ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟಿದ್ದಾರೆ ಎಂದು ಜಿಲ್ಲೆಯ ಕುಷ್ಟಗಿಯ ಪಂಚರತ್ನ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಕೊಪ್ಪಳ: ಬಿಜೆಪಿಯವರು ನಮ್ಮ ಮೈತ್ರಿ ಸರ್ಕಾರವನ್ನ ತೆಗೆದು ಈ ಭಾಗವನ್ನ ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟಿದ್ದಾರೆ ಎಂದು ಜಿಲ್ಲೆಯ ಕುಷ್ಟಗಿಯ ಪಂಚರತ್ನ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ನಾನು ಸಿಎಂ ಇದ್ದಾಗಲೇ ಕಲಬುರಗಿಯ ಶಾಸಕರು ಕಲ್ಯಾಣ ಕರ್ನಾಟಕ ಅಂತ ಹೆಸರಿಡಲು ಮನವಿ ಮಾಡಿದ್ದರು. ರೈತರ, ಬಡವರ ಕಲ್ಯಾಣ ಆದಮೇಲೆ ಹೆಸರಿಡೋಣ ಅಂತ ಹೇಳಿದ್ದೆ. ಆದರೆ ಪಾಪ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಸರಿಟ್ಟಿದ್ದಾರೆ. ಬಿಜೆಪಿ, ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿವೆ ಎಲ್ಲರಿಗೂ ಗೊತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೇ ಭ್ರಷ್ಟಾಚಾರದಂಥ ನೀಚ ಕೆಲಸ ಮಾಡಿಲ್ಲ. ರಾಜ್ಯದ ಜನರೇ ನನ್ನ ಸಂಪಾದನೆ, ಜನರ ಮಧ್ಯೆಯೇ ಸಾಯೋದು ಎಂದು ಹೇಳಿದರು.
ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ
ನಾವು ಯಾವುದೇ ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಲ್ಲ. ನಾನು ರೈತನ ಮಗ 45 ಎಕರೆಯಲ್ಲಿ ಕೃಷಿ ಮಾಡೋದು ನನ್ನ ಆಸೆ. 2 ಬಾರಿ ಆಕಸ್ಮಿಕವಾಗಿ ಸಿಎಂ ಆದಾಗ ನಿಮಗಾಗಿ ಕೆಲಸ ಮಾಡಿದ್ದೇನೆ. ಸರಾಯಿ ಹಾಗೂ ಲಾಟರಿ ನಿಷೇಧ ಮಾಡಿದ್ದೇನೆ. ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಬಿಜೆಪಿ ಸರ್ಕಾರ ಈಗ ನಿಲ್ಲಿಸಿದೆ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಇದನ್ನೂ ಓದಿ: ಹಾಸನ ಟಿಕೆಟ್ ವಿಚಾರದಲ್ಲಿ ಶಕುನಿಗಳ ಕೈವಾಡ, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುವೆ ಎಂದ ಕುಮಾರಣ್ಣ
ಹಾಸನ ಕ್ಷೇತ್ರದ ಟಿಕೆಟ್ ಸಮಸ್ಯೆ ಸುಗಮವಾಗಿ ಬಗೆಹರಿಯಲಿದೆ: ಕುಮಾರಸ್ವಾಮಿ ಸ್ಪಷ್ಟನೆ
ಇನ್ನು ಹಾಸನ ಕ್ಷೇತ್ರದ ಟಿಕೆಟ್ ಸಮಸ್ಯೆ ಸುಗಮವಾಗಿ ಬಗೆಹರಿಯಲಿದೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ. ಅತಿ ಹೆಚ್ಚು ಕುಟುಂಬ ರಾಜಕಾರಣ ಇರುವುದೇ ಬಿಜೆಪಿಯಲ್ಲಿ ಅಮಿತ್ ಶಾ ನಮ್ಮ ಬಗ್ಗೆ ಏನು ಮಾತನಾಡೋದು ಎಂದು ಪ್ರಶ್ನಿಸಿದರು. ತಮ್ಮ ಮಗನಿಗೆ ಬಿಸಿಸಿಐನಲ್ಲಿ ಕಾರ್ಯದರ್ಶಿ ಸ್ಥಾನ ಕೊಡಿಸಿದ್ದಾರೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ನಿತ್ಯ ಜಾಗಟೆ ಹೊಡೆಯುವ ಗಿರಾಕಿ: ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಬಿಸಿಸಿಐ ಕಾರ್ಯದರ್ಶಿಯಾಗಲು ಜಯ್ಶಾಗೆ ಏನು ಅರ್ಹತೆ ಇದೆ. ಹಳೇ ಮೈಸೂರು ಭಾಗ ಜೆಡಿಎಸ್ನ ಭದ್ರಕೋಟೆ. ಉತ್ತರ ಕರ್ನಾಟಕದ ಭಾಗದಲ್ಲೂ ನಮಗೆ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಅದಕ್ಕಾಗಿ ರಾಷ್ಟ್ರಿಯ ಪಕ್ಷಗಳು ಮಂಡ್ಯಕ್ಕೆ ಹೋಗಿವೆ. ಉತ್ತರ ಕರ್ನಾಟಕ ಭಾಗದಲ್ಲೇ ನಾವು 40-45 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮತ್ತು ವಿಧವಾ ವೇತನ ಮಾಸಿಕ 2500 ರೂಪಾಯಿ ನೀಡುತ್ತೇವೆ. 40-50 ಪರ್ಸೆಂಟ್ ಮೂಲಕ ಸರ್ಕಾರದ ಖಜಾನೆಯನ್ನು ಕೆಲವು ವ್ಯಕ್ತಿಗಳು ದೋಚುತ್ತಿದ್ದಾರೆ. ನಿಮಗೆ ನೀಡಿದ ಭರವಸೆ ಈಡೇರಿಸದಿದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ. ಮುಂದೆ ಯಾವತ್ತೂ ಜೆಡಿಎಸ್ ಮತ ಕೇಳಲು ಬರಲ್ಲ. 2 ಬಾರಿ ಹೃದಯ ಚಿಕಿತ್ಸೆ ಆಗಿದೆ, ಎಷ್ಟು ದಿನ ಬದುಕ್ತಿನೋ ಗೊತ್ತಿಲ್ಲ. ನಿಮ್ಮ ಬದುಕು ಸರಿಪಡಿಸೋದೆ ನನ್ನ ಗುರಿ. ನನ್ನ ಪರ ಜೈಕಾರ ಹಾಕುತ್ತೀರಿ ಕೂಗುತ್ತೀರಿ, ಆದ್ರೆ ಮತ ಹಾಕುವುದಿಲ್ಲ. ಇದರಲ್ಲಿ ನಮ್ಮದು ತಪ್ಪಿದೆ, ಅಭ್ಯರ್ಥಿ ಹಾಕುವುದರಲ್ಲಿ ಎಡವಿದ್ದೇವೆ. ಕುಷ್ಟಗಿಯ ತುಕಾರಾಂ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಕನಕಗಿರಿಯ ಅಶೋಕ್ ಕೆಲಸ ನಮಗೆ ಸಮಾಧಾನ ತಂದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.