ಗಂಗಾವತಿಯಲ್ಲಿ ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ಕೊಟ್ಟ ಜನಾರ್ದನ ರೆಡ್ಡಿ: ಕಾಂಗ್ರೆಸ್, ಬಿಜೆಪಿ ಪಾಳಯದಲ್ಲಿ ನಡುಕ

ಜನಾರ್ದನ ರೆಡ್ಡಿ ಕೈಗೊಂಡಿದ್ದ ಟೆಂಪಲ್​ ರನ್ ಕಾರ್ಯಕ್ರಮದ ವೇಳೆ ಜನಾರ್ದನ ರೆಡ್ಡಿ ಅವರು ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ.‌ ದೇಣಿಗೆ ನೀಡಲು ಒಪ್ಪಿಗೆ‌ ನೀಡಿದ್ದಾರೆ.

ಗಂಗಾವತಿಯಲ್ಲಿ ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ಕೊಟ್ಟ ಜನಾರ್ದನ ರೆಡ್ಡಿ: ಕಾಂಗ್ರೆಸ್, ಬಿಜೆಪಿ ಪಾಳಯದಲ್ಲಿ ನಡುಕ
ಜನಾರ್ದನ ರೆಡ್ಡಿ
Follow us
| Updated By: ಆಯೇಷಾ ಬಾನು

Updated on: Dec 23, 2022 | 10:22 AM

ಕೊಪ್ಪಳ: ಗಾಲಿ ಜನಾರ್ದನ ರೆಡ್ಡಿ(Janardhana Reddy) ಅವರು ರಾಜಕಾರಣಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ತಮ್ಮ ಸಾಮ್ರಾಜ್ಯ ಕಟ್ಟಲು ಹೋರಾಡುತ್ತಿದ್ದಾರೆ. ಸದ್ಯ ರೆಡ್ಡಿ ಗಂಗಾವತಿಯಲ್ಲಿ ಫುಲ್ ಪ್ರಚಾರಕ್ಕಿಳಿದಿದ್ದಾರೆ. ಗಂಗಾವತಿಯಲ್ಲಿ ಹೊಸ ಮನೆಯ ಗೃಹ ಪ್ರವೇಶ ಮಾಡಿಸಿ ಗಂಗಾವತಿಯಲ್ಲಿ ಟೆಂಪಲ್ ರನ್ ಕೈಗೊಂಡಿದ್ದಾರೆ. ನಿನ್ನೆ(ಡಿ.22) ದೇವಸ್ಥಾನದ ಜೊತೆಗೆ ದರ್ಗಾಕ್ಕೂ ಭೇಟಿ ನೀಡುವ ಮೂಲಕ ಜನಾರ್ದನ ರೆಡ್ಡಿ ಬಿಜೆಪಿಯ ಜೊತೆ ಗಂಗಾವತಿಯ ಕಾಂಗ್ರೆಸ್ ಪಾಳೆಯದಲ್ಲೂ ನಡುಕ ಹುಟ್ಟಿಸಿದ್ದಾರೆ. ಮತ್ತೊಂದೆಡೆ ಗಂಗಾವತಿಯ ಹಾಲಿ ಮತ್ತು ಮಾಜಿ ಶಾಸಕರಿಗೆ ರೆಡ್ಡಿ ಶಾಕ್ ನೀಡಿದ್ದಾರೆ.

ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ.‌ ದೇಣಿಗೆ ಕೊಟ್ಟ ರೆಡ್ಡಿ

ನಿನ್ನೆ ಜನಾರ್ದನ ರೆಡ್ಡಿ ಕೈಗೊಂಡಿದ್ದ ಟೆಂಪಲ್​ ರನ್ ಕಾರ್ಯಕ್ರಮದ ವೇಳೆ ಜನಾರ್ದನ ರೆಡ್ಡಿ ಅವರು ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ.‌ ದೇಣಿಗೆ ನೀಡಲು ಒಪ್ಪಿಗೆ‌ ನೀಡಿದ್ದಾರೆ. ಈ ಮೂಲಕ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವೋಟ್ ಬ್ಯಾಂಕ್​ಗೆ ಕೈ ಹಾಕಿದ್ದಾರೆ. ದರ್ಗಾದಲ್ಲೇ 6 ಕೋಟಿ ರೂ. ವೆಚ್ಚದ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದಾರೆ. ಬೆಳಗಾವಿ ಮೂಲದ ಸ್ಟುಡಿಯೋ ಅಮೀರ್ ಕಂಪನಿಗೆ ಈ ದರ್ಗಾ ಅಭಿವೃದ್ಧಿ ಜವಾಬ್ದಾರಿಯನ್ನು ನೀಡಲಾಗಿದೆ. ನೇರವಾಗಿ ಕಂಪನಿಗೆ ಹಣ ನೀಡುವುದಾಗಿ ರೆಡ್ಡಿ ಸಹಿ ಮಾಡಿದ್ದಾರೆ. ರೆಡ್ಡಿ ನಡೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಲಿಬಿಲಿಯಾಗಿದ್ದಾರೆ. ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಈಗಾಗಲೇ ಈ ಸಂಬಂಧ ಡಿಸ್ಟರ್ಬ್ ಆಗಿದ್ದಾರೆ.

ಇದನ್ನೂ ಓದಿ: ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ: ಕುತೂಹಲ ಹೆಚ್ಚಿಸಿದ ಜನಾರ್ದನ ರೆಡ್ಡಿ ಮಾತುಗಳು

ನಿನ್ನೆ ಸಂಜೆ ರೆಡ್ಡಿ ಗಂಗಾವತಿಯ ಕರ್ನೂಲ್ ಬಾಬಾ ದರ್ಗಾ ಸೇರಿ ವಿವಿಧ ಮಸೀದಿಗೆ ಭೇಟಿ ನೀಡಿದ್ರು. ಜೊತೆಗೆ ಮುಸ್ಲಿಂ ಮುಖಂಡರೊಬ್ಬರ ಗೃಹ ಪ್ರವೇಶದಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲೂ ಗೊಂದಲ ಸೃಷ್ಟಿಸಿದ್ದಾರೆ. ಜನಾರ್ದನ ರೆಡ್ಡಿಯ ಇಂದಿನ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ರಾಜಕೀಯ ಕುರಿತ ಎಲ್ಲ ಪ್ರಶ್ನೆಗಳಿಗೂ ಡಿಸೆಂಬರ್ 25ರ ಕಡೆ ಕೈ ತೋರಿಸಿದ ಜನಾರ್ದನ ರೆಡ್ಡಿ, ನಾನು ಇಲ್ಲೇ ಇರುತ್ತೇನೆ ಎನ್ನುವ ಮೂಲಕ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಮೊನ್ನೆ ರಾತ್ರಿಯೂ ಜನಾರ್ದನ ‌ರೆಡ್ಡಿ ಗಂಗಾವತಿಯ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿದ್ದಾರೆ. ನಗರಸಭೆ ಸದಸ್ಯರುಗಳು ಸೇರಿ ಹಲವು ಚುನಾಯಿತ ಪ್ರತಿನಿಧಿಗಳಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರೆಡ್ಡಿಯ ಈ ಎಲ್ಲ ನಡೆ, ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸೂಚನೆ ನೀಡುತ್ತಿದೆ. ಯಡಿಯೂರಪ್ಪ ಅವರ ಹೇಳಿಕೆ ನೀಡಿರುವ ಪ್ರಕಾರ ರೆಡ್ಡಿ ಬಿಜೆಪಿಯಿಂದಲೆ ಟಿಕೆಟ್ ನೀಡತ್ತಾ, ಇಲ್ಲಾ ರೆಡ್ಡಿ ಹೊಸ ಯೋಜನೆ ಹಾಕಿದ್ದಾರೋ ಎಂದು ಚರ್ಚೆ ನಡೆಯುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ