ಕೊಪ್ಪಳ: ರಸ್ತೆ ದುರಸ್ತಿಗೆ ಪ್ರತಿಭಟನೆ ಮಾಡಿದ್ದ ಯುವಕರ ವಿರುದ್ಧ ಸುಳ್ಳು ಕೇಸ್​ ದಾಖಲು ಆರೋಪ: ಪೊಲೀಸರ ವಿರುದ್ದ ಯುವಕರ ಆಕ್ರೋಶ

ಕಾರಟಗಿ ತಾಲೂಕಿನ ಉಳೇನೂರು ಸಿದ್ದಾಪುರ ರಸ್ತೆ ದುರಸ್ತಿಗೆ ಪೊಲೀಸರ ಅನುಮತಿ ತೆಗೆದುಕೊಂಡು ಪ್ರತಿಭಟನೆ ಮಾಡಿದ್ದರೂ, ಇದೀಗ ಯುವಕರ ವಿರುದ್ಧ ಪೊಲೀಸರು FIR ಹಾಕಿ ನಿರತಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಪ್ಪಳ: ರಸ್ತೆ ದುರಸ್ತಿಗೆ ಪ್ರತಿಭಟನೆ ಮಾಡಿದ್ದ ಯುವಕರ ವಿರುದ್ಧ ಸುಳ್ಳು ಕೇಸ್​ ದಾಖಲು ಆರೋಪ: ಪೊಲೀಸರ ವಿರುದ್ದ ಯುವಕರ ಆಕ್ರೋಶ
ರಸ್ತೆ ದುರಸ್ಥಿ ವಿರುದ್ದ ಯುವಕರ ಪ್ರತಿಭಟನೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 11, 2023 | 2:47 PM

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಉಳೇನೂರು ಸಿದ್ದಾಪುರ ರಸ್ತೆ ದುರಸ್ತಿಗೆ ಪ್ರತಿಭಟನೆ ಮಾಡಿದ್ದ ಯುವಕರ ವಿರುದ್ಧ ಪೊಲೀಸರು FIR ಹಾಕಿ ನಿರತಂತರ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಆಗಸ್ಟ್ 17 2022 ರಂದು ರಸ್ತೆ ದುರಸ್ತಿಗೆ ಮನವಿ ಮಾಡಿದ್ದ ಸುರೇಶ್ ಮಡಿವಾಳರ್, ಮಲ್ಲಿಕಾರ್ಜುನ ಮಡಿವಾಳರ್, ಯಮನೂರ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಬಂದಿದ್ದ ಪೊಲೀಸರ ಹಾಗೂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.

ಅದೇ ಕಾರಣದಿಂದ ಪ್ರತಿಭಟನೆ ಮಾಡಿದ ಯುವಕರ ಜೊತೆ ಮತ್ತಷ್ಟು ಯುವಕರ ಹೆಸರು ಸೇರ್ಪಡೆ ಮಾಡಿದ್ದಾರೆ. ರಸ್ತೆ ದುರಸ್ತಿಗೆ ಪಟ್ಟು ಹಿಡಿದಿದ್ದ ಉಳೇನೂರು ಗ್ರಾಮದ ಯುವಕ ಸುರೇಶ್, ಜಿ.ಪಂ ಸಿಇಓ ಗೂ ರಸ್ತೆ ದುರಸ್ತಿಗೆ ಮನವಿ ಮಾಡಿದ್ದನಂತೆ. ಆದರೀಗ ಯಾವುದೇ ಮಾಹಿತಿ ಇಲ್ಲದೆ ಪೊಲೀಸರು FIR ಮಾಡಿದ್ದರು‌. ನಾನು ನಿಮ್ಮ ಬೆದರಿಕೆಗೆ ಹೆದರುವುದಿಲ್ಲ ಎಂದ ಸುರೇಶ್. ಪೊಲೀಸರ ವಿರುದ್ಧ ಕ್ರಮಕ್ಕೆ ಗೃಹ ಸಚಿವರಿಗೆ ಸುರೇಶ್ ಮನವಿ ಮಾಡಿದ್ದಾನೆ. ಜೊತೆಗೆ ಪೊಲೀಸರ ಅನುಮತಿ ಪಡೆದೆ ಪ್ರತಿಭಟನೆ ಮಾಡಿದ್ರು, ಸುಳ್ಳು ಕೇಸ್ ದಾಖಲಿಸಿದ್ದಾರೆಂದು ಸಾಮಾಜಿಕ ತಾಣಗಳಲ್ಲಿ ಪೊಲೀಸರ ವಿರುದ್ಧ ಆರೋಪ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ನಗರದ ಹೊರ ವಲಯದಲ್ಲಿ ಸಾವನ್ನಪ್ಪಿದ್ದ ತಾಯಿ, ಮಗುವಿನ ಸಾವಿನ ಸುತ್ತ ಅನುಮಾನಗಳ ಹುತ್ತ

ಗದಗ: ನಗರದ ಹೊರವಲಯದ ಸಾಸ್ವಿಹಳ್ಳಿ ಪಾರ್ಮ್​ನಲ್ಲಿ ರುಬೀನಾ ಕಣವಿ 28 ವರ್ಷದ ಮಹಿಳೆ ಶವವಾಗಿ ಪತ್ತೆಯಾಗಿದ್ದಳು. ಇದೀಗ ನಾಲ್ಕು ದಿನಗಳ ಬಳಿಕ ಮೂರು ವರುಷದ ಜಾವೇದ್ ಕಣವಿ ಎಂಬ ಮಗುವಿನ ಶವ ಪತ್ತೆಯಾಗಿದೆ. ಮಗುವಿಗೆ ಕಲ್ಲು ಕಟ್ಟಿ, ಬಾವಿಗೆ ಎಸೆದಿರುವ ಕಿರಾತಕರು. ನಾಲ್ಕು ದಿನಗಳ ಹಿಂದೆ ತಾಯಿ ಇದೀಗ ಮೂರು ವರ್ಷದ ಮಗು ಶವವಾಗಿ ಪತ್ತೆ. ಮಗಳು, ಮೊಮ್ಮಗನ ಕಳೆದುಕೊಂಡು ತಾಯಿಯ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ರುಬೀನಾ ಹಾಗೂ ಜಾವೇದ್ ಕೊಲೆ ಮಾಡಿ, ನಂತ್ರ ಬಾವಿಗೆ ಹಾಕಲಾಗಿದೆ. ಮೊದಲಿನಿಂದಲೂ ವರದಕ್ಷಿಣೆ ಕಿರುಕುಳ ನೀಡ್ತಾಯಿದ್ರು ಎಂದು ಮೃತ ಮಹಿಳೆಯ ತಾಯಿ ಗಂಡ ದಾವಲಸಾಬ್ ಕಣವಿ ಸೇರಿದಂತೆ, ಐದು ಜನ ಕುಟುಂಬಸ್ಥರ ವಿರುದ್ದ ಗದಗ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Sat, 11 February 23