ಕೊಪ್ಪಳ: ಇನ್ನೊಂದು ನಾಯಿಯ ಪ್ರಾಣ ಉಳಿಸಲು ರಕ್ತದಾನ ಮಾಡಿದ ಶ್ವಾನ

| Updated By: Ganapathi Sharma

Updated on: Aug 01, 2024 | 8:30 AM

Dog Blood Donation; ರಕ್ತದಾನ ಎಂಬುದು ಮಾನವ ಪ್ರಪಂಚದಲ್ಲೀಗ ಸಾಮಾನ್ಯ ವಿದ್ಯಮಾನ. ಆದಾಗ್ಯೂ, ರಕ್ತ ಸಿಗದೆ ರೋಗಿಗಳು ಮೃತಪಟ್ಟ ಘಟನೆಗಳ ಬಗ್ಗೆಯೂ ಅಲ್ಲಲ್ಲಿ ವರದಿಗಳಾಗುತ್ತವೆ. ಆದರೆ, ಪ್ರಾಣಿ ಪ್ರಪಂಚದ ಅಭೂತಪೂರ್ವ ವಿದ್ಯಮಾನವೊಂದು ಕೊಪ್ಪಳದಲ್ಲಿ ನಡೆದಿದೆ. ಸಾಕು ನಾಯಿಯೊಂದು ರಕ್ತದಾನ ಮಾಡಿ ಇನ್ನೊಂದು ನಾಯಿಯ ಪ್ರಾಣ ಉಳಿಸಿದೆ.

ಕೊಪ್ಪಳ: ಇನ್ನೊಂದು ನಾಯಿಯ ಪ್ರಾಣ ಉಳಿಸಲು ರಕ್ತದಾನ ಮಾಡಿದ ಶ್ವಾನ
ಕೊಪ್ಪಳ: ಇನ್ನೊಂದು ನಾಯಿಯ ಪ್ರಾಣ ಉಳಿಸಲು ರಕ್ತದಾನ ಮಾಡಿದ ಶ್ವಾನ
Follow us on

ಕೊಪ್ಪಳ, ಆಗಸ್ಟ್ 1: ರಕ್ತದಾನ ಶ್ರೇಷ್ಠ ದಾನ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಅನೇಕರು ಮೃತಪಡುತ್ತಿರುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮನುಷ್ಯರೇ ಮನುಷ್ಯರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಹಿಂದುಮುಂದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇದು ಅಚ್ಚರಿಯನಿಸಿದರು ಕೂಡಾ ನಿಜ.

ಕೊಪ್ಪಳದಲ್ಲಿ ಬುಧವಾರ ಸಾಕಿದ ನಾಯಿಯೊಂದು ಮತ್ತೊಂದು ನಾಯಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ. ನಗರದ ಪಶು ಚಿಕಿತ್ಸಾಲಯದಲ್ಲಿ, ಪ್ರಾಧ್ಯಾಪಕ ಬಸವರಾಜ ಪೂಜಾರ್​​ರವರ ಸಾಕು ನಾಯಿ ಮೂರು ವಷ೯ದ ಭೈರವನಿಂದ (ಡಾಬರ್ ಮ್ಯಾನ್) ರಕ್ತದಾನ ಮಾಡಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ, ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ್ದೇ ಆದ 9 ವರ್ಷದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕವಾಗಿತ್ತು. ಇದನ್ನು ಅರಿತ ವೈದ್ಯರು ನಗರದ ಮೂರು ನಾಯಿಗಳ ಮಾಲೀಕರ ವಿಳಾಸಗಳನ್ನು ಸಂಪಕಿ೯ಸಿ ಕರೆಸಿ ಅವುಗಳ ರಕ್ತದ ಸ್ಯಾಂಪಲ್​​ಗಳನ್ನು ಪರೀಕ್ಷೆಗೆ ಒಳಪಡಿಸಿದರು.

ಇದನ್ನೂ ಓದಿ: ಹೆಸರು ಬೆಳೆಗೆ ಕೀಟದ ಕಾಟ; ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಕಂಗಾಲಾದ ರೈತರು

ಮೂರು ನಾಯಿಗಳ ಸ್ಯಾಂಪಲ್​ಗಳಲ್ಲಿ ಪ್ರೊ. ಬಸವರಾಜ್ ಪೂಜಾರ್ ಅವರ 3 ವರ್ಷದ ಡಾಬರ್​ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದ್ದು ವೈದ್ಯಕೀಯ ನಿಯಮಾನುಸಾರ ಇದರ 300 ಎಮ್​ಎಲ್ ರಕ್ತವನ್ನು ಪರೀಕ್ಷಿಸಿದ ಬಳಿಕ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್​​ಗೆ ನೀಡಲಾಗಿದೆ.

ದಾನಗಳಲ್ಲಿ ರಕ್ತದಾನವೆ ಶ್ರೇಷ್ಠ ದಾನ. ಇದಕ್ಕೆ ಪ್ರಾಣಿಗಳೂ ಕೂಡ ಸಾಥ್ ಕೊಡಬಲ್ಲವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ