ಕಾರ್ಖಾನೆಗಳು ವಾಯುಮಾಲಿನ್ಯ ಕಡಿಮೆ ಮಾಡಬೇಕು: ಇಲ್ಲಾಂದ್ರೆ ಬಂದ್​​ ನಿಶ್ಚಿತ; ಶಾಸಕ ಎಚ್ಚರಿಕೆ

ಭೋಪಾಲ್ಕೊಪ್ಪಳದ ಹಿರೇಬಗನಾಳ ಗ್ರಾಮಸ್ಥರು ಕಾರ್ಖಾನೆಗಳಿಂದ ಉಂಟಾಗುತ್ತಿರುವ ಧೂಳು ಮತ್ತು ಹೊಗೆ ಮಾಲಿನ್ಯದ ಬಗ್ಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಮಾಜಿ ಸಂಸದ ಕರಡಿ ಸಂಗಣ್ಣ ಅವರ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮಹಿಳೆಯರು ಗ್ರಾಮ ಸ್ಥಳಾಂತರಕ್ಕೆ ಆಗ್ರಹಿಸಿದರೆ, ಶಾಸಕರು ಮಾಲಿನ್ಯ ನಿಯಂತ್ರಿಸುವ ಭರವಸೆ ನೀಡಿದ್ದಾರೆ.

ಕಾರ್ಖಾನೆಗಳು ವಾಯುಮಾಲಿನ್ಯ ಕಡಿಮೆ ಮಾಡಬೇಕು: ಇಲ್ಲಾಂದ್ರೆ ಬಂದ್​​ ನಿಶ್ಚಿತ; ಶಾಸಕ ಎಚ್ಚರಿಕೆ
ಹಿರೇಬಗನಾಳ ಗ್ರಾಮಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಭೇಟಿ
Image Credit source: tv9 kannada
Edited By:

Updated on: Mar 04, 2026 | 10:56 AM

ಕೊಪ್ಪಳ, ಮಾರ್ಚ್​​ 04: ಕಳೆದ ಕೆಲ ದಿನಗಳಿಂದ ಬಲ್ಡೋಟಾ ಸ್ಟೀಲ್ ಫವರ್ ಲಿಮಿಟಿಡ್ (Baldota Factory) ಹೆಸರು ಬಹಳ ಚರ್ಚೆಯಲ್ಲಿದೆ. ಜಿಲ್ಲೆಯಲ್ಲಿ ವಿಸ್ತರಣೆಯಾಗಿರುವ ಈ ಕಾರ್ಖಾನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗುತ್ತಾ ಬಂದಿದೆ. ಒಂದು ಕಡೆ ವಾಯು ಮಾಲಿನ್ಯ ಕಡಿಮೆ ಮಾಡಲು ಶಾಸಕರು, ಮಾಜಿ ಸಂಸದರು ಸಭೆ ಮಾಡಿದ್ದರೆ, ಮತ್ತೊಂದು ಕಡೆ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಘವೇಂದ್ರ ಹಿಟ್ನಾಳ್​​​, ತಂತ್ರಜ್ಞಾನ ಬಳಸಿಕೊಂಡು ವಾಯುಮಾಲಿನ್ಯ ಕಡಿಮೆ ಮಾಡಬೇಕು. ಇಲ್ಲವಾದರೆ ನೂರಕ್ಕೆ ನೂರರಷ್ಟು ಕಾರ್ಖಾನೆ ಬಂದ್ ಮಾಡಿಸೋದು ನಿಶ್ಚಿತ ಎಂದು  ಹೇಳಿದ್ದಾರೆ.

ಕೊಪ್ಪಳದಲಿಂದ ಕೂಗಳತೇ ದೂರದಲ್ಲಿರುವ ಗಿಣಗೇರಾ ಬಳಿ ಇರುವ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಹೊಗೆ ಬರುತ್ತಿದೆ. ಬೆಳಗಿನ ಸಮಯದಲ್ಲಿ ಕಾರ್ಖಾನೆಗಳಿಂದ ಹೊರ ಹೋಗುವ ಅಪಾರ ಪ್ರಮಾಣದ ಹೊಗೆಗೆ ಜನರು ರೋಸಿ ಹೋಗಿದ್ದಾರೆ. ಹೊಗೆ ಕಡಿಮೆ‌ ಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ

ಇನ್ನು ಇತ್ತೀಚಿಗೆ ಹಿರೇಬಗನಾಳ ಗ್ರಾಮಕ್ಕೆ ಹೋಗಿದ್ದ ವೇಳೆ ಧೂಳಿನ ಸಮಸ್ಯೆ ಬಗ್ಗೆ ಗ್ರಾಮದ ಯುವಕರು ಹೇಳಿಕೊಂಡಿದ್ದರು. ಈ ವೇಳೆ ಸಮಸ್ಯೆ ಆಲಿಸದೇ ಶಾಸಕ ಹಿಟ್ನಾಳ್​​ ವಾಪಸ್​ ಹೋಗಿದ್ದರು. ಈ ಬಗ್ಗೆ ಸಾಕಷ್ಟು  ವಿರೋಧ ಕೂಡ ವ್ಯಕ್ತವಾಗಿತ್ತು. ವಿರೋಧದ ಬೆನ್ನಲ್ಲೇ ಇಂದು ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಹಿಟ್ನಾಳ್, ಗ್ರಾಮದಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಇಲ್ಲಿ ನಾವು ಹೇಗೆ ಜೀವನ ಮಾಡಬೇಕು. ಗ್ರಾಮ ಸ್ಥಳಾಂತರ ಮಾಡುವಂತೆ ಗ್ರಾಮದ ಮಹಿಳೆಯ ಒತ್ತಾಯಿಸಿದ್ದಾರೆ.

ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಿಷ್ಟು

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ, ಶಾಸಕ ರಾಘವೇಂದ್ರ ಹಿಟ್ನಾಳ್​​​, ತಂತ್ರಜ್ಞಾನ ಬಳಸಿಕೊಂಡು ವಾಯುಮಾಲಿನ್ಯ ಕಡಿಮೆ ಮಾಡಬೇಕು. ಇಲ್ಲವಾದರೆ ನೂರಕ್ಕೆ ನೂರರಷ್ಟು ಕಾರ್ಖಾನೆ ಬಂದ್ ಮಾಡಿಸೋದು ನಿಶ್ಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಳೆ ಕೊಪ್ಪಳ ಬಂದ್​​ ಹಿನ್ನೆಲೆ ಖಾಸಗಿ ಶಾಲೆಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

ನಾನು ಮತ್ತೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಡಿಸಿ ಕೂಡ ಬರುತ್ತಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬರುತ್ತಾರೆ. ಕಾರ್ಖಾನೆ ಯಾರದ್ದಾದರೂ ಆಗಿರಲಿ ನಮಗೆ ಆರೋಗ್ಯ ಮುಖ್ಯ. ಮಾಲಿನ್ಯ ತಡೆ ಸಂಬಂಧ ತಜ್ಞರನ್ನ ಕರೆಸಿ ಚರ್ಚಿಸಲು ಚಿಂತನೆ ನಡೆಸಿದ್ದೇವೆ. ಮಧ್ಯಪ್ರದೇಶದ ಭೋಪಾಲ್​​ ನಗರದಲ್ಲೇ ಕಾರ್ಖಾನೆ ಇದೆ. ಅಲ್ಲಿ ಯಾವ ರೀತಿ ಕ್ರಮ ಇದೆಯೋ ಇಲ್ಲೂ ಅದೇ ರೀತಿ ಆಗಲಿ. ಕಿರ್ಲೋಸ್ಕರ್ ಕಾರ್ಖಾನೆಯಿಂದ ನಮ್ಮ ಮನೆ 2 ಕಿ.ಮೀ.ದೂರದಲ್ಲಿದೆ. ಅಲ್ಲಿ ಧೂಳು ಬರಲ್ಲ, ಆ ತರಹದ ತಂತ್ರಜ್ಞಾನ ಇಲ್ಲೂ ಬಳಸಲಿ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:53 am, Wed, 4 March 26

Follow Us