ಕಸಗುಡಿಸ್ತಿದ್ದವನ ಬಳಿ 100 ಕೋಟಿ ರೂ ಆಸ್ತಿ: ಬಗೆದಷ್ಟು ಬಯಲಾಗುತ್ತಿದೆ ಕೆಆರ್ಐಡಿಎಲ್ನ ಅಕ್ರಮ
ಕೊಪ್ಪಳದ ಕೆಆರ್ಐಡಿಎಲ್ನಲ್ಲಿ 72 ಕೋಟಿ ರೂಪಾಯಿಗಳ ಅಕ್ರಮ ನಡೆದಿರುವುದು ತನಿಖೆಯಲ್ಲಿ ಬಯಲಾಗಿದೆ. 108 ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, ಪ್ರಮುಖ ಆರೋಪಿ ಝಡ್. ಎಂ. ಚಿಂಚೋಳಿಕರ್ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಗುತ್ತಿಗೆದಾರರಿಗೂ ತೀವ್ರ ಸಂಕಷ್ಟ ಎದುರಾಗಿದೆ.

ಕೊಪ್ಪಳ, ಆಗಸ್ಟ್ 03: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRIDL) ಬಗೆದಷ್ಟು ಅಕ್ರಮ ಬಯಲಾಗುತ್ತಿದೆ. ಹೊರಗುತ್ತಿಗೆ ನೌಕರ ಬಳಿಕ ಇದೀಗ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ನಡುಕ ಶುರುವಾಗಿದೆ. ಏಕೆಂದರೆ 108 ಕಾಮಗಾರಿಗಳಲ್ಲಿ ಸುಮಾರು 72 ಕೋಟಿ ರೂ ಅಕ್ರಮ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಎ1 ಆರೋಪಿ ಝಡ್.ಎಂ ಚಿಂಚೋಳಿಕರ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಲೋಕಾಯುಕ್ತ (Lokayukta) ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳದ ಕೆಆರ್ಐಡಿಎಲ್ನಲ್ಲಿ 72 ಕೋಟಿ ರೂ ಅಕ್ರಮ ಹಿನ್ನಲೆ ಈ ಹಿಂದಿನ ಕಾರ್ಯಾಪಾಲಕ ಅಭಿಯಂತರ ಎ1 ಝಡ್ ಎಂ ಚಿಂಚೋಳಿಕರ್, ನೆಲಗೋಗಿಪುರದ ಹೊರಗುತ್ತಿಗೆ ಸಹಾಯಕ ನೌಕರ, ಸಹಾಕಯ ಅಭಿಯಂತರ ಎ2 ಕಳಕಪ್ಪ ನೀಡಗುಂದಿ, ಎ3 ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಎ4 ಇತರರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕೆಆರ್ಐಡಿಎಲ್ ದಿನಗೂಲಿ ನೌಕರನಾಗಿದ್ದವ ಇಂದು ಆಗರ್ಭ ಶ್ರೀಮಂತ: ಕೊಪ್ಪಳ, ಭಾಗ್ಯ ನಗರದಲ್ಲಿ 24 ಮನೆ!
72 ಕೋಟಿ ರೂ ಅಕ್ರಮದ ರೂವಾರಿ ಝಡ್.ಎಂ ಚಿಂಚೋಳಿಕರ್ ಒಬ್ಬರೇ ವಿವಿಧ ಹುದ್ದೆ ನಿರ್ವಹಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಆರೋಪಿ ನಂಬರ್ 1 ಝಡ್ ಎಂ ಚಿಂಚೋಳಿಕರ್ ಕೆಆರದದಐಡಿಎಲ್ ನೆಲೋಗಿಪುರ, ಕೊಪ್ಪಳ ವಿಭಾಗದ ಕಿರಿಯ ಸಹಾಯಕ ಅಭಿಯಂತರರು, ಸಹಾಯಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರು ಈ ಎಲ್ಲಾ ಹುದ್ದೆಗಳನ್ನು ನಿರ್ವಹಿಸಿರುವುದು ತನಿಖೆಯಲ್ಲಿ ಧೃಡವಾಗಿದೆ. ಹೀಗಾಗಿ ಚಿಂಚೋಳಿಕರ್ ಸೇರಿದಂತೆ ಗುತ್ತಿಗೆದಾರರಿಗೂ ಸಂಕಷ್ಟ ಶುರುವಾಗಿದೆ. ಯಾವುದೇ ಕ್ಷಣದಲ್ಲಾದರೂ ಚಿಂಚೋಳಿಕರ್ ಹಾಗೂ ಗುತ್ತಿಗೆದಾರರ ಮನೆ ಮೇಲೆ ಲೋಕಾಯುಕ್ತ ದಾಳಿಯಾಗುವ ಸಾಧ್ಯತೆ ಇದೆ.
ನೌಕರ ಕಳಕಪ್ಪ ನೀಡಗುಂದಿ ಮನೆ ಮೇಲೆ ಲೋಕಾ ದಾಳಿ
ಇತ್ತೀಚೆಗೆ ಹೊರಗುತ್ತಿಗೆ ನೌಕರ ಕಳಕಪ್ಪ ನೀಡಗುಂದಿ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು. ಮೊದಲು ಕಸ ಬಳೆಯುವ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಸೇರಿದ್ದ ಕಳಕಪ್ಪ ನೀಡಗುಂದಿ ಇಂದು ಕುಬೇರನಾಗಿದ್ದಾನೆ. ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಆಸ್ತಿ ಪತ್ತೆಯಾಗಿತ್ತು. 24 ಮನೆಗಳು 4 ನಿವೇಶನ ಮತ್ತು 40 ಎಕರೇ ಕೃಷಿ ಜಮೀನು ಹೊಂದಿದ್ದಾನೆ.
ಇದನ್ನೂ ಓದಿ: ಲೋಕಾಯುಕ್ತ ದಾಳಿ: ಕೇಜಿಗಟ್ಟಲೇ ಚಿನ್ನ-ಬೆಳ್ಳಿ, ಕಂತೆ-ಕಂತೆ ಹಣ, ಅಪಾರ ಪ್ರಮಾಣದ ಆಸ್ತಿ ಪತ್ತೆ
ಸದ್ಯ ಕಳಕಪ್ಪ ನೀಡಗುಂದಿ ಜೊತೆಗೆ ಎ1 ಆರೋಪಿ ಝಡ್.ಎಂ ಚಿಂಚೋಳಿಕರ್ ಮತ್ತು ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೂ ಲೋಕಾಯುಕ್ತ ಪೊಲೀಸರು ಹದ್ದಿಣ ಕಣ್ಣಿಟ್ಟಿದ್ದು, ಚಲನವಲನ ಗಮನಿಸಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







