Koppal: ಊರಲ್ಲಿ ಮಹಿಳೆಯರಿಂದ ಹಣ ಎತ್ತಿ, ಗಂಡನ ಜೊತೆ ಪರಾರಿಯಾದ ಚಾಲಾಕಿ ಮಹಿಳೆ

| Updated By: ಸಾಧು ಶ್ರೀನಾಥ್​

Updated on: Dec 23, 2022 | 5:56 PM

Koppal: ಕುಕನೂರು ಪಟ್ಟಣದಲ್ಲಿ ಶೋಭಾ ಎಂಬ ಚಾಲಾಕಿ ಮಹಿಳೆ ಇಡೀ ಏರಿಯಾದ ಜನರಿಗೆ ಮಕ್ಮಲ್ ಟೋಪಿ ಹಾಕಿ ಹೋಗಿದ್ದಾಳೆ. 10ಕ್ಕೂ ಹೆಚ್ಚು ಮಹಿಳಾ ಸಂಘವನ್ನ ಮಾಡಿಸಿ ಎಲ್ಲಾ ಸಂಘದ ಹೆಸರಲ್ಲಿಯೂ ಲಕ್ಷ ಲಕ್ಷ ರೂಪಾಯಿ ಸಾಲ ಲೂಟ್ ಮಾಡಿ ಪರಾರಿಯಾಗಿದ್ದಾಳೆ.

Koppal: ಊರಲ್ಲಿ ಮಹಿಳೆಯರಿಂದ ಹಣ ಎತ್ತಿ, ಗಂಡನ ಜೊತೆ ಪರಾರಿಯಾದ ಚಾಲಾಕಿ ಮಹಿಳೆ
ಊರಲ್ಲಿ ಮಹಿಳೆಯರಿಂದ ಹಣ ಎತ್ತಿ, ಗಂಡನ ಜೊತೆ ಪರಾರಿಯಾದ ಚಾಲಾಕಿ ಮಹಿಳೆ
Follow us on

ಮನೆಯಲ್ಲಿ ಹೆಣ್ಣಮಕ್ಕಳು ಕಷ್ಟ ಕಾಲಕ್ಕೆ ಅನುಕೂಲವಾಗಲೀ ಅಂತಾ ಅಷ್ಟೊ ಇಷ್ಟೊ ಹಣ ಕೂಡಿಡುವುದು ಕಾಮನ್. ಆದ್ರೆ ಈ ಹೆಣ್ಮಕ್ಕಳು ಕೂಡಿಟ್ಟಿರೋ ಹಣಕ್ಕೆ ಇಲ್ಲಸಲ್ಲದ ಆಸೆ ಹಚ್ಚಿ (money doubling) ಚಾಲಾಕಿ ಮಹಿಳೆಯೊಬ್ಬಳು ಜೂಟ್ ಹೇಳಿದ್ದಾಳೆ. ಆ ಚಾಲಕಿಯ ಮಾತು ಕೇಳಿದ ಓಣಿ ಮಂದಿಯೆಲ್ಲ ಕೈಲಿರೋ ಕಾಸಷ್ಟೆ ಅಲ್ಲದೆ ದುಡಿದ ಹಣವನ್ನೆಲ್ಲ ಸಾಲ ತುಂಬೋ ಹಾಗಾಗಿದೆ. ಆಳಿದುಳಿದ ಹಣ ಕೂಡಿಟ್ಟಿದ್ದನ್ನೆ ಕಳೆದುಕೊಂಡು ಬೀದಿಗೆ ಬಂದಿರೋ ಮಹಿಳೆಯರು… ನಮ್ಮ ಹಣಕ್ಕೆ ಗತಿಯಾರು ಅನ್ನುತ್ತಿರೋ ಮತ್ತೊಂದಿಷ್ಟು ಗೃಹಿಣಿಯರು… ಯಸ್ ಇಂತಹ ಪ್ರಸಂಗಗಳು ಕೊಪ್ಪಳ ಜಿಲ್ಲೆಯಲ್ಲಿ ಕಂಡುಬಂದಿವೆ. ಅಂದಹಾಗೇ ಊರಲ್ಲಿ ಹತ್ತಾರು ಹೆಣ್ಮಕ್ಕಳು (women) ಸೇರಿಕೊಂಡು ಒಂದೊಂದು ಸ್ವಸಹಾಯ ಸಂಘ (Stree Shakti Sangha) ಮಾಡಿಕೊಂಡು, ಕುಟುಂಬದಲ್ಲಿನ ಕಷ್ಟಕ್ಕೆ ಸಣ್ಣಪುಟ್ಟ ಆರ್ಥಿಕ ಸಹಾಯ ಮಾಡ್ಕೊಳ್ತಾರೆ. ಮನೇಲಿ ಉಳಿತಾಯ ಮಾಡಿ, 20-30 ರೂಪಾಯಿ ಉಳಿಸಿ ಎನೋ ಮಾಡುವ ಉದ್ದೇಶ ಇರುತ್ತೆ.

ಆದ್ರೆ ಇಲ್ಲೊಂದು ಕಡೆ ಇದೇ ಉದ್ದೇಶವನ್ನ ಟಾರ್ಗೆಟ್ ಮಾಡಿದ ಮಹಿಳೆಯೊಬ್ಬಳು ಒಂದೇ ಊರಲ್ಲಿ ಹತ್ತಾರು ಮಹಿಳಾ ಸಂಘಗಳನ್ನ ಮಾಡಿಸಿ, ಸದ್ಯ ಅವರೆಲ್ಲ ಬಾಯಿ ಬಾಯಿ ಬಡಿದುಕೊಳ್ಳುವ ಹಾಗೆ ಮಾಡಿದ್ದಾಳೆ. ಹೌದು ಕೊಪ್ಪಳ (Koppal) ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಶೋಭಾ ಬಾರಕೇರ್ ಎಂಬ ಚಾಲಾಕಿ ಮಹಿಳೆ ಇಡೀ ಒಂದು ಏರಿಯಾದ ಜನರಿಗೆ ಮಕ್ಮಲ್ ಟೋಪಿ ಹಾಕಿ ಹೋಗಿದ್ದಾಳೆ.

ಹತ್ತಕ್ಕೂ ಹೆಚ್ಚು ಮಹಿಳಾ ಸಂಘವನ್ನ ಮಾಡಿಸಿ ಎಲ್ಲಾ ಸಂಘದ ಹೆಸರಲ್ಲಿಯೂ ಲಕ್ಷ ಲಕ್ಷ ರೂಪಾಯಿ ಸಾಲ ಲೂಟ್ ಮಾಡಿ ಊರಿಂದ ಪರಾರಿಯಾಗಿದ್ದಾಳೆ. ಸದ್ಯ ಸಂಘದಲ್ಲಿರೋ ಮಹಿಳೆಯರಿಗೆ ಸಂಘದ ಹೆಸರಲ್ಲಿ ಸಾಲ ನೀಡಿದ ಬ್ಯಾಂಕ್, ಹಾಗೂ ಫೈನಾನ್ಸ್ ಗಳು ಸಾಲ ಮರುಪಾವತಿಗೆ ಒತ್ತಡ ಹೇರುತ್ತಿವೆ.

Also Read:

Metro Cash & Carry: 2,850 ಕೋಟಿಗೆ ರಿಲಯನ್ಸ್ ರಿಟೇಲ್ ಪಾಲಾದ ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ

ಸಂಘದ ಹೆಸರಲ್ಲಿ ಸಾಲ ನೀಡಿರೋ ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ನವರು ಪ್ರತಿ ವಾರ ಸದಸ್ಯರ ಮನೆಗೆ ಬಂದು ಹಣ ಪಾವತಿ ಮಾಡುವಂತೆ ಕೇಳ್ತಾರೆ. ಆದ್ರೆ ಸಾಲವನ್ನೇ ಪಡೆಯದ ಮಹಿಳೆಯರು ಹಣ ಎಲ್ಲಿಂದ ಕಟ್ಟಬೇಕು ಎನ್ನುವಂತಾಗಿದೆ‌. ಇನ್ನು ಈ ಶೋಭಾ ಬಾರ್ ಕೇರ್ ಹಾಗೂ ಆಕೆಯ ಪತಿ ಈರಣ್ಣ ಬಾರಕೇರ್ ಮನೆ ಕೂಡಾ ಕಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ.

ಹಣ ಕಟ್ಟಲಾಗದೆ ಈ ಏರಿಯಾದ ಹಲವು ಮಹಿಳೆಯರು ದಿನನಿತ್ಯ ಮನೆಯಲ್ಲಿ ಜಗಳ ಶುರುವಾಗಿದೆ. ಸದ್ಯ ಈ ಕಾಟಕ್ಕೆ ಬೇಸತ್ತು ಈ ಸ್ವಸಹಾಯ ಸಂಘದ ಮಹಿಳೆಯರು ಕುಕನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನ ಪಡೆದು ಪೊಲೀಸರು ಸಹ ಯಾವುದೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಮಹಿಳೆಯರು ಅಲವತ್ತುಕೊಂಡಿದ್ದಾರೆ.

ಕಷ್ಟ ಕಾಲಕ್ಕೆ ಅನುಕೂಲ ಆಗ್ಲಿ ಅಂತಾ ಮಹಿಳೆಯರು ಮಾಡಿರೋ ಉಳಿತಾಯ ಹಣವನ್ನ ಈ ಐನಾತಿ ಮಹಿಳೆ ಈ ರೀತಿ ಸಾಲದ ಹೆಸರಲ್ಲಿ ಗುಳುಂ ಮಾಡಿದ್ದಾಳೆ. ಸದ್ಯ ಮಾಡದ ಸಾಲಕ್ಕೆ ಬಡ್ಡಿ ಜೊತೆಗೆ ಅಸಲು ಕೂಡಾ ಇವರೆ ಕಟ್ಟುವಂತಾಗಿದೆ. ಹೇಗಾದ್ರು ಮಾಡಿ ಮೋಸ ಮಾಡಿದ ಶೋಭಾಳನ್ನ ಹುಡುಕಿ ಕೊಡಿ ಅಂತಾ ಪೊಲೀಸರ ಮೊರೆಹೋಗಿದ್ದಾರೆ.

ವರದಿ: ದತ್ತಾತ್ರೇಯ ಪಾಟೀಲ್, ಟಿ ವಿ 9, ಕೊಪ್ಪಳ

 

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Thu, 22 December 22