AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕನಿಗೆ ತಿಂಡಿ ಪಾರ್ಸ​​ಲ್ ಬದಲಿಗೆ 50 ಸಾವಿರ ರೂ. ಹಣವಿದ್ದ ಕವರ್ ನೀಡಿದ ಹೋಟೆಲ್ ಮಾಲೀಕ!

ಗ್ರಾಹಕನಿಗೆ ಇಡ್ಲಿ, ವಡೆ, ದೋಸೆ ಇದ್ದ ಪಾರ್ಸಲ್​ ಕವರ್​ ನೀಡುವ ಬದಲಿಗೆ ಹೋಟೆಲ್ ಮಾಲಿಕ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ್ದಾನೆ. ಪಾರ್ಸಲ್​ ತೆಗೆದುಕೊಂಡು ಹೋಗಿ ಮನೆಯಲ್ಲಿ ನೋಡಿದಾಗ ಗ್ರಾಹಕ 50 ಸಾವಿರ ರೂ. ಕಂಡಿದ್ದಾನೆ. ಮುಂದೇನಾಯ್ತು ಈ ಸ್ಟೋರಿ ಓದಿ.

ಗ್ರಾಹಕನಿಗೆ ತಿಂಡಿ ಪಾರ್ಸ​​ಲ್ ಬದಲಿಗೆ 50 ಸಾವಿರ ರೂ. ಹಣವಿದ್ದ ಕವರ್ ನೀಡಿದ ಹೋಟೆಲ್ ಮಾಲೀಕ!
ಹಣ ಮರಳಿಸಿದ ಶಿಕ್ಷಕ
ಸಂಜಯ್ಯಾ ಚಿಕ್ಕಮಠ
| Updated By: ವಿವೇಕ ಬಿರಾದಾರ|

Updated on: Jul 21, 2024 | 11:14 AM

Share

ಕೊಪ್ಪಳ, ಜುಲೈ 21: ತನ್ನದಲ್ಲದ ಹಣವನ್ನು ಹೋಟೆಲ್​ (Hotel) ಮಾಲಿಕನಿಗೆ ಮರಳಿಸುವ ಮೂಲಕ ​ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ (Kushtagi) ಪಟ್ಟಣದ ಶಿಕ್ಷಕ ಮಾದರಿಯಾಗಿದ್ದಾರೆ. ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಅಂತ ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.

ಮುಂಜಾನೆ ಕುಷ್ಟಗಿ ಪಟ್ಟಣದ ನಿವಾಸಿಯಾಗಿರುವ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್​ಗೆ ಬಂದಿದ್ದರು. ತನಗೆ ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು. ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು. ಹೀಗಾಗಿ ಶ್ರೀನಿವಾಸ ದೇಸಾಯಿ ಅವರು ಕವರ್​​ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ

ಮನೆಯಲ್ಲಿ ಮಕ್ಕಳ ಜೊತೆ ಉಪಹಾರ ಸೇವಿಸಬೇಕು ಅಂತ ಕವರ್ ಬಿಚ್ಚಿ ನೋಡಿದರೆ ಇಡ್ಲಿ, ವಡೆ, ‌ದೋಸೆ ಬದಲಾಗಿ, ಹಣವಿತ್ತು. ಹೋಟೆಲ್ ಮಾಲೀಕ ಅಚಾತುರ್ಯದಿಂದ ಹಣದ ಕವರ್ ನೀಡಿದ್ದಾನೆ ಅಂತ ತಿಳಿದ ಶಿಕ್ಷಕ ಶ್ರೀನಿವಾಸ್ ದೇಸಾಯಿ ಅವರು ಹೋಟೆಲ್ ಮಾಲೀಕನ ಬಳಿ ಹೋಗಿ ಹಣವಿದ್ದ ಕವರ್​​ ಅನ್ನು ಮರಳಿ ನೀಡಿದ್ದಾರೆ.

ಹಣವನ್ನು ಹಿಂತಿರುಗಿಸಿ ಪ್ರಮಾಣಿಕತೆ ಮೆರದಿದ್ದಾರೆ. ಶಿಕ್ಷಕನ ಪ್ರಮಾಣಿಕತೆಗೆ ಹೋಟೆಲ್ ಮಾಲೀಕ ಧನ್ಯವಾದಗಳನ್ನು ಹೇಳಿ, ನಿಮ್ಮ ಪ್ರಮಾಣಿಕತೆ ಹಲವರಿಗೆ ಮಾದರಿಯಾಗಿದೆ ಅಂತ ಅಭಿನಂದಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ