ಸಚಿವ ಶ್ರೀರಾಮುಲುರಿಂದ ಜೀರ್ಣೋದ್ಧಾರ ಕಾರ್ಯ; ಮಹಾಲಕ್ಷ್ಮಿ ದೇವಾಲಯ, ಪಂಪಾ ಸರೋವರ ಧ್ವಂಸ ಆರೋಪ
ಇದೇ ಜಾಗದಲ್ಲಿ ರಾಮ, ಶಬರಿಯನ್ನು ಹುಡಕುತ್ತಾ ಬಂದಾಗ ಆಂಜನೇಯನ ಭೇಟಿಯಾಗಿರುವ ಕುರುಹುಗಳಿವೆ. ಆದರ ಈಗ ಶಬರಿ ಕಾಯ್ದ ಶ್ರದ್ದಾ ಕೇಂದ್ರ, ಶಬರಿ ಗುಹೆಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ. ಹೀಗಾಗಿ ಪಂಪಾ ಸರೋವರ ಜೀರ್ಣೋದ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕೊಪ್ಪಳ: ಜಿಲ್ಲೆಯ ಕಿಷ್ಕಿಂದೆ ಪ್ರದೇಶ ಅಂದರೆ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಇರುವ ಪಂಪಾ ಸರೋವರ. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಂಪಾ ಸರೋವರ ಬಳಿ, ಸಾರಿಗೆ ಸಚಿವರಾದ ಶ್ರೀರಾಮುಲು ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಆದರೆ ಜೀರ್ಣೋದ್ಧಾರದ ಹೆಸರಲ್ಲಿ ಅಲ್ಲಿ ಐತಿಹಾಸಿಕ ಕುರುಹುಗಳನ್ನು ಕೆಡವಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಏಕೆಂದರೆ ಪಂಪಾ ಸರೋವರದ ಬಳಿ ಇದೀಗ ಜೀರ್ಣೋದ್ಧಾರ ಕೆಲಸ ಜೋರಾಗಿ ನಡೆಯುತ್ತಿದೆ. ಇದರ ಹೆಸರಲ್ಲಿ ಅಲ್ಲಿನ ಐತಿಹಾಸಿಕ ಕುರುಹುಗಳಿಗೆ ಧಕ್ಕೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ.
ಇದೇ ಜಾಗದಲ್ಲಿ ರಾಮ, ಶಬರಿಯನ್ನು ಹುಡಕುತ್ತಾ ಬಂದಾಗ ಆಂಜನೇಯನ ಭೇಟಿಯಾಗಿರುವ ಕುರುಹುಗಳಿವೆ. ಆದರ ಈಗ ಶಬರಿ ಕಾಯ್ದ ಶ್ರದ್ದಾ ಕೇಂದ್ರ, ಶಬರಿ ಗುಹೆಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ. ಹೀಗಾಗಿ ಪಂಪಾ ಸರೋವರ ಜೀರ್ಣೋದ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳಲ್ಲಿ ಸಾರಿಗೆ ಸಚಿವ ಶ್ರೀರಾಮಲು ಸುಮಾರು ಹತ್ತು ಸಾರಿ ಪಂಪಾ ಸರೋವರಕ್ಕೆ ಭೇಟಿ ನೀಡಿದ್ದಾರೆ. ಶ್ರೀರಾಮಲು ಸ್ವಂತ ಖರ್ಚಿನಲ್ಲಿ ಪಂಪಾ ಸರೋವರ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಆದರೆ ಜೀರ್ಣೋದ್ಧಾರ ಹೆಸರಲ್ಲಿ ರಾಮಾಯಣ ಕಾಲದ ಕುರುಹು ನಾಶ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಪಾ ಸರೋವರ ಜಾಗದಲ್ಲಿ ಜೀರ್ಣೋದ್ಧಾರಕ್ಕೆ ಪುರಾತತ್ವ ಇಲಾಖೆ ಅನುಮತಿ ನೀಡಿದೆ. ಇಲಾಖೆ ಅನುಮತಿ ನಿಡಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇಲ್ಲಿ ಒಂದು ಶೌಚಾಲಯ ಕಟ್ಟಬೇಕಂದರು ಹಂಪಿ ಪ್ರಾಧಿಕಾರದ ಅನುಮತಿ ಬೇಕು. ಪಂಪಾ ಸರೋವರ ತನ್ನದೆ ಆದ ಇತಿಹಾಸ ಹೊಂದಿದೆ. ಹೀಗಾಗಿ ಹಂಪಿ ಅಭಿವೃದ್ಧಿ ಪ್ರಾದಿಕಾರ ಇಲ್ಲಿ ಜೀರ್ಣೋದ್ಧಾರಕ್ಕೆ ಅನುಮತಿ ಕೊಡದೆ ಇದ್ದರೂ ಕೆಲಸ ಆರಂಭವಾಗಿರೋದು ರಾಜಕೀಯ ಪ್ರಭಾವ ಎನ್ನಲಾಗುತ್ತಿದೆ.
ರಾಮಾಯಾಣ ಕಾಲದ ಅನೇಕ ಕುರುಹುಗಳು ಇಂದಿಗೂ ಇಲ್ಲಿ ನಾವು ಕಾಣಬಹುದು. ಇದೇ ಕಿಷ್ಕಿಂದೆ ಪ್ರದೇಶದಲ್ಲಿ ಆಂಜನೇಯ ಜನಿಸಿದ ಎನ್ನುವ ಪ್ರತೀತಿ ಇದೆ. ಸದ್ಯ ಪಂಪಾ ಸರೋವರದಲ್ಲಿ ಕೆಲಸ ನಡೆಯುತ್ತಿರುವುದು ನೋಡಿದರೆ, ರಾಮ ಆಂಜನೇಯ ಭೇಟಿಯಾದ ಕುರುಹು ಶಿಘ್ರವೇ ನೆಲಸಮವಾಗೋದರಲ್ಲಿ ಅಚ್ಚರಿ ಇಲ್ಲ. ಇನ್ನು ಇದರ ಹಿಂದೆ ರಾಜಕೀಯ ಇದೆ ಎನ್ನುವ ಅನುಮಾನಗಳು ದಟ್ಟವಾಗಿದೆ. ಏಕೆಂದರೆ ಮುಂದಿನ ವಿಧಾನಸಭೆ ಚುನಾವಣೆಗೆ ಬಳ್ಳಾರಿ ಪ್ರಮುಖ ರಾಜಕಾರಣಿಯೊಬ್ಬರು ಗಂಗಾವತಿ ಇಂದ ಸ್ಪರ್ಧೆ ಮಾಡಲು ಬಯಸಿದ್ದಾರೆ. ಹೀಗಾಗಿ ರಾಮುಲು ಸ್ವಂತ ಹಣದಿಂದ ಜೀರ್ಣೋದ್ಧಾರ ಮಾಡ್ತೀದಾರೆ ಎನ್ನಲಾಗಿದೆ. ಸ್ವಂತ ಹಣದಲ್ಲಿ ಜೀರ್ಣೋದ್ಧಾರ ಮಾಡೋದು ಸರಿ ಆದರೆ ಜೀರ್ಣೋದ್ಧಾರ ಹೆಸರಲ್ಲಿ ಐತಿಹಾಸಿಕ ಕುರುಹು ನೆಲಸಮ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ಶಿವಕುಮಾರ್ ಪತ್ತಾರ್
ಇದನ್ನೂ ಓದಿ:
ಮಂಗಳೂರಿನಲ್ಲಿ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣ; ಎಂಟು ಆರೋಪಿಗಳು ಅರೆಸ್ಟ್
Gandhi Statue: ಮೆಲ್ಬೋರ್ನ್ನಲ್ಲಿ ಭಾರತದಿಂದ ಉಡುಗೊರೆಯಾಗಿ ನೀಡಲಾಗಿದ್ದ ಗಾಂಧಿ ಪ್ರತಿಮೆ ಧ್ವಂಸ