ಹನುಮ ಜನ್ಮ ಭೂಮಿಯಲ್ಲಿ ಭಾವೈಕ್ಯತೆಯ ಮೆರಗು; ಕೇಸರಿ ಬಟ್ಟೆ ತೊಟ್ಟು ಹನುಮ ಮಾಲೆ ಧರಿಸಿ ವ್ರತ ಆಚರಿಸಿದ ಮುಸ್ಲಿಂ ವ್ಯಕ್ತಿ ಅಸ್ಲಂ
ಹಿರೇಬೊಮ್ಮನಾಳದಲ್ಲಿಯ ಅಸ್ಲಂ ವಾಲಿಕಾರ ಎಂಬುವವರು ಹನುಮ ಮಾಲೆ ಧರಿಸಿದ್ದಾರೆ. ಅಸ್ಲಂ ಚಳ್ಳಾರಿಯ ವಲಯದ ವಾಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಸ್ಲಂ ವಾಲಕಾರ ವಿಕಲಚೇತನರಾಗಿದ್ದು. ತಮ್ಮ ಸ್ನೇಹಿತರೊಂದಿಗೆ ಹನುಮ ಮಾಲೆ ಧರಿಸಿದ್ದಾರೆ.
ಕೊಪ್ಪಳ: ಆತ ಹುಟ್ಟಿದ್ದು ಮುಸ್ಲಿಂ ಆಗಿ. ಆದರೆ ಆತನಿಗೆ ರಾಮಭಂಟನ ಬಗ್ಗೆ ಆಪಾರ ಭಕ್ತಿ. ಎಲ್ಲಾ ಧರ್ಮದ ಸಾರವು ಒಂದೇ. ದೇವರ ನಾಮಸ್ಮರಣೆಗೆ ಧರ್ಮಲೇಪನ ಬೇಡ ಎಂದು ಮುಸ್ಲಿಂ ವ್ಯಕ್ತಿಯೊಬ್ಬ ಹನುಮ ಮಾಲೆ ಧಾರಣೆ ಮಾಡಿದ್ದಾರೆ. 11 ದಿನ ಹನುಮ ಮಾಲೆ ಧರಿಸಿ ಹನುಮನ ಪೂಜೆ ಮಾಡಿದ್ದಾರೆ. ರಾಜ್ಯದಲ್ಲಿ ದೇವಸ್ಥಾನದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಹೀಗೆ ಹಲವಾರು ವಿವಾದಗಳೆದ್ದಿವೆ. ಇಂಥ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಹಿರೇಬೊಮ್ಮನಾಳದಲ್ಲಿ ಮುಸ್ಲಿಂ ಯುವಕನೊಬ್ಬ ಹನುಮ ಮಾಲೆ ಧರಿಸಿದ್ದಾರೆ.
ಹಿರೇಬೊಮ್ಮನಾಳದಲ್ಲಿಯ ಅಸ್ಲಂ ವಾಲಿಕಾರ ಎಂಬುವವರು ಹನುಮ ಮಾಲೆ ಧರಿಸಿದ್ದಾರೆ. ಅಸ್ಲಂ ಚಳ್ಳಾರಿಯ ವಲಯದ ವಾಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಸ್ಲಂ ವಾಲಕಾರ ವಿಕಲಚೇತನರಾಗಿದ್ದು. ತಮ್ಮ ಗ್ರಾಮದಲ್ಲಿ ಆತನ ಸ್ನೇಹಿತರು ಹನುಮ ಮಾಲೆ ಧರಿಸಿದ್ದಾರೆ. ಅವರೊಂದಿಗೆ ತಾನು ಹನುಮ ಮಾಲೆ ಧರಿಸಿದ್ದಾರೆ. ಹಿರೇಬೊಮ್ಮನಾಳದಲ್ಲಿ ಕಳೆದ ಐದು ವರ್ಷದಿಂದ ಯುವಕರು ಹನುಮ ಮಾಲೆ ಧರಿಸುತ್ತಿದ್ದಾರೆ. ಇದೇ ಸಮಯದಲ್ಲಿ ಈ ವರ್ಷ ಅಸ್ಲಂ ವಾಲಿಕಾರ ಹನುಮ ಮಾಲೆಧಾರಿಯಾಗಿದ್ದಾರೆ. ಹಿಂದೂಗಳಂತೆ ಹನುಮ ಮಾಲೆ ಧಾರಣೆ ಮಾಡಿದ ಅವರು ಕೇಸರಿ ಉಡುಪು, ಹನುಮನ ಮೂರ್ತಿ, ಗಂಧ ಸೇರಿದಂತೆ ಅಸ್ಲಂ ನಿತ್ಯ ಭಕ್ತಿಯಿಂದ ಹನುಮನ ಪೂಜೆ ಮಾಡುತ್ತಿದ್ದಾರೆ.
ಹನುಮನ ಜನ್ಮ ಸ್ಥಳವಾಗಿರುವ ಅಂಜನಾದ್ರಿಯಲ್ಲಿ ಶನಿವಾರ ಹನುಮ ಜಯಂತಿ ಆಚರಣೆ ಇದೆ. ಈ ಸಂದರ್ಭದಲ್ಲಿ ಆಂಜನೇಯನಿಗಾಗಿ ಮಾಲೆ ಧರಿಸಿ ವ್ರತ ಆಚರಣೆ ಮಾಡುತ್ತಾರೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಕೆಲವರು 48 ದಿನ, ಕೆಲವರು 30 ದಿನ, 11 ದಿನ 5 ದಿನಗಳವರೆಗೂ ಹನುಮ ಮಾಲೆ ಧರಿಸಿ ವ್ರತ ಆಚರಿಸುತ್ತಾರೆ. ಇದರಂತೆ ಜಾತಿ, ಧರ್ಮಾತೀತವಾಗಿ ಹನುಮನ ಜಪ ಮಾಡುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಹಿರೇಬೊಮ್ಮನಾಳದ ಅಸ್ಲಂ ವಾಲಿಕಾರ ಭಕ್ತಿಯಿಂದ ಹನುಮ ಮಾಲೆ ಧರಿಸಿದ್ದಾರೆ. ತಾವು ಹನುಮ ಮಾಲೆ ಧರಿಸಿದಾಗ ಕುಟುಂಬದವರು ಸಹಕರಿಸಿದ್ದಾರೆ. ಎಲ್ಲರೂ ಒಂದೇ ಧರ್ಮ ಯಾವುದೇ ಆಗಿರಲಿ ಎಲ್ಲರ ಆರಾಧನೆ ಮುಖ್ಯ ಎಂದರು. ಅಸ್ಲಂ ಮುಸ್ಲಿಂ ಆಗಿದ್ದರೂ ಯಾವುದೇ ಬೇಧವಿಲ್ಲದೆ ಎಲ್ಲರೊಂದಿಗೆ ಸೇರಿ ಹನುಮನ ಪೂಜೆ ಮಾಡುತ್ತಿದ್ದಾರೆ. ಸೂಫಿ ಶರಣರ ನಾಡಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಭಾವೈಕ್ಯತೆಗೆ ಇಂಥ ಘಟನೆಗಳು ಸಾಕ್ಷಿಯಾಗಿವೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ ಮುಸ್ಲಿಂ ಹುಡುಗರು ಅರೆಸ್ಟ್; ಅವರಿಗೇನೂ ಗೊತ್ತಿಲ್ಲ ಬಿಟ್ಬಿಡಿ ಎಂದ ತಾಯಿ
Published On - 8:39 am, Sat, 16 April 22