ಕ್ರಿಶ್ಚಿಯನ್ ಮತಾಂತರಿಗಳನ್ನು ಹದ್ದುಬಸ್ತಿನಲ್ಲಿಡಬೇಕು: ಪ್ರಮೋದ್ ಮುತಾಲಿಕ್
ನಾಗಾಭೂಮಿ ಇದ್ದಿದ್ದು, ನಾಗಾಲ್ಯಾಂಡ್ ಆಯ್ತು. ಅದೇ ರೀತಿ ಭಾರತದಲ್ಲಿ ಮತಾಂತರ ಆದರೆ ಭಾರತ ಲ್ಯಾಂಡ್ ಆಗಬಹುದು ಎಂದು ಸಹ ಅವರು ಆರೋಪಿಸಿದ್ದಾರೆ.
ಕೊಪ್ಪಳ: ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಮತಾಂತರ ನಡೆಯುತ್ತಿದೆ. ಕ್ರಿಶ್ಚಿಯನ್ ಮತಾಂತರಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ದಾವಣಗೆರೆಯಲ್ಲಿ ಒಂದುವರೆ ಲಕ್ಷ ಜನ ಲಿಂಗಾಯತರು ಮತಾಂತರವಾಗಿದ್ದಾರೆ. ಕೋಲಾರದಲ್ಲಿ 50 ಸಾವಿರ ಒಕ್ಕಲಿಗರು ಮತಾಂತರವಾಗಿದ್ದಾರೆ. ಬ್ರಾಹ್ಮಣರೂ ಕೂಡಾ ಮತಾಂತರವಾಗುತ್ತಿದ್ದಾರೆ. ಎಲ್ಲ ಜಾತಿಗಳನ್ನು ಮತಾಂತರ ಮಾಡುವ ವ್ಯವಸ್ಥಿತ ಷಡ್ಯಂತ್ರ ಮತ್ತು ಕುತಂತ್ರ ನಡೆಯತ್ತಿದೆ ಎಂದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ರಾಜ್ಯದ ಎಲ್ಲ ಶಾಸಕರು ಮತಾಂತರ ಪಿಡುಗಿನ ಬಗ್ಗೆ ಕಾನೂನು ತರಬೇಕಿದೆ. ಮತಾಂತರ ನಿಮ್ಮ ಮನೆ ಒಳಗೆ ಪ್ರವೇಶ ಮಾಡುವ ಮುನ್ನ ಮತಾಂತರ ನಿಷೇಧದ ಕಾನೂನು ತರಬೇಕಿದೆ. ನಾಗಾಭೂಮಿ ಇದ್ದಿದ್ದು, ನಾಗಾಲ್ಯಾಂಡ್ ಆಯ್ತು. ಅದೇ ರೀತಿ ಭಾರತದಲ್ಲಿ ಮತಾಂತರ ಆದರೆ ಭಾರತ ಲ್ಯಾಂಡ್ ಆಗಬಹುದು ಎಂದು ಸಹ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:
ಮತಾಂತರ ವಿಚಾರ: ಬೇರೆ ರಾಜ್ಯಗಳ ಕಾಯ್ದೆ ಪರಿಶೀಲನೆ ಮಾಡಿ ರಾಜ್ಯದಲ್ಲೂ ಕಾಯ್ದೆ ಜಾರಿ- ಆರಗ ಜ್ಞಾನೇಂದ್ರ
ಹಾಸನದಲ್ಲಿ ಮತಾಂತರಕ್ಕೆ ಯತ್ನ ಆರೋಪ; ಹಿಂದೂಪರ ಸಂಘಟನೆಗಳಿಂದ ತರಾಟೆ; ಕೇಸ್ ದಾಖಲು
(Pramod Muthalik warns about Christian conversion Karnataka0