ಕೊಪ್ಪಳದಲ್ಲಿ ಹೈಡ್ರಾಮಾ: ಕೇಂದ್ರ ಸಚಿವರತ್ತಲೇ ಕುರ್ಚಿ ತೂರಿದ ‘ಕೈ’ ಕಾರ್ಯಕರ್ತರು!

ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದೆ. ಶಿಷ್ಟಾಚಾರ ಉಲ್ಲಂಘನೆ ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ವಿ. ಸೋಮಣ್ಣ ಎದುರೇ ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 27 ಕೋಟಿ ರೂ. ವೆಚ್ಚದ ಈ ಕಾಮಗಾರಿಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣದಲ್ಲಿ ನಡೆಯಲಿದೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳದಲ್ಲಿ ಹೈಡ್ರಾಮಾ: ಕೇಂದ್ರ ಸಚಿವರತ್ತಲೇ ಕುರ್ಚಿ ತೂರಿದ ಕೈ ಕಾರ್ಯಕರ್ತರು!
ಶಿಲಾನ್ಯಾಸ ಕಅರ್ಯಕ್ರಮದ ವೇಳೆ ಕುರ್ಚಿ ತೂರಾಟ
Edited By:

Updated on: Jan 05, 2026 | 2:58 PM

ಕೊಪ್ಪಳ, ಜನವರಿ 05: ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲನ್ಯಾಸ ಕಾರ್ಯಕ್ರಮದ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಕೇಂದ್ರ ಸಚಿವ ಸೋಮಣ್ಣ ಎದುರೇ ಕಾಂಗ್ರೆಸ್​​ ಕಾರ್ಯಕರ್ತರು ರೋಶಾವೇಷ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮದ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರ ಹೆಸರಿಲ್ಲದಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕುರ್ಚಿ ಎಸೆದು ರಂಪಾಟ ನಡೆಸಿದ್ದಾರೆ. ಈ ಹಿನ್ನೆಲೆ ಕೇವಲ 5 ನಿಮಿಷಗಳಕಾಲ ಸ್ಥಳದಲ್ಲಿದ್ದು, ಬಳಿಕ ವಿ. ಸೋಮಣ್ಣ ತೆರಳಿದ್ದಾರೆ.

ಸೋಮಣ್ಣ ಮೇಲೂ ಕುರ್ಚಿ ತೂರಾಟ


ಉದ್ರಿಕ್ತ ಕಾಂಗ್ರೆಸ್​​ ಕಾರ್ಯಕರ್ತರು ಕೇಂದ್ರ ಸಚಿವ ಸೋಮಣ್ಣ ಅವರತ್ತಲೂ ಕುರ್ಚಿ ತೂರಿದ್ದಾರೆ. ಶಂಕು ಸ್ಥಾಪನೆ ಮುಗಿಸಿ ಅವರು ಹೊರಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಈ ವೇಳೆ ಅಂಗರಕ್ಷಕರು ಸೋಮಣ್ಣರತ್ತ ಬರುತ್ತಿದ್ದ ಕುರ್ಚಿಗಳನ್ನ ತಡೆದಿದ್ದಾರೆ. ಇದರಿಂದ ಸಂಭವನೀಯ ಅನಾಹುತ ತಪ್ಪಿದೆ.

ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ

ಘಟನೆ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಸೋಮಣ್ಣ, ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಆದರೂ ಕಾರ್ಯಕರ್ತರ ಮೂಲಕ ಗಲಾಟೆ ಮಾಡಿಸಿದ್ದಾರೆ. ಸುಮಾರು 27 ಕೋಟಿ. ರೂಪಾಯಿ ವೆಚ್ಚದ ಹಿಟ್ನಾಳ್, ಮುನಿರಾಬಾದ್, ಗಿಣಗೇರಾ ಮೇಲ್ಸೇತುವೆ ಕಾಮಗಾರಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:49 pm, Mon, 5 January 26