ಕೊಪ್ಪಳದಲ್ಲಿ ಕಾಮಗಾರಿಗಾಗಿ ಅಗೆದ ಗುಂಡಿಯಲ್ಲಿ ಬಿದ್ದು ಬಾಲಕಿ ಸಾವು ಪ್ರಕರಣ; ಗುಂಡಿಯಲ್ಲಿ ಬಿಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಭೂಮಿಕಾ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಹುಡುಕಾಡಿದ್ದರು. ಎಲ್ಲೂ ಸಿಗದ ಹಿನ್ನೆಲೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ನಿನ್ನೆ ಸಂಜೆ ಹೊತ್ತಿಗೆ ಮೃತದೇಹ ಸಿಕ್ಕಿದೆ.
ಕೊಪ್ಪಳ: ಕಾಮಗಾರಿಗಾಗಿ ಅಗೆದ ಗುಂಡಿಯಲ್ಲಿ ಬಿದ್ದು ಬಾಲಕಿ (Girl) ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿ ಗುಂಡಿಯಲ್ಲಿ ಬಿಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ (CC Tv) ಸೆರೆಯಾಗಿದೆ. ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರುವ KS ಆಸ್ಪತ್ರೆ ಬಳಿ ಬಾಲಕಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಳು. 15 ವರ್ಷದ ಭೂಮಿಕಾ ಮೃತ ಬಾಲಕಿ. ಅಂಗಡಿಗೆ ಹೋಗಿ ಮನೆಗೆ ವಾಪಸ್ ಹೋಗಬೇಕಾದರೆ ಈ ಘಟನೆ ನಡೆದಿತ್ತು. ಮಂಗಳವಾರ ಸಂಜೆ ಗುಂಡಿಗೆ ಬಿದ್ದಿದ್ದ ಬಾಲಕಿಯ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿತ್ತು.
ಭೂಮಿಕಾ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಹುಡುಕಾಡಿದ್ದರು. ಎಲ್ಲೂ ಸಿಗದ ಹಿನ್ನೆಲೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ನಿನ್ನೆ ಸಂಜೆ ಹೊತ್ತಿಗೆ ಮೃತದೇಹ ಸಿಕ್ಕಿದೆ. ಮಾಲೀಕರು ಕಟ್ಟಡ ಕಾಮಾಗಾರಿಗೆ ಅಗೆದ ಗುಂಡಿಯನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು. ನಿರಂಜನ್ ಎಂಟರ್ ಪ್ರೈಸಸ್ ಎನ್ನುವರಿಗೆ ಸೇರಿದ ಜಾಗ ಇದಾಗಿದೆ. ಕೆಎಸ್ ಆಸ್ಪತ್ರೆ ಹಾಗೂ ಜಾಗದ ಮಾಲೀಕರ ವಿರುದ್ಧ ಕೇಸ್ ದಾಖಲಿಸಬೇಕು ಅಂತ ಪೋಷಕರು ಆಗ್ರಹಿಸಿದ್ದಾರೆ.
ಇನ್ನು CC ಕ್ಯಾಮೆರಾ ತೋರಸಿ ಎಂದರೂ ಕೆಎಸ್ ಆಸ್ಪತ್ರೆ ನಿರ್ಲಕ್ಷ್ಯ ವಹಿಸಿದೆ. ಭೂಮಿಕಾ ತಂದೆ ಪಾನ್ ಶಾಪ್ ನಡೆಸಿ ಜೀವನ ಮಾಡುತ್ತಿದ್ದರು. ಪಾನ್ ಶಾಪ್ಗೆ ಬಂದು ಮನೆಗೆ ಹೋಗುವಾಗ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಇದ್ದ ಒಬ್ಬ ಮಗಳನ್ನ ಕಳೆದುಕೊಂಡು ಪೋಷಕರುಕಣ್ಣೀರು ಹಾಕುತ್ತಿದ್ದಾರೆ.
ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ: ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 29 ವರ್ಷದ ರಘುನಂದನ್ ಮೃತ ದುರ್ದೈವಿ. ಕೈ ಸಾಲ ಮಾಡಿಕೊಂಡಿದ್ದ ರಘುನಂದನ್ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ
ಭಾರತಕ್ಕೆ ಶ್ರೀಲಂಕಾ ವಲಸಿಗರ ಪ್ರವೇಶ ತಡೆಯಲು ಕ್ರಮ: ಎರಡೂ ದೇಶಗಳ ನೌಕಾಪಡೆಗಳಿಂದ ಗಸ್ತು
ತೀರ್ಥಹಳ್ಳಿಯಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ಯತ್ನ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್!
Published On - 8:24 am, Thu, 12 May 22