Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಗೂಡು ಕಟ್ಟದ ರೇಷ್ಮೆ ಹುಳುಗಳು; ಆತಂಕದಲ್ಲಿ ರೇಷ್ಮೆ ಬೆಳೆಗಾರರು

ಹೊಸಳ್ಳಿ ಗ್ರಾಮವು ಕೊಪ್ಪಳ ಜಿಲ್ಲೆಯಲ್ಲಿಯೇ ರೇಷ್ಮೆ ಬೆಳೆಯಲು ಸುಪ್ರಸಿದ್ದ ಗ್ರಾಮವಾಗಿದೆ. ಹೊಸಳ್ಳಿ ಗ್ರಾಮದಲ್ಲಿಯೇ ಇಪ್ಪತ್ತೈದಕ್ಕೂ ಹೆಚ್ಚು ರೈತರು ನೂರಾರು ಎಕರೆ ಪ್ರದೇಶದಲ್ಲಿ ರೇಷ್ಮೆ ಬೇಸಾಯ ಮಾಡುತ್ತಿದ್ದಾರೆ. ಕಳೆದ ಒಂದು ದಶಕದಿಂದ ರೇಷ್ಮೆ ಬೇಸಾಯ ಮಾಡುತ್ತಿದ್ದ ರೈತರು, ರೇಷ್ಮೆಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ, ಇದೇ ಹೊಸಳ್ಳಿ ಗ್ರಾಮದ ರೈತರು ಇದೀಗ ರೇಷ್ಮೆಯಿಂದ ಶಾಕ್ ಆಗಿದ್ದಾರೆ.

ಕೊಪ್ಪಳ: ಗೂಡು ಕಟ್ಟದ ರೇಷ್ಮೆ ಹುಳುಗಳು; ಆತಂಕದಲ್ಲಿ ರೇಷ್ಮೆ ಬೆಳೆಗಾರರು
ರೇಷ್ಮೆ ಬೆಳೆಗಾರರು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 05, 2023 | 6:46 PM

ಕೊಪ್ಪಳ, ಡಿ.05: ಜಿಲ್ಲೆಯ ಯಲಬುರ್ಗಾ(Yalaburga) ತಾಲೂಕಿನ ಹೊಸಳ್ಳಿ ಗ್ರಾಮದ ಹೆಚ್ಚಿನ ರೈತರು ದಶಕದಿಂದ ರೇಷ್ಮೆ ಬೆಳೆಯುತ್ತಿದ್ದು, ರೇಷ್ಮೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ರೇಷ್ಮೆ(Silk)ನ್ನೇ ನಂಬಿ ಬದುಕು ನಡೆಸುತ್ತಿದ್ದ ರೈತರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹಿಪ್ಪುನೆರಳೆ ಸೊಪ್ಪು ಬೆಳದಿದ್ದಾರೆ. ರೇಷ್ಮೆ ಹುಳುಗಳನ್ನು ಖರೀದಿಸಿ ತಂದು ಅವುಗಳಿಗೆ ಆಹಾರ ನೀಡಿದ್ದಾರೆ. ಆದ್ರೆ, ಗೂಡು ಕಟ್ಟುವ ಮುನ್ನವೇ ರೇಷ್ಮೆ ಹುಳುಗಳು ಸಾಯುತ್ತಿವೆ. ಇದು ರೇಷ್ಮೆ ಬೆಳೆಗಾರರನ್ನು ಸಂಕಷ್ಟಕ್ಕೆ ಈಡುಮಾಡಿದೆ. ತಮ್ಮ ಸಂಕಷ್ಟಕ್ಕೆ ರೇಷ್ಮೆ ಮೊಟ್ಟೆಗಳ ಗೋಲ್ಮಾಲ್ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ.

ಗೂಡು ಕಟ್ಟದ ರೇಷ್ಮೆ ಹುಳುಗಳು

ಹೊಸಳ್ಳಿ ಗ್ರಾಮದಲ್ಲಿ ಈ ಬಾರಿ ರೇಷ್ಮೆ ಬೆಳೆಗಾರರು ತಂದಿರುವ ಹುಳುಗಳು ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ. ಹೊಸಳ್ಳಿ ಗ್ರಾಮದ ರೈತರು ಕುಷ್ಟಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಗುವ ರೇಷ್ಮೆ ಹುಳುಗಳನ್ನು ತಂದು, ಅವುಗಳಿಗೆ ಆಹಾರ ನೀಡಿ, ಅವು ಗೂಡು ಕಟ್ಟಿದ ನಂತರ ರಾಮನಗರ ಸೇರಿದಂತೆ ಅನೇಕ ಕಡೆ ಮಾರಾಟ ಮಾಡುತ್ತಾರೆ. ಆದ್ರೆ, ಈ ಬಾರಿ ತಂದಿರುವ ಹುಳುಗಳು ರೇಷ್ಮೆ ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ. ಇದು ರೇಷ್ಮೆ ಬೆಳೆಗಾರರ ಆತಂಕವನ್ನು ಹೆಚ್ಚಿಸಿದೆ. ಮೊಟ್ಟೆಯಿಂದ ಹೊರಬಂದ ಹುಳುಗಳು ಇಪ್ಪತ್ತು ದಿನಗಳ ವರಗೆ ಇರುತ್ತವೆ. ನಂತರ ಅವುಗಳು ಗೂಡು ಕಟ್ಟಲು ಆರಂಭ ಮಾಡುತ್ತವೆ. ಆದ್ರೆ, ಇದೀಗ ಮೊಟ್ಟೆಯಿಂದ ಹೊರಬಂದ ಹುಳುಗಳು ಇಪ್ಪತ್ತೈದು ದಿನಗಳು ಕಳೆದ್ರು ಕೂಡ ಗೂಡು ಕಟ್ಟುತ್ತಿಲ್ಲ.

ಇದನ್ನೂ ಓದಿ:ಶಿಡ್ಲಘಟ್ಟದಲ್ಲಿ 185 ಕೋಟಿ ರೂ. ವೆಚ್ಚದ ಸರ್ಕಾರಿ ಹೈಟೆಕ್ ರೇಷ್ಮೆ ಮಾರ್ಕೆಟ್ ನಿರ್ಮಾಣ: ಸಚಿವ ಕೆ ವೆಂಕಟೇಶ್

ಗೂಡು ಕಟ್ಟುವ ಮುನ್ನವೇ ಸಾಯುತ್ತಿರುವ ಹುಳುಗಳು

ಗೂಡು ಕಟ್ಟುವ ಮುನ್ನವೇ ಅನೇಕ ಹುಳುಗಳು ಸಾಯುತ್ತಿವೆ. ಇನ್ನು ಹದಿನೈದು ದಿನಗಳ ಕಾಲ ರೇಷ್ಮೆ ಹುಳುಗಳಿಗೆ ರೈತರು ಹಿಪ್ಪುನೆರಳೆ ಸೊಪ್ಪನ್ನು ಆಹಾರವಾಗಿ ನೀಡಿದ್ದಾರೆ. ಅವುಗಳನ್ನು ಮಕ್ಕಳಂತೆ ನೋಡಿಕೊಂಡಿದ್ದಾರೆ. ಆದ್ರೆ, ಇದೀಗ ಹುಳುಗಳು ಗೂಡು ಕಟ್ಟದೇ ಇರೋದರಿಂದ ಆತಂಕಕ್ಕೊಳಗಾಗಿದ್ದಾರೆ. ಯಾಕೆಂದರೆ ಪ್ರಮುಖ ಆದಾಯದ ಬೆಳೆ ಹಾಳಾದರೆ ತಮ್ಮ ಬದುಕು ಮೂರಾಬಟ್ಟಿಯಾಗುತ್ತೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ. ಓರ್ವ ರೈತ ಎರಡೇ ಎಕರೆ ಪ್ರದೇಶದಲ್ಲಿ ಹಿಪ್ಪು ನೆರಳೆ ಬೆಳದಿದ್ರೆ, ಪ್ರತಿ ತಿಂಗಳಿಗೆ ಕನಿಷ್ಟ ಒಂದು ಕ್ವಿಂಟಲ್ ರೇಷ್ಮೆ ಗೂಡು ಸಿಗುತ್ತಂತೆ. ಪ್ರತಿ ಕಿಲೋ ಗೆ ಐನೂರು ರೂಪಾಯಿ ಮಾರಾಟವಾದ್ರು ಕೂಡ ಐವತ್ತು ಸಾವಿರ ಹಣ ಸಿಗುತ್ತಿತ್ತು. ಖರ್ಚು ಕಳೆದ್ರು ಕೂಡ ನಲವತ್ತು ಸಾವಿರ ಹಣ ಉಳಿಯುತ್ತಿತ್ತು. ಆದ್ರೆ, ಈ ಬಾರಿ ಮಾಡಿದ ಖರ್ಚು ಇಲ್ಲ, ಲಾಭವು ಇಲ್ಲ ಎಂದು ರೈತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಮೊಟ್ಟೆಗಳ ಗೋಲ್ಮಾಲ್ ಅಂತಿರೋ ರೈತರು

ಇನ್ನು ಹುಳುಗಳು ಗೂಡು ಕಟ್ಟದೇ ಇರೋದಕ್ಕೆ ಮೊಟ್ಟೆಗಳ ಗೋಲ್ಮಾಲ್ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಮೊಟ್ಟೆಗಳನ್ನು ತಂದು, ಅವುಗಳನ್ನು ಮರಿ ಮಾಡುವ ಕೆಲಸ ನಿರ್ವಹಿಸುವ ಜನ, ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ತರದೆ, ಹಣದಾಸೆಗಾಗಿ ಕಳಪೆ ಮೊಟ್ಟೆಗಳನ್ನು ತಂದು, ಮರಿ ಮಾಡಿ ಅವುಗಳನ್ನು ರೈತರಿಗೆ ನೀಡುತ್ತಿದ್ದಾರೆ. ಹೀಗಾಗಿ ಹುಳುಗಳು ಗೂಡು ಕಟ್ಟುತ್ತಿಲ್ಲವೆಂದು ರೈತರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ರೇಷ್ಮೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಕೂಡ ತಂದಿದ್ದೇವೆ. ಆದ್ರೆ, ಅವರು ಪುಡ್ ಪಾಯ್ಸನ್ ಅಂತ ಹೇಳ್ತಿದ್ದಾರೆ. ಹಾಗಂತ ಯಾವುದೇ ಹುಳುಗಳನ್ನು ತಗೆದುಕೊಂಡು ಹೋಗಿ ಪರೀಕ್ಷೆ ಮಾಡಿಲ್ಲಾ. ಬದಲಾಗಿ ಸುಮ್ಮನೇ ಹೇಳುತ್ತಿದ್ದಾರೆ. ರೇಷ್ಮೆ ಹುಳುಗಳನ್ನು ನೀಡೋರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು. ನಮಗೆ ಪರಿಹಾರ ನೀಡಬೇಕು ಎಂದು ರೈತ ಈಶ್ವರಗೌಡ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಭಾರತದ ವಿವಿಧ ರಾಜ್ಯಗಳ ರೇಷ್ಮೆ ಸೀರೆಗಳ ವಿವರ ಇಲ್ಲಿದೆ

ಗೂಡು ಕಟ್ಟದೆ ಇರೋದಕ್ಕೆ ಬೇರೆ ಕಾರಣ ಹೇಳ್ತಿರೋ ರೇಷ್ಮೆ ಅಧಿಕಾರಿಗಳು

ಇತ್ತ ರೈತರು ದಶಕದಿಂದ ರೇಷ್ಮೆ ಬೆಳೆಯನ್ನು ಬೆಳೆಯಲು ಪರಿಣಿತಿ ಹೊಂದಿದ್ದಾರೆ. ಆದ್ರೆ, ಈ ಬಾರಿ ಹುಳುಗಳು ಗೂಡು ಕಟ್ಟದೇ ಇರಲು ಕಳಪೆ ರೇಷ್ಮೆ ಹುಳುಗಳ ಮೊಟ್ಟೆ ಅಂತಿದ್ದಾರೆ. ಆದ್ರೆ, ರೇಷ್ಮೆ ಇಲಾಖೆಯ ಅಧಿಕಾರಿಗಳು ಮಾತ್ರ ಬೇರೆ ರೀತಿಯ ಕಾರಣಗಳನ್ನು ಹೇಳುತ್ತಿದ್ದಾರೆ. ವಾತಾವರಣದಲ್ಲಿ ಬದಲಾವಣೆ ಮತ್ತು ರೇಷ್ಮೆಗೆ ಬೇಕಾಗಿರುವ ಹಿಪ್ಪು ನೆರಳೆ ಸೊಪ್ಪಿಗೆ ಕೆಲ ಕೆಮಿಕಲ್​ಗಳ ಬಳಕೆ ಮಾಡುತ್ತಿರುವುದು ಕಾರಣ ಅಂತಿದ್ದಾರೆ. ಜೊತೆಗೆ ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಸಾಕಷ್ಟು ಕೆಮಿಕಲ್​ಗಳ ಬಳಕೆ ಮಾಡುತ್ತಿದ್ದಾರೆ. ಅದು ಗಾಳಿಯ ಮೂಲಕ ಹಿಪ್ಪು ನೆರಳೆ ಸೊಪ್ಪಿನ ಮೇಲೆ ಬೀಳುತ್ತಿದೆ. ಕೆಮಿಕಲ್ ಸೇರಿರುವ ಹಿಪ್ಪು ನೆರಳೆ ಸೊಪ್ಪನ್ನು ತಿನ್ನುವುದರಿಂದ ಹುಳುಗಳು ಗೂಡು ಕಟ್ಟುತ್ತಿಲ್ಲ. ಪ್ರತಿ ವರ್ಷ ಹೆಚ್ಚು ಮಳೆ ಬರ್ತಿದ್ದರಿಂದ ನೀರಲ್ಲಿ ಕೆಮಿಕಲ್ ಹೋಗ್ತಿತ್ತು. ಆದ್ರೆ, ಈ ಬಾರಿ ಮಳೆ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಕೆಮಿಕಲ್ ಅಂಶ ಹಿಪ್ಪ ನೆರಳೆ ಸೊಪ್ಪಿನಲ್ಲಿ ಹಾಗೆ ಉಳಿದುಕೊಳ್ಳುತ್ತಿದೆ. ಈ ಸೊಪ್ಪನ್ನು ತಿನ್ನುವ ಹುಳುಗಳು ಗೂಡು ಕಟ್ಟುತ್ತಿಲ್ಲಾ ಎನ್ನುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕೊಪ್ಪಳ ರೇಷ್ಮೆ ಇಲಾಖೆಯ ಉಪನಿರ್ದೇಶಕ ಸುಂದರರಾಜ್, ‘ರೇಷ್ಮೆ ಹುಳುಗಳು ಗೂಡು ಕಟ್ಟದೇ ಇರೋದಕ್ಕೆ ಹಿಪ್ಪು ನೆರಳೆ ಸೊಪ್ಪಿನಲ್ಲಿರುವ ಕೆಮಿಕಲ್ ಕಾರಣವೆಂದು ನಮ್ಮ ವಿಜ್ಞಾನಿಗಳು ಹೇಳ್ತಿದ್ದಾರೆ. ಇನ್ನು ಹೊಸಳ್ಳಿ ಗ್ರಾಮದಲ್ಲಿ ಮೃತಪಡುತ್ತಿರುವ ಹುಳುಗಳನ್ನು ಕೂಡ ಪರೀಕ್ಷೆ ಮಾಡಿಸುತ್ತೇವೆ. ಮೊಟ್ಟೆಗಳನ್ನು ಮರಿ ಮಾಡೋರು ತಪ್ಪು ಮಾಡಿದ್ರೆ, ಅವರ ವಿರುದ್ದ ಕೂಡಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಸದ್ಯ ಹೊಸಳ್ಳಿ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ತಂದಿದ್ದ ರೇಷ್ಮೆ ಹುಳುಗಳು ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ. ಹೀಗಾಗಿ ರೇಷ್ಮೆ ಹುಳುಗಳ ಸಾವಿಗೆ ಅಧಿಕಾರಿಗಳು, ರೇಷ್ಮೆ ವಿಜ್ಞಾನಿಗಳು ಅಸಲಿ ಕಾರಣ ಪತ್ತೆ ಹಚ್ಚಬೇಕಿದೆ. ಜೊತೆಗೆ ಹುಳುಗಳನ್ನು ಮಾರಾಟ ಮಾಡೋ ವರ್ತಕರ ನಿರ್ಲಕ್ಷ್ಯವಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ. ರೈತರಿಗೆ ಸೂಕ್ತ ಪರಿಹಾರ ಕೊಡುವ ಕೆಲಸ ಕೂಡ ಆಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ