ಟಿವಿ9 ವರದಿ ಫಲಶೃತಿ: ತಾಂಡಾ ನಿವಾಸಿಗಳ ಮನೆಗೆ ಬೇಕಾದಷ್ಟು ನೀರು ಸರಬರಾಜು ಮಾಡುತ್ತಿರುವ ಕೊಪ್ಪಳ ಅಧಿಕಾರಿಗಳು!
ಕೊಪ್ಪಳ ತಾಲೂಕಿನ ತಾಂಡಾ ನಿವಾಸಿಗಳು ಬಿಂದಿಗೆ ನೀರಿಗಾಗಿ ಅನೇಕ ಖಾಸಗಿ ವ್ಯಕ್ತಿಗಳ ಬೋರವೆಲ್ ಗಳಿಗೆ ಅಲೆಯುತ್ತಿದ್ದರು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡಿ ನೀರು ಪೂರೈಕ ಮಾಡೋದಾಗಿ ಭರವಸೆ ನೀಡಿದ್ದರು. ಇದೀಗ ಇಂದಿರಾ ನಗರ ತಾಂಡಾಕ್ಕೆ ಪ್ರತಿನಿತ್ಯ 15 ಕ್ಕೂ ಹೆಚ್ಚು ಟ್ಯಾಂಕರ್ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಗಲ್ಲಿಗಲ್ಲಿಗೂ ಒಂದೊಂದು ಟ್ಯಾಂಕರ್ ಮೂಲಕ ಮುಂಜಾನೆಯಿಂದ ಸಂಜೆವರಗೆ ನೀರು ಪೂರೈಕೆ ಮಾಡಲಾಗುತ್ತಿದೆ.
ಆ ತಾಂಡಾದ ನಿವಾಸಿಗಳು ಬಿಂದಿಗೆ ನೀರಿಗಾಗಿ ಪರದಾಡುತ್ತಿದ್ದರು. ಶಾಲೆಯ ಮಕ್ಕಳಿಗೆ ಶಾಲೆ ಬಿಟ್ಟು ನೀರು ತುಂಬಿಸುವುದೇ ದೈನಂದಿನ ಕೆಲಸವಾಗಿತ್ತು. ದೊಡ್ಡವರು ಕೂಡಾ ಕೂಲಿ ಕೆಲಸ ಬಿಟ್ಟು ನೀರಿಗಾಗಿ ಅಲೆದಾಡುತ್ತಿದ್ದರು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ತಾಂಡಾಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಪ್ರತಿನಿತ್ಯ ಹದಿನೈದಕ್ಕೂ ಹೆಚ್ಚು ಟ್ಯಾಂಕರ್ ನೀರು ತಾಂಡಾಕ್ಕೆ ಪೂರೈಕೆಯಾಗುತ್ತಿದೆ.
ಮನೆ ಮುಂದೆ ನಿಂತಿರುವ ಟ್ಯಾಂಕರ್, ಟ್ಯಾಂಕರ್ ನಲ್ಲಿನ ನೀರನ್ನು ತುಂಬಿಕೊಳ್ಳುತ್ತಿರುವ ಮಹಿಳೆಯರು, ಇಂತಹ ದೃಶ್ಯಗಳು ಕಂಡುಬಂದಿದ್ದು ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ. ಆದ್ರೆ ಕೆಲವೇ ದಿನಗಳ ಹಿಂದೆ ಈ ಗ್ರಾಮದಲ್ಲಿನ ಸ್ಥಿತಿಯೇ ಬೇರೆಯಾಗಿತ್ತು. ಇಲ್ಲಿ ಬಿಂದಿಗೆ ನೀರಿಗಾಗಿ ಜನರು ಭಾರೀ ಕರಸತ್ತು ನಡೆಸುತ್ತಿದ್ದರು. ಶಾಲೆಗೆ ಹೋಗಬೇಕಿದ್ದ ಮಕ್ಕಳು ಶಾಲೆ ಬಿಟ್ಟು ನೀರು ತುಂಬಿಸುವದನ್ನೇ ಕೆಲಸ ಮಾಡಿಕೊಂಡಿದ್ದರು. ಕೂಲಿ ಕಾರ್ಮಿಕರು ಕೂಡಾ ನೀರಿಗಾಗಿ ಬೋರವೆಲ್ ನಿಂದ ಬೋರವೆಲ್ ಗೆ ಅಲೆಯುತ್ತಿದ್ದರು. ಆದ್ರೆ ಕೆಲವೇ ದಿನಗಳಲ್ಲಿ ತಾಂಡಾದ ಚಿತ್ರಣ ಬದಲಾಗಿದೆ.
ಇದೀಗ ಮನೆ ಮುಂದೆಯೇ ಟ್ಯಾಂಕರ್ ಬರ್ತಿದೆ. ಜನರು ಸಾಲುಗಟ್ಟಿ ನಿಂತು ಟ್ಯಾಂಕರ್ ನಲ್ಲಿನ ನೀರನ್ನು ತುಂಬಿಕೊಂಡು ಹೋಗ್ತಿದ್ದಾರೆ. ಇಂತಹದೊಂದು ಬದಲಾವಣೆಗೆ ಕಾರಣವಾಗಿದ್ದು ಟಿವಿ9 ಅನ್ನೋದು ವಿಶೇಷ. ಹೌದು ಇಂದಿರಾ ನಗರ ತಾಂಡಾ ನಿವಾಸಿಗಳು ಇದೀಗ ಮನೆಗೆ ಬೇಕಾದಷ್ಟು ನೀರನ್ನ ತಗೆದುಕೊಂಡು ಹೋಗ್ತಿದ್ದಾರೆ. ಆದ್ರೆ ಕೆಲವೇ ದಿನಗಳ ಹಿಂದೆ ಬಿಂದಿಗೆ ನೀರಿಗಾಗಿ ಕೂಡಾ ತಾಂಡಾ ನಿವಾಸಿಗಳು ಪರದಾಡಿದ್ದರು. ತಾಂಡಾಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಬೋರೆವಲ್ ಗಳು ಬತ್ತಿದ್ದವು.
ಇದರಿಂದ ತಾಂಡಾ ನಿವಾಸಿಗಳು ಬಿಂದಿಗೆ ನೀರಿಗಾಗಿ ಅನೇಕ ಖಾಸಗಿ ವ್ಯಕ್ತಿಗಳ ಬೋರವೆಲ್ ಗಳಿಗೆ ಅಲೆಯುತ್ತಿದ್ದರು. ಈ ಬಗ್ಗೆ ಟಿವಿ9 ಫೆಬ್ರವರಿ 15 ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡಿ ನೀರು ಪೂರೈಕ ಮಾಡೋದಾಗಿ ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆಯಂತೆ ಇದೀಗ ತಾಂಡಾಕ್ಕೆ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
Also Read: 30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು
ಇದೀಗ ಇಂದಿರಾ ನಗರ ತಾಂಡಾಕ್ಕೆ ಪ್ರತಿನಿತ್ಯ ಹದಿನೈದಕ್ಕೂ ಹೆಚ್ಚು ಟ್ಯಾಂಕರ್ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರತಿಯೊಂದು ಗಲ್ಲಿಗಲ್ಲಿಗೂ ಕೂಡಾ ಒಂದೊಂದು ಟ್ಯಾಂಕರ್ ಮೂಲಕ ಮುಂಜಾನೆಯಿಂದ ಸಂಜೆವರಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಜನರು ಇದೀಗ ಮನೆ ಮುಂದೆಯೇ ಬರ್ತಿರೋ ಟ್ಯಾಂಕರ್ ನಲ್ಲಿನ ನೀರು ತುಂಬಿಕೊಳ್ಳುತ್ತಿದ್ದಾರೆ.
ಇದರಿಂದ ಸದ್ಯದ ನೀರಿನ ಸಮಸ್ಯೆ ಬಗೆಹರಿದಂತಾಗಿದೆ. ಆದ್ರೆ ತಾತ್ಕಾಲಿಕ ಪರಿಹಾರದ ಜೊತೆಗೆ ತಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಅಂತಿದ್ದಾರೆ ತಾಂಡಾ ನಿವಾಸಿಗಳು. ಹೌದು ತಾಂಡಾಕ್ಕೆ ವರ್ಷದ ಹನ್ನೆರಡು ತಿಂಗಳು ಕೂಡಾ ಸರಿಯಾಗಿ ನೀರು ಪೂರೈಕೆ ವ್ಯವಸ್ಥೆ ಮಾಡಬೇಕು. ಆ ಮೂಲಕ ತಾಂಡಾ ನಿವಾಸಿಗಳಿಗೆ ಇನ್ನು ಹೆಚ್ಚಿನ ಅನಕೂಲ ಕಲ್ಪಿಸಬೇಕು ಅಂತ ಆಗ್ರಹಿಸುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ