ಬಿಜೆಪಿ ಸಂಸದ ಸಂಗಣ್ಣ ಕರಡಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದರಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್? ಫೇಸ್ಬುಕ್ನಲ್ಲಿ ಹೀಗೇಕೆ ಪೋಸ್ಟ್ ಹಾಕಿದರು?
KPCC DK Shivakumar: ಅನುಚಿತ ಪೋಸ್ಟ್ ಎಂದು ತಕ್ಷಣ ತಿರುಗೇಟು ನೀಡಿರುವ ಬಿಜೆಪಿ ಸಂಸದ ಸಂಗಣ್ಣ ಕರಡಿ: ಕಾಂಗ್ರೆಸ್ ಪಕ್ಷ ಸಂಘಟನೆ ಬಲಗೊಳಿಸಲು ಚರ್ಚೆ ಮಾಡಲಾಯ್ತು ಎಂದು ಪೋಸ್ಟ್ ಹಾಕಿದ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಸಂಸದ ಸಂಗಣ್ಣ ಕರಡಿ ತಕ್ಷಣವೇ ಇದಕ್ಕೆ ತಾವೂ ಒಂದು ಫೇಸ್ಬುಕ್ ಪೋಸ್ಟ್ ಹಾಕಿ, ತಿರುಗೇಟು ನೀಡಿದ್ದಾರೆ.
ಕೊಪ್ಪಳ: ಸಾಮಾಜಿಕ ಜಾಲತಾಣದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ವೈಯಕ್ತಿಕ ಫೇಸ್ಬುಕ್ ಖಾತೆಯಲ್ಲಿ ಕೀಟಲೆ ಅಥವಾ ಯಡವಟ್ಟು ಮಾಡಿದ್ದು, ಅದರ ವಿರುದ್ಧ ಬಿಜೆಪಿ ಸಂಸದ ಸಂಗಣ್ಣ ಕರಡಿ ತೀವ್ರ ಕಿಡಿಕಾರಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆ.ಪಿ.ಸಿ.ಸಿ-KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸನಗೌಡ ದದ್ದಲ್, ಮಾಜಿ ಮಂತ್ರಿಗಳಾದ ಮಲ್ಲಿಕಾರ್ಜುನ ನಾಗಪ್ಪ ಅವರು ಭೇಟಿ ಮಾಡಿದ್ದು, ಬೇರುಮಟ್ಟದಿಂದ ತಮ್ಮ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಬಗ್ಗೆ ಚರ್ಚೆ ನಡೆಸಿದೆವು ಎಂದು ಇಂದು ಮಧ್ಯಾಹ್ನ ಒಂದು ಪೋಸ್ಟ್ ಹಾಕಿದ್ದಾರೆ.
ಡಿ.ಕೆ. ಶಿವಕುಮಾರ್ ಪೋಸ್ಟ್ ಸಾರಾಂಶ: https://www.facebook.com/DKShivakumar.official/posts/3090602844493247
ನನ್ನ ನಿವಾಸದಲ್ಲಿ, ಲೋಕಸಭಾ ಸದಸ್ಯರಾದ ಶ್ರೀ ಕರಡಿ ಸಂಗಣ್ಣ ಅಮರಪ್ಪ, ಶಾಸಕರಾದ ಶ್ರೀ ಬಸನಗೌಡ ದದ್ದಲ್, ಶಾಸಕರಾದ ಶ್ರೀ ಪಿ.ಟಿ. ಪರಮೇಶ್ವರ್ ನಾಯಕ್, ವಿಧಾನ ಪರಿಷತ್ ಸದಸ್ಯ ಶ್ರೀ ಎಸ್‍ಎಲ್ ಘೋಟ್ನೇಕರ್, ಮಾಜಿ ಮಂತ್ರಿಗಳಾದ ಶ್ರೀ ಮಲ್ಲಿಕಾರ್ಜುನ್ ನಾಗಪ್ಪ ಅವರನ್ನು ಭೇಟಿ ಮಾಡಿ, ಬೇರುಮಟ್ಟದಿಂದ ಪಕ್ಷ ಬಲಗೊಳಿಸುವ ಬಗ್ಗೆ ಚರ್ಚೆ ನಡೆಸಿದೆವು.
ಅನುಚಿತ ಪೋಸ್ಟ್ ಎಂದು ತಕ್ಷಣ ತಿರುಗೇಟು ನೀಡಿರುವ ಬಿಜೆಪಿ ಸಂಸದ ಸಂಗಣ್ಣ ಕರಡಿ: ಕಾಂಗ್ರೆಸ್ ಪಕ್ಷ ಸಂಘಟನೆ ಬಲಗೊಳಿಸಲು ಚರ್ಚೆ ಮಾಡಲಾಯ್ತು ಎಂದು ಪೋಸ್ಟ್ ಹಾಕಿದ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಸಂಸದ ಸಂಗಣ್ಣ ಕರಡಿ (Karadi Sanganna Amarappa) ತಕ್ಷಣವೇ ಇದಕ್ಕೆ ತಾವೂ ಒಂದು ಫೇಸ್ಬುಕ್ ಪೋಸ್ಟ್ ಹಾಕಿ, ತಿರುಗೇಟು ನೀಡಿದ್ದಾರೆ.
ನಾನು ದೆಹಲಿಯಲ್ಲಿದ್ದೇನೆ ಎಂದು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿರುವ ಸಂಗಣ್ಣ ಕರಡಿ, ಡಿ.ಕೆ.ಶಿವಕುಮಾರ್ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಪೋಟೋದಲ್ಲಿ ಸಂಗಣ್ಣ ಕರಡಿ ಇರದೆ ಇದ್ದರೂ, ವಿರೋಧ ಪಕ್ಷದ ನಾಯಕರೊಬ್ಬರ ಹೆಸರು ಹಾಕಿ, ಡಿ.ಕೆ. ಶಿವಕುಮಾರ್ ಪೋಸ್ಟ್ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ಹೀಗೆ ನಿಗೂಢ ಪೋಸ್ಟ್ ಮಾಡಿರುವುದರ ಉದ್ದೇಶವಾದರೂ ಏನು ಎಂದು ನೆಟ್ಟಿಗರು ಚರ್ಚಿಸತೊಡಗಿದ್ದಾರೆ.
ಬಿಜೆಪಿ ಸಂಸದ ಸಂಗಣ್ಣ ಕರಡಿ ಟ್ವೀಟ್ ಸಾರಾಂಶ: ನಾನು ದೆಹಲಿಯಲ್ಲಿ ಲೋಕಸಭಾ ಅಧಿವೇಶನದಲ್ಲಿ ಇರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ನಾನು ಯಾರನ್ನು ಭೇಟಿ ಮಾಡಿಲ್ಲ. ನನ್ನ ಬಗ್ಗೆ ಡಿ.ಕೆ ಶಿವಕುಮಾರ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅಳಲು ತೋಡಿಕೊಂಡಿದ್ದಾರೆ.
(KPCC president dk shivakumar indulges in controversy over bjp mp Karadi Sanganna Amarappa)
Published On - 3:21 pm, Thu, 29 July 21