ಮೊನ್ನೆಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿ ಆಗಬಾರದ ಕಾರಣವೊಂದಕ್ಕೆ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮವೊಂದರ ನಿಮಿತ್ತ ಮಂಡ್ಯಕ್ಕೆ ಭೇಟಿ ನೀಡಿದ್ದ ಅವರು ತಮ್ಮ ಜತೆಗೆ ಬರುತ್ತಿದ್ದ ಕಾರ್ಯಕರ್ತನೊಬ್ಬನಿಗೆ ಕಪಾಳಮೋಕ್ಷ್ದರ ಮಾಡಿದ್ದರು ಮತ್ತು ಅದರ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕ ಟೀಕೆ ಕೇಳಿಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.
ಅವನು ನಮ್ಮದೇ ಹುಡುಗ, ನನ್ನ ಸಂಬಂಧಿಕ. ಏನೋ ಹೆಗಲ ಮೇಲೆ ಕೈ ಹಾಕೊಂಡು ಬರ್ತಾ ಇದ್ದ. ನೋಡಿದವರು ಏನಂತಾರೆ..ಅಂದ್ಕೊಂಡು ಎರಡೇಟು ಜೋರಾಗಿ ಹೊಡೆದೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಹೆಗಲ ಮೇಲೆ ಹಾಕಿಲ್ಲ ಅಂತಿದ್ದರೂ ಸಹ, ನಾನು ಹೊಡೆದರೆ ಅದು ನನ್ನ ಮತ್ತು ಅವನ ನಡುವಿನ ಗಲಾಟೆ. ಅದನ್ನು ನಾವೇ ಮಾತಾಡಿಕೊಳ್ಳುತ್ತೇವೆ ಎಂದು ಅವರು ವಿವಾದಕ್ಕೆ ಅಂತ್ಯ ಹಾಡಲು ಪ್ರಯತ್ನಿಸಿದ್ದಾರೆ.
ರಾಜ್ಯದಲ್ಲಿ ಜಾತಿವಾರು ಜನಗಣತಿ ವರದಿ ವಿಚಾರವಾಗಿ ಹಿಂದುಳಿದ ನಾಯಕರು ಬಂದು ನನ್ನನ್ನು ಭೇಟಿಯಾಗಿದ್ದರು. ಜಾತಿ ಜನಗಣತಿಗೆ 170 ಕೋಟಿ ಸರ್ಕಾರ ವೆಚ್ಚ ಮಾಡಿದೆ. ಹೀಗಾಗಿ ಜಾತಿವಾರು ಜನಗಣತಿ ವರದಿ ಬಿಡುಗಡೆ ಮಾಡಲಿ. ಕಾಂತರಾಜು ಏನು ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ಜಾತಿ ಜನಗಣತಿ ವಿಚಾರದಲ್ಲಿ ನಾನೊಬ್ಬನೇ ಹೇಳಲು ಆಗಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಚರ್ಚೆ ಮಾಡುತ್ತೇನೆ. ಬಿಜೆಪಿಯವರು ಏನು ಚರ್ಚೆ ಮಾಡುತ್ತಾರೋ ನೋಡೋಣ ಎಂದು ಸಹ ಅವರು ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಪಾಳಮೋಕ್ಷಗೈದದ್ದು ಕಾಂಗ್ರೆಸ್ ಕಾರ್ಯಕರ್ತನಿಗಲ್ಲ, ಜೆಡಿಎಸ್ ಕಾರ್ಯಕರ್ತನಿಗೆ!
( KPCC President DK Shivakumar says man he slams is his relative)