ದೇವೇಗೌಡರೂ ಕೈಕಟ್ಟಿ ನಿಲ್ಲುತ್ತಾರೆ, ಅದು ನಮ್ಮ ಸಂಸ್ಕೃತಿ: ಫೋಟೋ ವೈರಲ್ ಮಾಡಿ ಸುಮಲತಾಗೆ ತಿರುಗೇಟು ಕೊಟ್ಟ ಹೆಚ್​ಡಿಕೆ ಅಭಿಮಾನಿಗಳು

Viral Photos: ಅಂಬರೀಶ್ ಪಕ್ಕ ಕುಳಿತ ದೇವೇಗೌಡರು ಕೈಕಟ್ಟಿ ಕುಳಿತಿರುವ ಫೋಟೋ, ಅಧಿಕಾರಿಗಳಿಗೆ ದೊಡ್ಡಗೌಡರು ನಮಸ್ಕರಿಸುತ್ತಿರುವ ಫೋಟೋ, ಕುಮಾರಸ್ವಾಮಿ ಮಕ್ಕಳ ಮುಂದೆ ಕೈಕಟ್ಟಿ ನಿಂತ ಫೋಟೋ, ಜನರ ಸಮಸ್ಯೆ ಆಲಿಸುವಾಗ ತಲೆ ತಗ್ಗಿಸಿ ಕಿವಿಗೊಟ್ಟ ಫೋಟೋ ಸೇರಿದಂತೆ ಬೇರೆ ಬೇರೆ ಸಂದರ್ಭಗಳಲ್ಲಿ ತೆಗೆದ ಫೋಟೋಗಳನ್ನು ವೈರಲ್ ಮಾಡಿದ್ದಾರೆ.

ದೇವೇಗೌಡರೂ ಕೈಕಟ್ಟಿ ನಿಲ್ಲುತ್ತಾರೆ, ಅದು ನಮ್ಮ ಸಂಸ್ಕೃತಿ: ಫೋಟೋ ವೈರಲ್ ಮಾಡಿ ಸುಮಲತಾಗೆ ತಿರುಗೇಟು ಕೊಟ್ಟ ಹೆಚ್​ಡಿಕೆ ಅಭಿಮಾನಿಗಳು
ಅಂಬರೀಶ್ ಪಕ್ಕ ಕೈಕಟ್ಟಿ ಕುಳಿತ ದೇವೇಗೌಡ, ಕುಮಾರಸ್ವಾಮಿ ಪಕ್ಕ ಕೈಕಟ್ಟಿ ನಿಂತ ಅಂಬರೀಶ್
Follow us
TV9 Web
| Updated By: Skanda

Updated on:Jul 12, 2021 | 8:18 AM

ಬೆಂಗಳೂರು: ಕೆಆರ್​ಎಸ್​ ಅಣೆಕಟ್ಟು ಬಿರುಕು ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D Kumaraswamy) ಹಾಗೂ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ನಡುವಿನ ಜಟಾಪಟಿಗೆ ಸ್ವತಃ ಕುಮಾರಸ್ವಾಮಿಯೇ ವಿರಾಮ ಘೋಷಿಸಿದ್ದರೂ ಅಭಿಮಾನಿಗಳು ಮಾತ್ರ ಸುಮ್ಮನಾಗುತ್ತಿಲ್ಲ. ಕೆಲ ದಿನಗಳ ಹಿಂದೆ ಸುಮಲತಾ ಅಭಿಮಾನಿಗಳು ಕುಮಾರಸ್ವಾಮಿಯವರನ್ನು ಅವಹೇಳನ ಮಾಡಿ, ಅಂಬರೀಶ್ ಎದರು ಕೈಕಟ್ಟಿಕೊಂಡ ಫೋಟೋ ವೈರಲ್ (Photo Viral) ಮಾಡಿದ್ದಕ್ಕೆ ಪ್ರತಿಯಾಗಿ ಇದೀಗ ಜೆಡಿಎಸ್​ ಅಭಿಮಾನಿಗಳು (JDS Fans) ತಿರುಗೇಟು ನೀಡಿದ್ದಾರೆ. ಕೇವಲ ಕುಮಾರಸ್ವಾಮಿ ಮಾತ್ರವಲ್ಲದೇ ಹೆಚ್​.ಡಿ ದೇವೇಗೌಡರು (H.D Deve Gowda) ಕೂಡಾ ಬೇರೆ ಬೇರೆ ಸಂದರ್ಭದಲ್ಲಿ ಕೈಕಟ್ಟಿ ನಿಂತ ಫೋಟೋಗಳನ್ನು ವೈರಲ್ ಮಾಡುವ ಮೂಲಕ ಅವರ ಕುಟುಂಬದ ಸಂಸ್ಕೃತಿಯ ಗುಣಗಾನ ಮಾಡಿದ್ದಾರೆ.

ಕೈಕಟ್ಟಿ ನಿಲ್ಲುವುದು ಸಂಸ್ಕಾರ, ಸಂಸ್ಕೃತಿಯ ಲಕ್ಷಣ. ಅದನ್ನು ಅವಹೇಳನ ಮಾಡುವುದಾಗಲೀ, ಲೇವಡಿ ಮಾಡುವುದಾಗಲೀ ಸರಿಯಲ್ಲ. ಕುಮಾರಸ್ವಾಮಿಯವರು ಕೇವಲ ದೊಡ್ಡ ವ್ಯಕ್ತಿಗಳಿಗಷ್ಟೇ ಅಲ್ಲ ಚಿಕ್ಕ ಮಕ್ಕಳಿಗೂ, ಬಡವ ಬಲ್ಲಿದರಿಗೂ ಗೌರವ ಕೊಡುತ್ತಿದ್ದರು. ಯಾರದ್ದಾದರೂ ಸಮಸ್ಯೆ ಕೇಳುವಾಗಲೂ ಕೈಕಟ್ಟಿಕೊಂಡು ಕೇಳುತ್ತಿದ್ದರು. ಮಾಜಿ ಪ್ರಧಾನಮಂತ್ರಿ ದೇವೇಗೌಡರೂ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಯಾವ ರೀತಿ ಗೌರವ ಕೊಡುತ್ತಿದ್ದರು ಎನ್ನುವುದನ್ನು ಫೋಟೋದಲ್ಲಿ ನೋಡಿ ತಿಳಿದುಕೊಳ್ಳಿ ಎಂದು ಹೆಚ್​.ಡಿ.ಕುಮಾರಸ್ವಾಮಿ ಅಭಿಮಾನಿಗಳು ಸುಮಲತಾ ಪರ ವಹಿಸಿದವರಿಗೆ ಟಾಂಗ್ ಕೊಟ್ಟಿದ್ದಾರೆ.

HDK FANS

ಸಮಸ್ಯೆ ಆಲಿಸುವಾಗ, ಮಕಗಕಳ ಬಳಿ ಮಾತನಾಡುವಾಗ ಕೈಕಟ್ಟಿಕೊಂಡ ಕುಮಾರಸ್ವಾಮಿ

ಅಂಬರೀಶ್ ಪಕ್ಕ ಕುಳಿತ ದೇವೇಗೌಡರು ಕೈಕಟ್ಟಿ ಕುಳಿತಿರುವ ಫೋಟೋ, ಅಧಿಕಾರಿಗಳಿಗೆ ದೊಡ್ಡಗೌಡರು ನಮಸ್ಕರಿಸುತ್ತಿರುವ ಫೋಟೋ, ಕುಮಾರಸ್ವಾಮಿ ಮಕ್ಕಳ ಮುಂದೆ ಕೈಕಟ್ಟಿ ನಿಂತ ಫೋಟೋ, ಜನರ ಸಮಸ್ಯೆ ಆಲಿಸುವಾಗ ತಲೆ ತಗ್ಗಿಸಿ ಕಿವಿಗೊಟ್ಟ ಫೋಟೋ ಸೇರಿದಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಕೈಕಟ್ಟಿ ನಿಂತಿರುವ ಫೋಟೋಗಳನ್ನು ಹೆಚ್​.ಡಿ.ಕುಮಾರಸ್ವಾಮಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ವೈರಲ್ ಮಾಡಿದ್ದಾರೆ.

HDK FANS

ಇದೇ ನಮ್ಮ ಸಂಸ್ಕೃತಿ ಎಂದ ಅಭಿಮಾನಿಗಳು

ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಫೋಟೋಗಳನ್ನು ವೈರಲ್ ಮಾಡುವ ಮೂಲಕ ಸುಮಲತಾ ಅಭಿಮಾನಿಗಳಿಗೆ ತಿರುಗೇಟು ಕೊಡುತ್ತಿರುವ ಕುಮಾರಸ್ವಾಮಿ ಹಿಂಬಾಲಕರು, ಇದು ನಮ್ಮ ಸಂಸ್ಕೃತಿ ಎಂದು ಹೇಳಿಕೊಂಡಿದ್ದಾರೆ. ವಾಕ್ಸಮರ ತಾರಕಕ್ಕೇರುತ್ತಿದ್ದಂತೆಯೇ ಹೆಚ್.ಡಿ.ದೇವೇಗೌಡ ಕುಮಾರಸ್ವಾಮಿಗೆ ಹಾಗೂ ಜೆಡಿಎಸ್ ನಾಯಕರಿಗೆ ಈ ವಿಚಾರವಾಗಿ ಮಾತನಾಡದಂತೆ ಸೂಚನೆ ನೀಡಿದ ಪರಿಣಾಮ ಸದ್ಯ ಅವರೆಲ್ಲರೂ ಮೌನ ವಹಿಸಿದ್ದಾರೆ. ಆ ಬಗ್ಗೆ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ ಕೂಡಾ ನೆಲ, ಜಲ, ನಾಡು, ನುಡಿ ಬಗ್ಗೆ ಹೋರಾಟವನ್ನು ಕೇಂದ್ರೀಕರಿಸೋಣ ಎಂದು ಕರೆ ನೀಡಿದ್ದರು. ಅಷ್ಟಾದರೂ ಅಭಿಮಾನಿಗಳ ನಡುವಿನ ಕಿಚ್ಚು ಮಾತ್ರ ತಣ್ಣಗಾಗುತ್ತಿಲ್ಲ.

HDK FANS

ಕೈಕಟ್ಟಿ ನಿಂತ ಕುಮಾರಸ್ವಾಮಿ

HDK FANS

ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕಾರ ಎಂದ ಅಭಿಮಾನಿಗಳು

ಇದನ್ನೂ ಓದಿ: ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಕುಮಾರಸ್ವಾಮಿಯನ್ನು ಅಪಹಾಸ್ಯ ಮಾಡಿದ ಸುಮಲತಾ ಬೆಂಬಲಿಗರು

ಕನ್ನಡಿಗ, ಕರ್ನಾಟಕ ಸಂಬಂಧ ವಿಷಯಗಳಲ್ಲಿ ಹೋರಾಡೋಣ; ಬೇರೆಲ್ಲಾ ವಿಷಯ ಉಪೇಕ್ಷಿಸೋಣ -ಹೆಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಕರೆ​

Published On - 8:18 am, Mon, 12 July 21

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ