ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಯುವ ಜೋಡಿಯೊಂದು ಬಸ್ ನಿಲ್ದಾಣಕ್ಕೆ ಬಂದು ನಿಂತಿತ್ತು. ಬಸ್ ಹಿಂಭಾಗಕ್ಕೆ ತೆರಳಿದ ಹುಡುಗ-ಹುಡುಗಿ ಪರಸ್ಪರ ಮುತ್ತಿಕ್ಕಲು ಪ್ರಾರಂಭಿಸಿದ್ದವು. ಸುತ್ತಮುತ್ತ ಜನರು ಓಡಾಡುವುದನ್ನು ನೋಡಿಯೂ ಈ ಜೋಡಿ ಮೈ ಮರೆತು ತಮ್ಮ ಕಾರ್ಯವನ್ನು ಮುಂದುವರಿಸಿತ್ತು.
ಹಾಡಹಗಲೇ ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿಯ ಚುಂಬನ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿಯ ಅಶ್ಲೀಲ ವರ್ತನೆ ಈಗ ಆಕ್ರೋಶ ವ್ಯಕ್ತವಾಗಿದೆ. ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಶೂಟ್ ಮಾಡಿ, ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತಿದ್ದ ನಟಿ ಬಂಧನ