ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ: ಬಿಜೆಪಿ, ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಅಧ್ಯಕ್ಷ ಸ್ಥಾನಕ್ಕೆ ಕೋಕ್
ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಬಾಗಲೂರು ಗ್ರಾಮ ಪಂಚಾಯತಿ ಶ್ರೀಮಂತ ಪಂಚಾಯಿತಿ ಎಂದು ಹೆಸರಾಗಿದೆ. ಆದರೆ, ಈ ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಾಗಲೂರು ಗ್ರಾಮ ಪಂಚಾಯಿತಿ ಶ್ರೀಮಂತ ಪಂಚಾಯಿತಿ ಎಂದು ಹೆಸರಾಗಿದೆ.
ದೇವನಹಳ್ಳಿ, ಜುಲೈ 09: ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಕ್ಷೇತ್ರದಲ್ಲೇ ಗ್ರಾಮ ಪಂಚಾಯ್ತಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಸದಸ್ಯರು ಒಂದಾಗಿ ಅಧ್ಯಕ್ಷ ಸ್ಥಾನಕ್ಕೆ ಕೋಕ್ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೆಗೌಡ ಅವರು ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ (Byatarayanapura Assembly Constituency) ಬರುವ ಬೆಂಗಳೂರು (Bengaluru) ನಗರ ಜಿಲ್ಲೆಯ ಉತ್ತರ ತಾಲೂಕಿನ ಬಾಗಲೂರು ಗ್ರಾಮ ಪಂಚಾಯಿತಿ ಶ್ರೀಮಂತ ಪಂಚಾಯಿತಿ ಎಂದು ಹೆಸರಾಗಿದೆ.
ಆದರೆ, ಈ ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಾಗಲೂರು ಗ್ರಾಮ ಪಂಚಾಯ್ತಿಯಲ್ಲಿ ರೀತಿ ಮುನೇಗೌಡ ಕಳೆದ ಒಂದು ವರ್ಷದಿಂದ ಅಧ್ಯಕ್ಷರಾಗಿದ್ದರು. ಪತ್ನಿ ಅಧ್ಯಕ್ಷೆಯಾಗಿದ್ದು, ಪತಿ ಮುನೇಗೌಡ ಸದಸ್ಯರಾಗಿದ್ದಾರೆ. ದಂಪತಿ ವಿರುದ್ಧ ಅಧಿಕಾರ ದುರ್ಬಳಕೆ ಮತ್ತು ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ದಲಿತರೇನು ಬಿಜೆಪಿಗೆ ಬೆಂಬಲ ಕೊಟ್ಟಿಲ್ಲವೇ? ಹೈಕಮಾಂಡ್ ವಿರುದ್ಧ ರಮೇಶ ಜಿಗಜಿಣಗಿ ತೀವ್ರ ಅಸಮಾಧಾನ
ವಾಟರ್ ಪಿಲ್ಟರ್, ಬೀದಿ ದೀಪ, ರಸ್ತೆ, ಚರಂಡಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ನೀರಿನ ಬಿಲ್ಗಳನ್ನು ಸಹ ಪಂಚಾಯ್ತಿಗೆ ನೀಡದೆ ಗುಳುಂ ಮಾಡಿದ್ದಾರೆ. ಈ ಹಿಂದೆ ಜಿಯೋ ಕೇಬಲ್ನಲ್ಲಿ ಸದಸ್ಯ ಮುನೆಗೌಡ 60 ಲಕ್ಷ ರೂ. ಗುಳುಂ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಅವ್ಯವಹಾರದಿಂದ ಬೇಸತ್ತ 26 ಸದಸ್ಯರ ಪೈಕಿ 20 ಜನರು ಬೆಂಗಳೂರು ಉತ್ತರ ಎಸಿ ಪ್ರಮೋದ್ ಪಾಟೀಲ್ ಮುಂದೆ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಜೊತೆಗೆ ಅವ್ಯವಹಾರದ ವಿರುದ್ಧ ತನಿಖೆ ನಡೆಸುವಂತೆಯು ಎಸಿ ಮತ್ತು ಡಿಸಿಗೆ ದೂರು ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೆಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಬಾಗಲೂರು ಗ್ರಾಮ ಪಂಚಾಯ್ತಿಗೆ ಪ್ರತಿವರ್ಷ ಕೋಟಿ ಕೋಟಿ ಆದಾಯ ಬರುತ್ತದೆ. ಈ ಗ್ರಾಮ ಪಂಚಾಯಿತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಏರೋಸ್ಪೇಸ್ ಡಿಪೇನ್ಸ್ ಪಾರ್ಕ್ ಪಕ್ಕದಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ