ಉಡುಪಿಯಲ್ಲಿ ಕೃಷ್ಣಾಷ್ಟಮಿ ಆಚರಣೆಗೆ ಅಡ್ಡಗಾಲು ಹಾಕಿದ ಕೊರೊನಾ

| Updated By: ಆಯೇಷಾ ಬಾನು

Updated on: Aug 30, 2021 | 8:24 AM

ಆಗಸ್ಟ್ 30ರ ಬೆಳಗ್ಗೆಯಿಂದಲೇ ಶ್ರೀಕೃಷ್ಣನ ಭಕ್ತರು ಉಪವಾಸ ಇರುತ್ತಾರೆ. ಅಂದು ರಾತ್ರಿ 12. 17ಕ್ಕೆ ಸರಿಯಾಗಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನವಾಗಲಿದೆ.

ಉಡುಪಿಯಲ್ಲಿ ಕೃಷ್ಣಾಷ್ಟಮಿ ಆಚರಣೆಗೆ ಅಡ್ಡಗಾಲು ಹಾಕಿದ ಕೊರೊನಾ
ಉಡುಪಿ ಕೃಷ್ಣ (ಸಂಗ್ರಹ ಚಿತ್ರ(
Follow us on

ಉಡುಪಿ: ಕಡೆಗೋಲು ಕೃಷ್ಣನ ನಗರಿ ಉಡುಪಿಯಲ್ಲಿ ಅಷ್ಟಮಿ ಆಚರಣೆಗೆ ಕೊರೋನಾ ಈ ಬಾರಿ ಅಡ್ಡಗಾಲು ಹಾಕಿದೆ. ಆಗಸ್ಟ್ 30 ಮತ್ತು 31 ಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿದೆ. ಆಗಸ್ಟ್ 30ರ ಬೆಳಗ್ಗೆಯಿಂದಲೇ ಶ್ರೀಕೃಷ್ಣನ ಭಕ್ತರು ಉಪವಾಸ ಇರುತ್ತಾರೆ. ಅಂದು ರಾತ್ರಿ 12. 17ಕ್ಕೆ ಸರಿಯಾಗಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನವಾಗಲಿದೆ.

ಆಗಸ್ಟ್ 31 ರಥಬೀದಿಯಲ್ಲಿ ಶ್ರೀ ಕೃಷ್ಣನ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಈವರೆಗೆ ಪಾಲ್ಗೊಳ್ಳುತ್ತಿದ್ದರು. ಕೊರೋನಾ ಸಾಂಕ್ರಾಮಿಕ ಇರುವ ಕಾರಣ, ಈ ಬಾರಿ ನಿಗದಿತ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಧಾರ್ಮಿಕ ವಿಧಿ-ವಿಧಾನಗಳು ಪ್ರತಿವರ್ಷದಂತೆ ನಡೆಯುತ್ತದೆ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ.

ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ರೆಡಿ ಮಾಡಿದ್ದಾರೆ. ರಥಬೀದಿಯಲ್ಲಿ ಗುರ್ಜಿಗಳನ್ನು ಹಾಕಲಾಗಿದೆ. ಗೊಲ್ಲ ವೇಷದಾರಿಗಳು ಮಡಕೆ ಒಡೆಯುವ ಸಂಪ್ರದಾಯವನ್ನು ಮಾಡಲಿದ್ದಾರೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ರಥಬೀದಿಯಲ್ಲಿ ಉತ್ಸವ ಮಾಡಲಾಗುತ್ತದೆ.

ಕೃಷ್ಣ ಮಠ ಪರ್ಯಾಯ ಅದಮಾರು ಮಠ ಮತ್ತು ಅಷ್ಟ ಮಠಗಳಿಗೆ ಸಂಬಂಧಪಟ್ಟಂತ ಸ್ವಾಮೀಜಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಭಕ್ತರಿಗೆ ಕೃಷ್ಣ ಲೀಲೋತ್ಸವ ಕಾರ್ಯಕ್ರಮಕ್ಕೆ ರಥಬೀದಿಗೆ ಪ್ರವೇಶ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಸೂಚನೆ ಹೊರಡಿಸಿದೆ. ಜನಜಂಗುಳಿ ಸೇರುವ ಅವಕಾಶ ಇಲ್ಲ ಎಂದು ಪೊಲೀಸ್ ಇಲಾಖೆ ಸೂಚಿಸಿದೆ.

(Krishnashtami Celebrations in Udupi Hit by Coronavirus Pandemic)

ಇದನ್ನೂ ಓದಿ: ಗೋಕುಲಾಷ್ಟಮಿಯ ದಿನ ನಿಮ್ಮ ರಾಶಿಗೆ ಅನುಸಾರವಾಗಿ ಕೃಷ್ಣನಿಗೆ ಹೀಗೆ ಬಟ್ಟೆ ತೊಡಿಸಿ, ಸಿಹಿ ತಿಂಡಿಯಿಟ್ಟು ಶ್ರೀ ಕೃಷ್ಣಾರ್ಪಣಮಸ್ತು ಅನ್ನಿ

ಇದನ್ನೂ ಓದಿ: Gokulashtami 2021: ಶ್ರೀ ಕೃಷ್ಣನ ಕೃಪೆ ನಿಮ್ಮ ಮೇಲಿರಬೇಕು ಅಂದರೆ ಗೋಕುಲಾಷ್ಟಮಿ ಸಂದರ್ಭ ಈ 10 ವಿಷಯ ತಿಳಿದುಕೊಳ್ಳಿ