AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gokulashtami 2021: ಶ್ರೀ ಕೃಷ್ಣನ ಕೃಪೆ ನಿಮ್ಮ ಮೇಲಿರಬೇಕು ಅಂದರೆ ಗೋಕುಲಾಷ್ಟಮಿ ಸಂದರ್ಭ ಈ 10 ವಿಷಯ ತಿಳಿದುಕೊಳ್ಳಿ

ಮನೆಯ ಆಸುಪಾಸು ಹಸು ಇದ್ದರೆ ಹಸುವಿನ ಸೇವೆ ಮಾಡಿ. ಹಸುವಿಗೆ ಪೂಜೆ ಮಾಡಿ. ಅದಕ್ಕೆ ಮೇವನ್ನು ತಿನ್ನಿಸಿ. ಬೂಸಾ- ಹಿಂಡಿ ನೀರನ್ನು ಕುಡಿಸಿ. ಹಸುವಿನ ಮೈದಡವಿ, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. ಗೊಲ್ಲ ಶ್ರೀ ಕೃಷ್ಣ ಗೋಪಾಲಕ ಆಗಿದ್ದ. ಹಾಗಾಗಿ ಆತನ ಅಚ್ಚುಮೆಚ್ಚಿನ ಗೋವುಗಳ ಸೇವೆ ಮಾಡಿ.

Gokulashtami 2021: ಶ್ರೀ ಕೃಷ್ಣನ ಕೃಪೆ ನಿಮ್ಮ ಮೇಲಿರಬೇಕು ಅಂದರೆ ಗೋಕುಲಾಷ್ಟಮಿ ಸಂದರ್ಭ ಈ 10 ವಿಷಯ ತಿಳಿದುಕೊಳ್ಳಿ
ಶ್ರೀ ಕೃಷ್ಣನ ಕೃಪೆ ನಿಮ್ಮ ಮೇಲಿರಬೇಕು ಅಂದರೆ ಗೋಕುಲಾಷ್ಟಮಿ ಸಂದರ್ಭದಲ್ಲಿ ಈ ಹತ್ತು ವಿಷಯ ತಿಳಿದುಕೊಳ್ಳಿ
TV9 Web
| Edited By: |

Updated on: Aug 26, 2021 | 7:13 AM

Share

ಕೃಷ್ಣ ಪರಮಾತ್ಮನ ಕೃಪಾಶೀರ್ವಾದ ನಿಮ್ಮ ಮೇಲೆ ಇರಬೇಕು ಅಂದರೆ ಜನ್ಮಾಷ್ಟಮಿಯ ದಿನ ಈ ಹತ್ತು ವಿಷಯಗಳನ್ನು ತಿಳಿದುಕೊಂಡು, ಆಚರಿಸಿ. ಈ ವರ್ಷ ಆಗಸ್ಟ್​ 30 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. ಈ ಸುದಿನ ಪ್ರೀತಿಪೂರ್ವಕ ಕೃಷ್ಣ ಪರಮಾತ್ಮನ ಪೂಜಾ ಅರ್ಚನೆ ಮಾಡಿದರೆ ಭಗವಂತ ಸಂಪ್ರೀತನಾಗುತ್ತಾನೆ. ಭಕ್ತರಿಗೆ ಭರಪೂರ ಆಶೀರ್ವಾದ ಮಾಡುತ್ತಾನೆ. ಭಕ್ತರ ದುಃಖಗಳನ್ನೆಲ್ಲಾ ದೂರ ಮಾಡುತ್ತಾನೆ.

ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಇದು ಹಿಂದೂಗಳ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದು. ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವಿನ ಒಂಭತ್ತನೇ ಅವತಾರವಾದ ಶ್ರೀಕೃಷ್ಣನು ಈ ದಿನ ಜನಿಸಿದನು. ಆದ್ದರಿಂದ ಈ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಇಡೀ ಜಗತ್ತಿನಲ್ಲಿ ಎಲ್ಲರಿಗೂ ಶ್ರೀಕೃಷ್ಣ ಪ್ರಿಯ.

ಈ ವರ್ಷದ ಕೃಷ್ಣ ಜನ್ಮಾಷ್ಟಮಿಯಂದು ಆಗಸ್ಟ್ 29ರ ರಾತ್ರಿ 11.25ರಿಂದ ಆಗಸ್ಟ್ 30ರ ರಾತ್ರಿ 1.59ರವರೆಗೆ ಅಷ್ಟಮಿ ತಿಥಿ ಇರಲಿದೆ. ಆಗಸ್ಟ್ 30ರ ರಾತ್ರಿ 12.44 ರಿಂದ ಶುಭ ಮುಹೂರ್ತ ಪ್ರಾರಂಭಗೊಳ್ಳುತ್ತದೆ. 45 ನಿಮಿಷಗಳ ಕಾಲ ಶುಭ ಮುಹೂರ್ತ ಇರಲಿದೆ.

1. ಗೋಕುಲಾಷ್ಟಮಿಯಂದು ರಾತ್ರಿ 12 ಗಂಟೆಗೆ ದೇವಕಿಯ ಪುತ್ರನಾಗಿ ಬಾಲಕೃಷ್ಣನ ಜನ್ಮವಾಯಿತು.

2. ಶ್ರೀ ಕೃಷ್ಣನ ಜನ್ಮದ ಶುಭ ಘಳಿಗೆ (Krishna Janmashtami) ಬಳಿಕ ಶಂಖದಿಂದ ಹಾಲನ್ನು ಅಭಿಷೇಕ ಮಾಡಬೇಕು. ಇದರಿಂದ ಭಗವಂತ ತುಂಬಾ ಪ್ರಸನ್ನನಾಗುತ್ತಾನೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾ ಜಲದಿಂದಲೂ ಅಭಿಷೇಕ ಮಾಡಬಹುದು.

3. ಅಭಿಷೇಕದ ಬಳಿಕ ಮುದ್ದು ಕೃಷ್ಣನನ್ನು ಸುಂದರ, ಶುಭ್ರ ವಸ್ತ್ರದಿಂದ ಹೊದಿಸಬೇಕು. ಮುಕುಟುವನ್ನೂ ಹಾಕಬೇಕು. ಸುಸಜ್ಜಿತ ಉಯ್ಯಾಲೆಯಲ್ಲಿ ಮುದ್ದು ಕೃಷ್ಣನನ್ನು ಪ್ರತಿಷ್ಠಾಪಿಸಬೇಕು.

4. ಗೋಕುಲಾಷ್ಟಮಿಯಂದು (Gokulashtami) ಧಾರ್ಮಿಕ ಸ್ಥಳಗಳತ್ತ ಹೋಗಿ, ಫಲ ತಾಂಬೂಲ ಮತ್ತು ದವಸ ಧಾನ್ಯ ದಾನ ಮಾಡಬೇಕು.

5. ಮುದ್ದು ಕನ್ನಯ್ಯನಿಗಾಗಿ ಕೊಳಲು ಮತ್ತು ನವಿಲು ಗರಿಯನ್ನು ಮುಂಚಿಯವಾಗಿಯೇ ತಂದಿಟ್ಟುಕೊಳ್ಳಿ. ಗೋಕುಲಾಷ್ಟಮಿಯಂದು ಮುದ್ದು ಕೃಷ್ಣನಿಗೆ ಅರ್ಪಿಸಿ.

6. ಕೃಷ್ಣ ಜನ್ಮಾಷ್ಟಮಿಯಂದು (Janmashtami) ಮುದ್ದು ಕೃಷ್ಣನಿಗೆ ಬೆಣ್ಣೆ ಮತ್ತು ಸಕ್ಕರೆ ಅಚ್ಚನ್ನು ಅರ್ಪಿಸಿ. ಕೃಷ್ಣನ ಉಪಾಸನೆಗಾಗಿ ತುಲಸಿ ಬಳಸಿ.

7. ಒಂದರಿಂದ ಐದು ವರ್ಷದ ವರೆಗಿನ ಮಕ್ಕಳಿಗೆ ಅವರ ಬೆರಳಿನಿಂದ ಬೆಣ್ಣೆ ಮತ್ತು ಸಕ್ಕರೆಯನ್ನು ತೆಗೆದುಕೊಂಡು ತಿನ್ನುವಂತೆ ಹೇಳಿ. ಇದರಿಂದ ಶ್ರೀ ಕೃಷ್ಣನಿಗೆ ಸಂತುಷ್ಟವಾಗುವುದು ನಿಮ್ಮ ಅರಿವಿಗೆ ಬರುತ್ತದೆ.

8. ಹಸು ಮತ್ತು ಕರು ವಿಗ್ರಹಗಳನ್ನು ತಂದಿಟ್ಟುಕೊಳ್ಳಿ. ಕೃಷ್ಣ ಜನ್ಮಾಷ್ಟಮಿಯಂದು ಅವುಗಳಿಗೂ ಪೂಜೆ ಮಾಡಿ.

9. ಮನೆಯ ಆಸುಪಾಸು ಹಸು ಇದ್ದರೆ ಹಸುವಿನ ಸೇವೆ ಮಾಡಿ. ಹಸುವಿಗೆ ಪೂಜೆ ಮಾಡಿ. ಅದಕ್ಕೆ ಮೇವನ್ನು ತಿನ್ನಿಸಿ. ಬೂಸಾ- ಹಿಂಡಿ ನೀರನ್ನು ಕುಡಿಸಿ. ಹಸುವಿನ ಮೈದಡವಿ, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. ಗೊಲ್ಲ ಶ್ರೀ ಕೃಷ್ಣ ಗೋಪಾಲಕ ಆಗಿದ್ದ. ಹಾಗಾಗಿ ಆತನ ಅಚ್ಚುಮೆಚ್ಚಿನ ಗೋವುಗಳ ಸೇವೆ ಮಾಡಿ.

10. ಭಗವಂತ ಶ್ರೀ ಕೃಷ್ಣನಿಗೆ ಹಳದಿ ಚಂದನವನ್ನು ಲೇಪಿಸಿ. ಹಳದಿ ವಸ್ತ್ರ ತೊಡಿಸಿ. ಹರಿಶಿನ ಲೇಪಿಸಿ. ಪಾರಿಜಾತದಿಂದ ಪೂಜಿಸಿ.

(know importance of lord krishna puja 10 important things you should do on Janmashtami)

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಇಂದು ಈ ರಾಶಿಯವರಿಗೆ ಮೂರು ಗ್ರಹಗಳ ಶುಭಫಲ
ಇಂದು ಈ ರಾಶಿಯವರಿಗೆ ಮೂರು ಗ್ರಹಗಳ ಶುಭಫಲ