ಗೋಕುಲಾಷ್ಟಮಿಯ ದಿನ ನಿಮ್ಮ ರಾಶಿಗೆ ಅನುಸಾರವಾಗಿ ಕೃಷ್ಣನಿಗೆ ಹೀಗೆ ಬಟ್ಟೆ ತೊಡಿಸಿ, ಸಿಹಿ ತಿಂಡಿಯಿಟ್ಟು ಶ್ರೀ ಕೃಷ್ಣಾರ್ಪಣಮಸ್ತು ಅನ್ನಿ

ಮುಂದಿನ ಸೋಮವಾರ ಕೃಷ್ಣ ಜನ್ಮೋತ್ಸವ. ದೇವಕಿ ಮತ್ತು ಯಶೋದಾ ಮಮತಾ ಮಾತೆಯರ ಸುಪುತ್ರ, ರಾಧಾರಾಣಿಯ ಪ್ರಿಯತಮ ಭಗವಂತ ಶ್ರೀಕೃಷ್ಣ. ಹಿಂದೂ ಕ್ಯಾಲೆಂಡರ್ ಪ್ರಕಾರ ಜನ್ಮಾಷ್ಟಮಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಆಚರಿಸಲಾಗುತ್ತದೆ.

ಗೋಕುಲಾಷ್ಟಮಿಯ ದಿನ ನಿಮ್ಮ ರಾಶಿಗೆ ಅನುಸಾರವಾಗಿ ಕೃಷ್ಣನಿಗೆ ಹೀಗೆ ಬಟ್ಟೆ ತೊಡಿಸಿ, ಸಿಹಿ ತಿಂಡಿಯಿಟ್ಟು ಶ್ರೀ ಕೃಷ್ಣಾರ್ಪಣಮಸ್ತು ಅನ್ನಿ
ಗೋಕುಲಾಷ್ಟಮಿ ದಿನ ನಿಮ್ಮ ರಾಶಿಗೆ ಅನುಸಾರವಾಗಿ ಕೃಷ್ಣನಿಗೆ ಬಟ್ಟೆ ತೊಡಿಸಿ, ಸಿಹಿ ತಿಂಡಿಯಿಟ್ಟು ಕೃಷ್ಣಾರ್ಪಣಮಸ್ತು ಅನ್ನಿ
Follow us
TV9 Web
| Updated By: ಆಯೇಷಾ ಬಾನು

Updated on: Aug 27, 2021 | 6:57 AM

ಈ ವರ್ಷ ಆಗಸ್ಟ್​ 30 ರಂದು ಸೋಮವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. ಕೃಷ್ಣ ಪರಮಾತ್ಮನ ಕೃಪಾಶೀರ್ವಾದ ನಿಮ್ಮ ಮೇಲೆ ಇರಬೇಕು ಅಂದರೆ ಜನ್ಮಾಷ್ಟಮಿಯ ದಿನ ಹೀಗೆ ಪೂಜಾ ಕಾರ್ಯಗಳನ್ನು ಮಾಡಿ. ದಾನ ಧರ್ಮಗಳನ್ನೂ ಮಾಡಿ. ಈ ಸುದಿನ ಪ್ರೀತಿಪೂರ್ವಕ ಕೃಷ್ಣ ಪರಮಾತ್ಮನ ಆರಾಧನೆ ಮಾಡಿದರೆ ಭಗವಂತ ಸಂಪ್ರೀತನಾಗುತ್ತಾನೆ. ಭಕ್ತರಿಗೆ ಭರಪೂರ ಆಶೀರ್ವಾದ ಮಾಡುತ್ತಾನೆ. ಭಕ್ತರ ದುಃಖಗಳನ್ನೆಲ್ಲಾ ದೂರ ಮಾಡುತ್ತಾನೆ.

ಮುಂದಿನ ಸೋಮವಾರ ಕೃಷ್ಣ ಜನ್ಮೋತ್ಸವ. ದೇವಕಿ ಮತ್ತು ಯಶೋದಾ ಮಮತಾ ಮಾತೆಯರ ಸುಪುತ್ರ, ರಾಧಾರಾಣಿಯ ಪ್ರಿಯತಮ ಭಗವಂತ ಶ್ರೀಕೃಷ್ಣ. ಹಿಂದೂ ಕ್ಯಾಲೆಂಡರ್ ಪ್ರಕಾರ ಜನ್ಮಾಷ್ಟಮಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್​ನ ಆಗಸ್ಟ್ ಅಥವಾ ಸಪ್ಟೆಂಬರ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷದ ಕೃಷ್ಣ ಜನ್ಮಾಷ್ಟಮಿಯನ್ನು 2021 ಆಗಸ್ಟ್ 30, ಸೋಮವಾರದಂದು ಆಚರಿಸಲಾಗುತ್ತಿದೆ.

ಈ ವರ್ಷದ ಕೃಷ್ಣ ಜನ್ಮಾಷ್ಟಮಿಯಂದು ಆಗಸ್ಟ್ 29ರ ರಾತ್ರಿ 11.25ರಿಂದ ಆಗಸ್ಟ್ 30ರ ರಾತ್ರಿ 1.59ರವರೆಗೆ ಅಷ್ಟಮಿ ತಿಥಿ ಇರಲಿದೆ. ಆಗಸ್ಟ್ 30ರ ರಾತ್ರಿ 12.44 ರಿಂದ ಶುಭ ಮುಹೂರ್ತ ಪ್ರಾರಂಭಗೊಳ್ಳುತ್ತದೆ. 45 ನಿಮಿಷಗಳ ಕಾಲ ಶುಭ ಮುಹೂರ್ತ ಇರಲಿದೆ. ಶ್ರೀಕೃಷ್ಣನು ಈ ದಿನ ಮಥುರಾ ನಗರದಲ್ಲಿ ಜನಿಸಿದನು. ಕೃಷ್ಣ ಹುಟ್ಟಿದ ಘಳಿಗೆಯಿಂದ ಅವನ ಚಿಕ್ಕಪ್ಪ ಕಂಸನಿಂದ ಜೀವಕ್ಕೇ ಅಪಾಯವಿತ್ತು. ಕೃಷ್ಣನನ್ನು ರಕ್ಷಿಸುವ ಸಲುವಾಗಿ ಅವನ ತಂದೆ ವಾಸುದೇವ ಅವನನ್ನು ಸಣ್ಣ ಬುಟ್ಟಿಯಲ್ಲಿ ಮಲಗಿಸಿ ಯಮುನಾ ನದಿಯ ಮೂಲಕ ಬೃಂದಾವನಕ್ಕೆ ಕರೆದೊಯ್ದನು. ಕೃಷ್ಣನ್ನು ಯಶೋದಾ ಮತ್ತು ನಂದಾ ಪುತ್ರನಾಗಿ ದತ್ತು ಪಡೆದರು.

ಕನ್ನ, ಕನ್ಹಯ್ಯಾ, ಮಾಧವ, ಲಡ್ಡೂ ಗೋಪಾಲ, ಕೃಷ್ಣ ಪರಮಾತ್ಮ ಇನ್ನೂ ನಾನಾ ಹೆಸರುಗಳಿಂದ ಭಕ್ತರು ಪ್ರೀತಿಪೂರ್ವಕವಾಗಿ ಕರೆಯುತ್ತಾರೆ. ಯಾರೇ ಆಗಲಿ ಶ್ರೀ ಕೃಷ್ಣ ಅಂದರೆ ಸಾಕು ಕೃಷ್ಣ ಆ ಕರೆಗೆ ಓಗೊಟ್ಟು ಬಂದು ಭಕ್ತರ ನೆರವಿಗೆ ಧಾವಿಸುತ್ತಾನೆ. ಬನ್ನೀ ಈ ಗೋಕುಲಾಷ್ಟಮಿ ಸಂದರ್ಭದಲ್ಲಿ ನಿಮ್ಮ ಗ್ರಹಗತಿಗೆ ಅನುಸಾರವಾಗಿ ಕೃಷ್ಣನಿಗೆ ವಸ್ತ್ರ ತೊಡಿಸಿ, ಸಿಹಿ ಖಾರ ತಿಂಡಿಯಿಟ್ಟು ಕೃಷ್ಣಾರ್ಪಣಮಸ್ತು ಎಂದು ಭಗವಂತನನ್ನು ಸಂಪ್ರೀತಗೊಳಿಸಿ. ಇದರಿಂದ ನಿಮ್ಮ ಮೇಲೆ ಮತ್ತು ನಿಮ್ಮ ಪರಿವಾರದವರ ಮೇಲೆ ಶ್ರೀ ಕೃಷ್ಣನ ಆಶೀರ್ವಾದ ಲಭಿಸಿ, ಸುಖ ಸಮೃದ್ಧಿಯನ್ನು ತರುತ್ತದೆ.

1. ಮೇಷ ರಾಶಿ Aries: ಶ್ರೀ ಕೃಷ್ಣನಿಗೆ ಕೆಂಪು ವಸ್ತ್ರ ತೊಡಿಸಿ. ಕುಂಕುಮವನ್ನು ಹಣೆಗೆ ಹಚ್ಚಿ ಬೆಣ್ಣೆ ಕೃಷ್ಣನ ಉಪಾಸನೆ ಮಾಡಿ.

2. ವೃಷಭ ರಾಶಿ Taurus: ಶ್ರೀ ಕೃಷ್ಣನಿಗೆ ಬೆಳ್ಳಿಯಿಂದ ಕುಸರಿ ಕೆಲಸ ಮಾಡಿರುವ ಶುಭ್ರ ಬಿಳಿ ಬಟ್ಟೆ ಹಾಕಿ, ಕೃಷ್ಣನ ಆರಾಧನೆ ಮಾಡಿ.

3. ಮಿಥುನ ರಾಶಿ Gemini: ಶ್ರೀ ಕೃಷ್ಣನಿಗೆ ರಾಜಸ್ಥಾನ ಶೈಲಿಯಲ್ಲಿ ಕುಸುರಿ ಮಾಡಿರುವ, ಗಾಢ ಬಣ್ಣದ ಬಟ್ಟೆ ತೊಡಿಸಿ. ಹಳದಿ ಚಂದನವನ್ನು ಲೇಪಿಸಿ ಪರಮಾತ್ಮನನ್ನು ಜಪಿಸಿ. ಬೋಗುಣಿಯಲ್ಲಿ ಮೊಸರನ್ನು ಇಟ್ಟು ಭಗವಂತನಿಗೆ ಅರ್ಪಿಸಿ.

4. ಕರ್ಕಾಟಕ ರಾಶಿ Cancer: ಶ್ರೀ ಕೃಷ್ಣನಿಗೆ ಬಿಳಿ ಬಟ್ಟೆ ಒಪ್ಪಿಸಿ. ಹಾಲು ಅಥವಾ ಕೇಸರಿಯ ಸಿಹಿಯನ್ನು ಅರ್ಪಿಸಿ.

5. ಸಿಂಹ ರಾಶಿ Leo: ಶ್ರೀ ಕೃಷ್ಣನಿಗೆ ಗುಲಾಬಿ ವಸ್ತ್ರ ತೊಡಿಸಿ. ಅಷ್ಟಗಂಧದ ತಿಲಕ ಹಚ್ಚಿ. ಬೆಣ್ಣೆ ತಿನಿಸನ್ನಿಟ್ಟು ಕೃಷ್ಣಾರ್ಪಣ ಅನ್ನಿ.

6. ಕನ್ಯಾ ರಾಶಿ Virgo: ಶ್ರೀ ಕೃಷ್ಣನಿಗೆ ಸುಂದರ ಹಸಿರು ಬಟ್ಟೆ ಹಾಕಿ. ಕಡು ಹಾಲಿನಿಂದ ಮಾಡಿದ ಬರ್ಫಿ ಅರ್ಪಿಸಿ.

7. ತುಲಾ ರಾಶಿ Libra: ಶ್ರೀ ಕೃಷ್ಣನಿಗೆ ಕೇಸರಿ ಅಥವಾ ಗುಲಾಬಿ ವರ್ಣದ ವಸ್ತ್ರ ತೊಡಿಸಿ. ಬೆಣ್ಣೆ ಮತ್ತು ತುಪ್ಪದಲ್ಲಿ ಕರಿದ ತಿಂಡಿಯನ್ನು ದೇವಕಿಸುತನಿಗೆ ಅರ್ಪಿಸಿ.

8. ವೃಶ್ಚಿಕ ರಾಶಿ Scorpio: ಶ್ರೀ ಕೃಷ್ಣನಿಗೆ ಕೆಂಪು ಬಟ್ಟೆ ತೊಡಿಸಿ. ಬೆಣ್ಣೆ ಅಥವಾ ಮೊಸರಿನಿಂದ ಮಾಡಿದ ತಿಂಡಿಯನ್ನು ಅರ್ಪಿಸಿ.

9. ಧನು ರಾಶಿ Sagittarius: ಶ್ರೀ ಕೃಷ್ಣನಿಗೆ ಹಳಸಿ ಬಣ್ಣದ ವಸ್ತ್ರ ತೊಡಿಸಿ. ಹಳದಿ ಬಣ್ಣದಲ್ಲಿ ಸಿಹಿ ಪದಾರ್ಥ ತಯಾರಿಸಿ, ಅರ್ಪಿಸಿ.

10. ಮಕರ ರಾಶಿ Capricorn: ಶ್ರೀ ಕೃಷ್ಣನಿಗೆ ಕಿತ್ತಳೆ ಬಣ್ಣದ ವಸ್ತ್ರ ತೊಡಿಸಿ. ಸಕ್ಕರೆ ಸಿಹಿಯನ್ನು ಅರ್ಪಿಸಿ.

11. ಕುಂಭ ರಾಶಿ Aquarius: ನೀಲಿ ಬಟ್ಟೆ ತೊಡಿಸಿ. ಹಾಲಿನಿಂದ ಅಭಿಷೇಕ ಮಾಡಿ. ಬಾದೂಶಾ ಅರ್ಪಿಸಿ.

12. ಮೀನಾ ರಾಶಿ Pisces: ಪೀತಾಂಬರ ವಸ್ತ್ರ ತೊಡಿಸಿ. ಆಭೂಷಣಗಳನ್ನೂ ಹಾಕಿ. ಕೇಸರಿ ಮತ್ತು ಬೆಣ್ಣೆಯಿಂದ ಮಾಡಿದ ಮಿಠಾಯಿಗಳನ್ನು ಅರ್ಪಿಸಿ, ಕೃಷ್ಣಾರ್ಪಣಮಸ್ತು ಅನ್ನಿ.

(dress and offer sweets shri krishna according to your zodiac sign on Gokulashtami to get happiness and to remove sorrows)