ವಿಜಯೇಂದ್ರ ವೈಭವೀಕರಣಕ್ಕೆ ನನ್ನ ಅಭ್ಯಂತರವಿಲ್ಲ; ಆದ್ರೆ ಒಬ್ರ ಪ್ರಯತ್ನದಿಂದ ಗೆಲುವು ಸಾಧ್ಯವಿಲ್ಲ: KSE
ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಅದರಲ್ಲು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಹಿಂದೆ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರರವರ ಚಾಣಾಕ್ಷತೆ ಇದೆ ಎಂದು ರಾಜಕೀಯ ವಲಯದಲ್ಲಿ ಮಾತು ಶುರುವಾಗಿತ್ತು. ರಾಜಕೀಯ ವಲಯದ ಈ ಚರ್ಚೆಗೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದು, ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೆಲವರು ವಿಜಯೇಂದ್ರರನ್ನು ವೈಭವೀಕರಿಸುತ್ತಿದ್ದಾರೆ. ಹೀಗೆ ವೈಭವೀಕರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಒಬ್ಬರ ಪ್ರಯತ್ನದಿಂದ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಬದಲಿಗೆ ಸಂಘಟಿತ ಪ್ರಯತ್ನದಿಂದ […]

ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಅದರಲ್ಲು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಹಿಂದೆ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರರವರ ಚಾಣಾಕ್ಷತೆ ಇದೆ ಎಂದು ರಾಜಕೀಯ ವಲಯದಲ್ಲಿ ಮಾತು ಶುರುವಾಗಿತ್ತು.
ರಾಜಕೀಯ ವಲಯದ ಈ ಚರ್ಚೆಗೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದು, ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೆಲವರು ವಿಜಯೇಂದ್ರರನ್ನು ವೈಭವೀಕರಿಸುತ್ತಿದ್ದಾರೆ. ಹೀಗೆ ವೈಭವೀಕರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಒಬ್ಬರ ಪ್ರಯತ್ನದಿಂದ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಬದಲಿಗೆ ಸಂಘಟಿತ ಪ್ರಯತ್ನದಿಂದ ನಾವು ಗೆಲುವು ಸಾಧಿಸಿದ್ದೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಸಂಘಟಿತ ಪ್ರಯತ್ನದಿಂದ ಗೆಲುವು ಸಾಧ್ಯ.. ಅದರಲ್ಲೂ ಕೆಲವು ಮಾಧ್ಯಮಗಳು ವಿಜಯೇಂದ್ರನ ವೈಭವೀಕರಿಸುವ ಪ್ರಯತ್ನ ಮಾಡುತ್ತಿವೆ. ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಚುನಾವಣೆ ಗೆಲ್ಲಲ್ಲ, ಸಂಘಟಿತ ಪ್ರಯತ್ನದಿಂದ ಗೆಲುವು ಸಾಧ್ಯ ಎಂದರು. ಕ್ಷೇತ್ರಕ್ಕೆ ನಾಲ್ಕು ಮಂದಿ ಪ್ರಮುಖರನ್ನು ನೇಮಕ ಮಾಡ್ತೀವಿ. ಶಿರಾ ಉಪ ಚುನಾವಣೆಯಲ್ಲಿ ಗೋವಿಂದ ಕಾರಜೋಳ, ಸುರೇಶಗೌಡ, ವಿಜಯೇಂದ್ರ ಸೇರಿದಂತೆ ಹಲವರು ಅಲ್ಲೇ ಬೀಡು ಬಿಟ್ಟು ಕೆಲಸ ಮಾಡಿದರು.
ಆರ್ ಆರ್ ನಗರದಲ್ಲಿ ಸಚಿವ ಅಶೋಕ್, ಅಶ್ವತ್ಥ್ ನಾರಾಯಣ ಎಲ್ಲರೂ ಸಹ ಪ್ರಯತ್ನ ಮಾಡಿದರು. ಪರಿಷತ್ನಲ್ಲಿ ಸಹ ಅದೇ ಪ್ರಯತ್ನ ಮಾಡಿದೆವು. ಹೀಗಾಗಿ ಎಲ್ಲಾ ಚುನಾವಣೆಯಲ್ಲಿ ಸಹ ನಾವು ಗೆಲುವು ಸಾಧಿಸಿದ್ದೇವೆ. ಇಲ್ಲಿ ವಿಜಯೇಂದ್ರ ಪ್ರಯತ್ನ ಇಲ್ಲ ಅಂತಾ ಹೇಳಲ್ಲ. ಆದರೆ ನೀವು ವೈಭವೀಕರಿಸುತ್ತೀರಿ, ನಾವು ಏನೂ ಮಾಡಕ್ಕಾಗಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Published On - 12:27 pm, Tue, 17 November 20




