ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡೇ ಮಾಡ್ತೇನೆ, ಗೆದ್ದು ಮೋದಿ ಬಳಿ ಹೋಗಿಯೇ ಹೋಗ್ತೇನೆ: ಈಶ್ವರಪ್ಪ ಘೋಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 28, 2024 | 2:51 PM

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಲಾಗಿದೆ. ಹಾಗಾಗಿ ನನ್ನ ನಿವಾಸದಲ್ಲೇ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನಾನು ಗೆದ್ದ ನಂತರ ಮೋದಿ ಬಳಿ ಹೋಗಿಯೇ ಹೋಗುತ್ತೇನೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುಳ್ಳಿನ ಸರದಾರ ಎಂದು ವಾಗ್ದಾಳಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡೇ ಮಾಡ್ತೇನೆ, ಗೆದ್ದು ಮೋದಿ ಬಳಿ ಹೋಗಿಯೇ ಹೋಗ್ತೇನೆ: ಈಶ್ವರಪ್ಪ ಘೋಷಣೆ
ಕೆ.ಎಸ್.ಈಶ್ವರಪ್ಪ
Follow us on

ಶಿವಮೊಗ್ಗ, ಮಾರ್ಚ್​​ 28: ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನಾನು ಗೆದ್ದ ನಂತರ ಪ್ರಧಾನಿ ಮೋದಿ ಬಳಿ ಹೋಗಿಯೇ ಹೋಗುತ್ತೇನೆ ಎಂದು ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ನಗರದಲ್ಲಿ ಈಶ್ವರಪ್ಪ ನಿವಾಸದಲ್ಲಿ ನೂತನ ಚುನಾವಣಾ ಕಚೇರಿ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಲಾಗಿದೆ. ಹಾಗಾಗಿ ನನ್ನ ನಿವಾಸದಲ್ಲೇ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನನ್ನ ಮಗನನ್ನು ಎಂಪಿ ಮಾಡುತ್ತೇನೆ ಎಂದು ಸುಳ್ಳು ಹೇಳಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುಳ್ಳಿನ ಸರದಾರ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾರ್ಯಕರ್ತರ ನೋವನ್ನು ಹೋಗಲಾಡಿಸಬೇಕು. ಪಕ್ಷದಿಂದ ತೆಗೆದು ಹಾಕಿದ್ರೆ ಗೆದ್ದ ನಂತರ ಮತ್ತೆ ಬಿಜೆಪಿ ಸೇರ್ತೆನೆ. ತೆಗೆದು ಹಾಕಲಿಲ್ಲ ಅಂದ್ರೆ ಪಕ್ಷದಲ್ಲೇ ಇರುತ್ತೇನೆ. ರಾಘವೇಂದ್ರ ಸೋಲಿನ ನಂತರ ಬಿಎಸ್​​ ವಿಜಯೇಂದ್ರ‌ ರಾಜ್ಯಾಧ್ಯಕ್ಷ ಕಳೆದುಕೊಳುತ್ತಾನೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ

ರಾಜ್ಯದಲ್ಲಿ ಬಿಜೆಪಿ ಪರಿಶುದ್ದ ಮಾಡಬೇಕು ಎಂಬ ಹೆಮ್ಮೆ ಇದೆ. ಕಾರ್ಯಕರ್ತರ ನೋವನ್ನು ಹೋಗಲಾಡಿಸಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲಬಾರದು. ಸಿದ್ದರಾಮಯ್ಯ ಅವರ ಪರಿಸ್ಥಿತಿ ಏನಾಗಿದೆ. ತನ್ನ ಮಗನನ್ನು ನಿಲ್ಲಿಸುತ್ತೇನೆ ಅಂದರು, ಮಗನನ್ನು ನಿಲ್ಲಿಸಿದಾ? ಕಾಂಗ್ರೆಸ್​​ನಲ್ಲಿ ಅವರ ಪರಿಸ್ಥಿತಿ ಏನು? ವರುಣದಲ್ಲಿ ಹೊಂದಾಣಿಕೆ ಮಾಡಿಕೊಂಡರು. ರಾಜ್ಯದಲ್ಲಿ 27 ಕ್ಷೇತ್ರ ಎಸ್​​ಡಿಎ ಗೆಲ್ಲಬೇಕು. ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಗೆಲ್ಲಬೇಕು ಎಂದು ಹೇಳಿದ್ದಾರೆ.

ನನಗೆ ನಿರೀಕ್ಷೆ ಮೀರಿ ನನಗೆ ಬೆಂಬಲ ಕ್ಷೇತ್ರ ಸಿಗುತ್ತದೆ. ಅನೇಕರು ನಾನು ನಾಮಪತ್ರ ಸಲ್ಲಿಕೆ ಕಾಯುತ್ತಿದ್ದಾರೆ. ಬಳಿಕ ಬರುವುದಾಗಿ ಹೇಳುತ್ತಿದ್ದಾರೆ. ನಾನು ಆರ್​ಎಸ್​​ಎಸ್​ ಸೂಚನೆ ನಾನು ಮೀರಿಲ್ಲ. ಆದರೆ ಮೊನ್ನೆ ಮನೆಗೆ ಬಂದ ಆರ್​ಎಸ್​​ಎಸ್​ಗೆ ಕಾಲು ಬಿದ್ದು ಹೇಳಿರುವೆ. ನಾನು ಅವರಿಗೆ ಚುನಾವಣೆ ಸ್ಪರ್ಧೆ ಮಾಡುವುದಾಗಿ ಅವರಿಗೆ ಹೇಳಿರುವೆ. ಇದೇ ಮೋದಿ ಬಾರಿಗೆ ಆರ್​ಎಸ್​ಎಸ್​ ಸೂಚನೆ ಮೀರಿ ನಾನು ಚುನಾವಣೆ ಸ್ಪರ್ಧೆ ಮಾಡಿತ್ತಿರುವೆ.

ಇದನ್ನೂ ಓದಿ: ಶಿವಮೊಗ್ಗ ಬಂಡಾಯ ಅಭ್ಯರ್ಥಿ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲು

ರಾಜ್ಯದಲ್ಲಿ ನನಗೆ ಎಷ್ಟು ಸೀಟು ಬಿಜೆಪಿ ತೆಗೆದುಕೊಳ್ಳುತ್ತಾರೆ ಎನ್ನುವ ಭಯ ಶುರುವಾಗಿದೆ. ರಾಜ್ಯ ನಾಯಕರು ವರಿಷ್ಠರಿಗೆ ಏನೂ ಹೇಳುತ್ತಾರೆ ಗೊತ್ತಿಲ್ಲ. ನಾನು ಸೇರಿ ಬಿಜೆಪಿಯಿಂದ 28 ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಏ. 19 ರಂದು ನನಗೆ ಚುನಾವಣೆ ಸ್ಪರ್ಧೆ ಚಿಹ್ನೆ ಸಿಗುತ್ತದೆ. ಏ. 12 ರಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ನನ್ನ ಜೊತೆ ಎಲ್ಲ ಹಿಂದೂಗಳು ಇದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಿರುಗೇಟು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.