KSRTC ಪ್ರಯಾಣಿಕರಿಗೆ ಹೊಸ ವರ್ಷದ ಗುಡ್ ನ್ಯೂಸ್: ಬಸ್ ಟಿಕೆಟ್ ದರದಲ್ಲಿ ಭಾರೀ ಡಿಸ್ಕೌಂಟ್
ಹೊಸ ವರ್ಷದ ಆರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಾರ್ವಜನಿಕ ಪ್ರಯಾಣಿಕರಿಗೆ ಕರಾರಸಾ ನಿಗಮವು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದ್ದು, ಕೆಎಸ್ಆರ್ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಪ್ರಯಾಣ ದರಗಳಲ್ಲಿ ರಿಯಾಯಿತಿ ನೀಡಲಾಗಿದೆ. ಹಾಗಾದ್ರೆ, ನಿಮ್ಮ ಊರಿಗೆ ಬಸ್ ಟಿಕೆಟ್ ದರ ಎಷ್ಟು ಡಿಸ್ಕೌಂಟ್ ಎನ್ನುವುದನ್ನು ತಿಳಿದುಕೊಳ್ಳಿ.

ಬೆಂಗಳೂರು, (ಜನವರಿ 05): ಹೊಸ ವರ್ಷಕ್ಕೆ (New Year 2026) ಬಸ್ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಭರ್ಜರಿ ಗುಡ್ ನ್ಯೂಸ್ ನೀಡಿದೆ. KSRTC ಬಸ್ ನಲ್ಲಿ ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ. ಇನ್ನು ಎಲ್ಲಾ ರೀತಿಯ KSRTC ಬಸ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10 ರಿಂದ ಶೇ. 15ರ ವರೆಗೆ ಪ್ರಯಾಣದರಗಳನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಇದು ಇಂದಿನಿಂದ (ಜನವರಿ 5) ಜಾರಿಗೆ ಬಂದಿದೆ.
ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರಗಳಲ್ಲಿ ಶೇಕಡ 5 ರಿಂದ 15% ರವರೆಗೆ ರಿಯಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ತಲುಪಲು 7 ಗಂಟೆ ಸಾಕು
ಈ ಮಾರ್ಗದ ಬಸ್ ಟಿಕೆಟ್ ದರದಲ್ಲಿ ಡಿಸ್ಕೌಂಟ್
ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು.
ಅಂತರಾಜ್ಯ ಬಸ್ ಪ್ರಯಾಣ ದರದಲ್ಲಿ ರಿಯಾಯಿತಿ
ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪುಣೆ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಟಿಕೆಟ್ ದರದಲ್ಲಿ (ಶೇಕಡ 5 ರಿಂದ 15 ರಿಯಾಯಿತಿ) ಭರ್ಜರಿ ರಿಯಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ksrtc.in ಪಡೆಯಬಹುದಾಗಿದೆ.
ಟಿಕೆಟ್ ದರ ಎಷ್ಟು ರಿಯಾಯಿತಿ?
- ಬೆಂಗಳೂರು-ಮುಂಬೈ ಬಸ್ ಟಿಕೆಟ್ ದರ: ಮೊದಲು 2500ರೂ., ಈಗ 2000 ರೂಪಾಯಿ.
- ಬೆಂಗಳೂರು- ಪುಣೆ ಬಸ್ ಟಿಕೆಟ್ ದರ: ಮೊದಲು 2300 ರೂ., ಈಗ 1700 ರೂಪಾಯಿ.
- ಬೆಂಗಳೂರು-ಮುರಡೇಶ್ವರ ಟಿಕೆಟ್ ದರ: ಅಂಬಾರಿ ಉತ್ಸವ ಕ್ರಮವಾಗಿ 1900 ರೂ. ಸದ್ಯ 1700 ರೂಪಾಯಿ, ಅಂಬಾರಿ ಡ್ರೀಮ್ ಬಸ್ 1800 ರೂ. ಈಗ 1500 ರೂಪಾಯಿ.
- ಬೆಂಗಳೂರು-ಉಡುಪಿ/ಮಣಿಪಾಲ: ಅಂಬಾರಿ ಉತ್ಸವ ಬಸ್- ಮೊದಲು 1620 ರೂ, ಈಗ 1450ರೂ, ಅಂಬಾರಿ ಡ್ರೀಮ್ ಬಸ್ ಕ್ರಮವಾಗಿ 1560 ರೂ. 1300 ರೂ, ಐರಾವತ 2.0 ಬಸ್ 1440 ರೂ. ಈಗ 1260, ಐರಾವರ ಕ್ಲಬ್ ಕ್ಲಾಸ್ 1270 ರೂ. ಇದೀಗ 1060 ರೂಪಾಯಿ ಆಗಿದೆ.
- ಬೆಂಗಳೂರು-ದಾವಣಗೆರೆ ಬಸ್ ಐರಾವತ ಬಸ್ ಟಿಕೆಟ್ ಬೆಲೆ ಮೊದಲು 740 ರೂ. ಈಗ 700 ರೂಪಾಯಿ.
- ಬೆಂಗಳೂರು ಏರ್‌ಪೋರ್ಟ್- ದಾವಣಗೆರೆ ಫ್ಲೈ ಬಸ್ ಪ್ರಯಾಣದ ದರ 1250 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:19 pm, Mon, 5 January 26
