ರಾಜಕೀಯ ಒತ್ತಡದ ಮೂಲಕ ಕುರುಬರು ಮೀಸಲಾತಿ ಪಡೆಯಬೇಕು: ಸಚಿವ K.S. ಈಶ್ವರಪ್ಪ

ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಶಾಖಾ ಮಠದಲ್ಲಿ ಚಿಂತನಾ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿದ ಅವರು ಮೀಸಲು ಹೋರಾಟ ಯಾವ ಜನಾಂಗದ ವಿರುದ್ಧವೂ ಅಲ್ಲ. ಎಲ್ಲ ಸಮುದಾಯಗಳ ಪರ ನಾವು ಹೋರಾಟ ಮಾಡುತ್ತೇವೆ. ಪ್ರಧಾನಿಗೆ ಕುರುಬ ಸಮಾಜದ ಬೇಡಿಕೆ ಅರ್ಥೈಸುವ ಪ್ರಯತ್ನ ಮಾಡಿದ್ದೇವೆ. ಇದೀಗ ನಮ್ಮ ಶಕ್ತಿ ಪ್ರದರ್ಶನ ಮಾಡುವ ಆಗತ್ಯತೆ ಇದೆ ಎಂದ KS ಈಶ್ವರಪ್ಪ ತಿಳಿಸಿದ್ರು.

ರಾಜಕೀಯ ಒತ್ತಡದ ಮೂಲಕ ಕುರುಬರು ಮೀಸಲಾತಿ ಪಡೆಯಬೇಕು: ಸಚಿವ K.S. ಈಶ್ವರಪ್ಪ
ಸಾಧು ಶ್ರೀನಾಥ್​ Edited By:

Updated on: Dec 31, 2020 | 3:01 PM

ದಾವಣಗೆರೆ: ರಾಜಕೀಯ ಒತ್ತಡ ಇಲ್ಲದಿದ್ದರಿಂದ ST ಮೀಸಲಾತಿ ಸಿಕ್ಕಿಲ್ಲ. ಹೋರಾಟದ ಮೂಲಕ ಕುರುಬರು ಮೀಸಲಾತಿ ಪಡೀಬೇಕು ಎಂದು ಕುರುಬ ST ಮೀಸಲಾತಿ ಚಿಂತನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ರು.

ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಶಾಖಾ ಮಠದಲ್ಲಿ ಚಿಂತನಾ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿದ ಅವರು ಮೀಸಲು ಹೋರಾಟ ಯಾವ ಜನಾಂಗದ ವಿರುದ್ಧವೂ ಅಲ್ಲ. ಎಲ್ಲ ಸಮುದಾಯಗಳ ಪರ ನಾವು ಹೋರಾಟ ಮಾಡುತ್ತೇವೆ. ಪ್ರಧಾನಿಗೆ ಕುರುಬ ಸಮಾಜದ ಬೇಡಿಕೆ ಅರ್ಥೈಸುವ ಪ್ರಯತ್ನ ಮಾಡಿದ್ದೇವೆ. ಇದೀಗ ನಮ್ಮ ಶಕ್ತಿ ಪ್ರದರ್ಶನ ಮಾಡುವ ಆಗತ್ಯತೆ ಇದೆ ಎಂದು KS ಈಶ್ವರಪ್ಪ ತಿಳಿಸಿದ್ರು.

ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಪರೋಕ್ಷ ವಾಗ್ದಾಳಿ
ನಮ್ಮವರು ಮಂತ್ರಿ ಆಗಿದ್ದಾರೆ, ಮುಖ್ಯಮಂತ್ರಿ ಆಗಿದ್ದಾರೆ. ಆದರೆ ನಮ್ಮ ಕೆಲಸ ಆಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು. ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡ್ತೇವೆ. ಫೆ.7ರಂದು ಬೆಂಗಳೂರಿನಲ್ಲಿ ST ಹೋರಾಟ ಸಮಾವೇಶ ನಡೆಯಲಿದೆ. ಈ ಹೋರಾಟದಲ್ಲಿ ಕನಿಷ್ಠ 10 ಲಕ್ಷ ಜನರು ಸೇರಬೇಕು ಈಶ್ವರಪ್ಪ ಸಭೆಯಲ್ಲಿ ಹೇಳಿದ್ರು.

ಅಕ್ರಮ ಗಣಿ ಕಂಪನಿಯೊಂದಿಗೆ ಸಚಿವ ಈಶ್ವರಪ್ಪ ಸಂಬಂಧಿಗಳ ಒಡಂಬಡಿಕೆ?

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us