ಯಾರೋ ಸಿಂಪಲ್ ಸುಧಾ ಗಂಡ ಅಂತೆ:ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ವಾರಕ್ಕೆ 75 ಗಂಟೆಗಗಳ ಕಾಲ ಕೆಲಸ ಮಾಡಬೇಕು ಎಂದಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ವಿರುದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ವೇಳೆ ಕೆಲಸ ಅವಧಿ ಪ್ರಸ್ತಾಪಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂದ್ರು. ಆದ್ರೆ, ಆಯಮ್ಮ ಯಾರೋ ಸಿಂಪಲ್ ಸುಧಾ ಅಂತೆ ನನಗೆ ಗೊತ್ತಿಲ್ಲ, ಆಯಮ್ಮನ ಗಂಡ ಪತಿ ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಅಂದ್ರೆ ನಾವೇನು ಪ್ರಾಣಿಗಳಾ? ಎಂದು ನಾರಾಯಣ ಮೂರ್ತಿ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು, (ಮೇ,1): ವಾರಕ್ಕೆ 75 ಗಂಟೆಗಗಳ ಕಾಲ ಕೆಲಸ ಮಾಡಬೇಕು ಎಂದಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ (Infosys Founder Narayana Murthy) ಅವರ ವಿರುದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (Congress MLC BK Hariprasad) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಮಿಕ ದಿನಾಚರಣೆ (Labour Day 2026) ಕಾರ್ಯಕ್ರಮದ ವೇಳೆ ಕೆಲಸ ಅವಧಿ ಪ್ರಸ್ತಾಪಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂದ್ರು. ಆದ್ರೆ, ಆಯಮ್ಮ ಯಾರೋ ಸಿಂಪಲ್ ಸುಧಾ ಅಂತೆ ನನಗೆ ಗೊತ್ತಿಲ್ಲ, ಆಯಮ್ಮನ ಗಂಡ ಪತಿ ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಅಂದ್ರೆ ನಾವೇನು ಪ್ರಾಣಿಗಳಾ? ಎಂದು ನಾರಾಯಣ ಮೂರ್ತಿ ವಿರುದ್ಧ ಕಿಡಿಕಾರಿದ್ದಾರೆ.
ನಾವು ಮನುಷ್ಯರು. ನಾವು ಕೆಲಸ ಮಾಡಿಲ್ಲ ಅಂದ್ರೆ ಮಾಲೀಕರು ಅಲ್ಲ. ಮಾಲೀಕ ಕೆಲಸ ಕೊಡಬಹುದು, ನಾವು ಕೆಲಸ ಮಾಡಿದ್ರೇನೆ ಮಾಲೀಕ. ಎಲ್ಲಾ ಒಟ್ಟಿಗೆ ನಡೆಯಬೇಕು. ಸ್ವಾಭಿಮಾನ, ನಿಮ್ಮ ಹಕ್ಕು, ಸಮಾನತೆಗೆ ಹೋರಾಟ ಮಾಡಬೇಕು ಎಂದರು.
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ

