ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಭೀಕರ ಅಪಘಾತ: ಟ್ಯಾಂಕರ್ ಲಾರಿಗೆ ಸಿಲುಕಿ ದಿನಗೂಲಿ ನೌಕರ ಸ್ಥಳದಲ್ಲೇ ಸಾವು

| Updated By: ಸಾಧು ಶ್ರೀನಾಥ್​

Updated on: Mar 01, 2021 | 5:12 PM

ಟ್ಯಾಂಕರ್ ಲಾರಿಗೆ ಸಿಲುಕಿ ಸ್ಥಳದಲ್ಲೇ ವೃದ್ಧ ದುರ್ಮರಣ ಹೊಂದಿರುವ ಘಟನೆ ನಾಗಸಂದ್ರ ಮೆಟ್ರೋ ನಿಲ್ದಾಣ ಬಳಿ ನಡೆದಿದೆ. ಟ್ಯಾಂಕರ್​ ಲಾರಿಗೆ ಸಿಲುಕಿ ಹೆಬ್ಬಾಳದ ಚಿಕ್ಕೆಗೌಡ(64) ಸಾವನ್ನಪ್ಪಿದ್ದಾರೆ.

ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಭೀಕರ ಅಪಘಾತ: ಟ್ಯಾಂಕರ್ ಲಾರಿಗೆ ಸಿಲುಕಿ ದಿನಗೂಲಿ ನೌಕರ ಸ್ಥಳದಲ್ಲೇ ಸಾವು
ಟ್ಯಾಂಕರ್ ಲಾರಿಗೆ ಸಿಲುಕಿ ದಿನಗೂಲಿ ನೌಕರ ಸ್ಥಳದಲ್ಲೇ ಸಾವು
Follow us on

ಬೆಂಗಳೂರು: ಟ್ಯಾಂಕರ್ ಲಾರಿಗೆ ಸಿಲುಕಿ ಸ್ಥಳದಲ್ಲೇ ವೃದ್ಧ ದುರ್ಮರಣ ಹೊಂದಿರುವ ಘಟನೆ ನಾಗಸಂದ್ರ ಮೆಟ್ರೋ ನಿಲ್ದಾಣ ಬಳಿ ನಡೆದಿದೆ. ಟ್ಯಾಂಕರ್​ ಲಾರಿಗೆ ಸಿಲುಕಿ ಹೆಬ್ಬಾಳದ ಚಿಕ್ಕೆಗೌಡ(64) ಸಾವನ್ನಪ್ಪಿದ್ದಾರೆ. ಚಿಕ್ಕೇಗೌಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಪತ್ರ ಕೊಡುವುದಕ್ಕೆ ಬಂದಿದ್ದಾಗ ದುರ್ಘಟನೆ ಸಂಭವಿಸಿದೆ. ವೃದ್ಧ ಭೂಸ್ವಾಧೀನ ಕಚೇರಿಯಲ್ಲಿ ದಿನಗೂಲಿ ನೌಕರನಾಗಿದ್ದರು. ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜೆ.ಪಿ.ನಗರದಲ್ಲಿ ಆಟೋದಲ್ಲಿ ವ್ಯಕ್ತಿ ಶವ ಪತ್ತೆ
ಅತ್ತ, ಬೆಂಗಳೂರಿನ ಜೆ.ಪಿ.ನಗರದಲ್ಲಿ ಆಟೋದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಆಟೋದಲ್ಲಿ ಮಂಜೇಶ್(35) ಎಂಬುವರ ಮೃತದೇಹ ಪತ್ತೆಯಾಗಿದೆ. ಮಂಜೇಶ್​ 3 ದಿನದ ಹಿಂದೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೋರ್ಟ್ ಆವರಣದಲ್ಲೇ ಲಾಂಗ್​ನಿಂದ ಮನಸ್ಸೋ ಇಚ್ಛೆ ಕೊಚ್ಚಿ ಕೊಚ್ಚಿ ವಕೀಲನ ಭೀಕರ ಹತ್ಯೆ
ಕೋರ್ಟ್ ಆವರಣದಲ್ಲೇ ವಕೀಲನನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ನಡೆದಿದೆ. ಫೆಬ್ರವರಿ 27ರಂದು ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಕೀಲನ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ತಾರಿಹಳ್ಳಿ ವೆಂಕಟೇಶ್ ಹತ್ಯೆಯಾದ ವಕೀಲ ಎಂದು ತಿಳಿದುಬಂದಿದೆ. ವಕೀಲನನ್ನು ಆತನ ಸಂಬಂಧಿಕನಾದ ಮನೋಜ್ ಕೊಲೆಗೈದಿದ್ದಾನೆ.

ಮನೋಜ್ ಲಾಂಗ್​ನಿಂದ ವೆಂಕಟೇಶ್ರನ್ನು ಮನಸ್ಸೋ ಇಚ್ಛೆ ಕೊಚ್ಚಿ ಕೊಚ್ಚಿ ಕೊಲೆ ಮಾಡುತ್ತಿರುವ  ಕೃತ್ಯ ಕಂಡ ಇತರೆ ವಕೀಲರು ಹಾಗೂ ನೆರೆದವರು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಹೊಸಪೇಟೆ ನಗರ ಠಾಣೆಯ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಕೊಲೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತೆಲಂಗಾಣ-ಒಡಿಶಾ ಗಡಿ ಭಾಗದಲ್ಲಿ ಗಾಂಜಾ ಸಾಗಿಸ್ತಿದ್ದವರ ಸೆರೆ
ತೆಲಂಗಾಣ-ಒಡಿಶಾ ಗಡಿ ಭಾಗದಲ್ಲಿ ಗಾಂಜಾ ಸಾಗಿಸ್ತಿದ್ದವರು ಅರೆಸ್ಟ್​ ಆಗಿರುವ ಘಟನೆ ವರದಿಯಾಗಿದೆ. ಗಡಿ ಭಾಗದಲ್ಲಿ ಗಾಂಜಾ ಸಾಗಿಸುತ್ತಿದ್ದ 8 ಆರೋಪಿಗಳ ಬಂಧನವಾಗಿದೆ. ಹೈದರಾಬಾದ್ ವಲಯದ ಎನ್​ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಎಸ್.ಪವಾರ್, ವಿ.ಪವಾರ್, ಬಿ.ವಾರೆ, ಡಿ.ದೇಶಮುಖ್, ಎಂ.ದೋಟ್ರೆ, ಗುಂಜಾಲ್, ಗಾಂಧಿ, ಸನಪ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 681 ಕಿಲೋಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಹೊರಗುತ್ತಿಗೆ ನೌಕರರ PF​​​ ತುಂಬುವಲ್ಲಿ ಗೋಲ್​ಮಾಲ್?
32 ಇಲಾಖೆಯ ನೌಕರರ PF ತುಂಬುವಲ್ಲಿ ಗೋಲ್​ಮಾಲ್ ನಡೆದಿರುವ ಘಟನೆ ಗದಗದ KDP ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾಗಾಗಿ, ಜಿಲ್ಲೆಯ ಹೊರಗುತ್ತಿಗೆ ನೌಕರರ PF ಬಗ್ಗೆ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಆದೇಶ ನೀಡಿದ್ದಾರೆ. ಇದಲ್ಲದೆ, ಏಜೆನ್ಸಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವಂತೆ ಸೂಚನೆ ಸಹ ನೀಡಲಾಗಿದೆ. ಕೇಸ್ ಹಾಕಿ ಏಜೆನ್ಸಿಯನ್ನು ಬ್ಲ್ಯಾಕ್​ಲಿಸ್ಟ್​​ಗೆ ಸೇರಿಸುವಂತೆ ಸೂಚನೆ ಕೊಡಲಾಗಿದೆ. ಗೋಲ್​ಮಾಲ್ ಆದ ಇಲಾಖೆ ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸಲು ಸಹ ಆದೇಶ ನೀಡಲಾಗಿದೆ.

ಇದನ್ನೂ ಓದಿ: ಮೋದಿ ನನಗೆ ಆತ್ಮೀಯರು, ಆದರೆ ಅವರ ಬಳಿ ಮಾತಾಡೋಕೆ ಹೋದರೆ ರಾಹುಲ್​ ಗಾಂಧಿ ಮಾತಿಗೆ ವಿಷಯ ಸಿಕ್ಕಂತಾಗುತ್ತೆ: ಬಿ.ಆರ್​.ಶೆ್ಟ್ಟಿ