ಎರಡು ಸಮುದಾಯದ ನಡುವೆ ಮಾರಾಮಾರಿ: ಬಾಳೆ ಗಿಡ, ಹುಲ್ಲಿನ ಮೆದೆ ನಾಶ
ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಎರಡು ಕಡೆಯವರಿಗೂ ಗಂಭೀರವಾಗಿ ಪೆಟ್ಟು ಬಿದ್ದಿದೆ. ಇದರ ಜೊತೆಗೆ ಒಂದು ಸಮುದಾಯದವರು ಮತ್ತೊಂದು ಸಮುದಾಯಕ್ಕೆ ಸೇರಿದವರ ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ.
ಮೈಸೂರು: ಇತ್ತೀಚಿಗೆ ವೈಯಕ್ತಿಕ ಜಗಳಗಳಿಗೆ ಜಾತಿ ಬಣ್ಣ ಕಟ್ಟುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಜೊತೆಗೆ ಈ ರೀತಿ ಜಗಳಗಳಾದಾಗ ಬೆಳೆಗಳ ಮೇಲೆ ತಮ್ಮ ಕೋಪವನ್ನು ತೀರಿಸಿಕೊಳ್ಳುವ ಕೆಟ್ಟ ಮನಸ್ಥಿತಿಗೆ ಜನರು ತಲುಪಿದ್ದಾರೆ. ಇಂತಹದ್ದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಎರಡು ಕಡೆಯವರಿಗೂ ಗಂಭೀರವಾಗಿ ಪೆಟ್ಟು ಬಿದ್ದಿದೆ. ಇದರ ಜೊತೆಗೆ ಒಂದು ಸಮುದಾಯದವರು ಮತ್ತೊಂದು ಸಮುದಾಯಕ್ಕೆ ಸೇರಿದವರ ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಹುಲ್ಲಿನ ಮೆದೆಗೆ ಬೆಂಕಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ರೈತ ಬಾಲು ಅವರ ಹುಲ್ಲಿನ ಮೆದೆ ಭಸ್ಮವಾಗಿದೆ. ರೈತ ರೇವಣ್ಣ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ಕತ್ತರಿಸಿ ಹಾಕಲಾಗಿದೆ. ಘಟನೆಯಲ್ಲಿ ಒಂದು ಸಮುದಾಯದ ಇಬ್ಬರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳೆ ನಾಶಕ್ಕೆ ಕಾರಣ 15 ದಿನದ ಹಿಂದೆ ಗ್ರಾಮದಲ್ಲಿ ನಡೆದ ಬೈಕ್ ವಿಚಾರವಾಗಿ ನಡೆದ ಗಲಾಟೆ. ಒಂದು ಬೈಕ್ ಅಡವಿಟ್ಟುಕೊಳ್ಳುವ ಬಗ್ಗೆ ಎರಡು ಸಮುದಾಯದ ಯುವಕರ ನಡುವೆ ಗಲಾಟೆಯಾಗಿ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ನಂತರ ಎಲ್ಲವೂ ತಿಳಿಯಾಗಿತ್ತು. ಫೆಬ್ರವರಿ 27ಕ್ಕೆ ಮತ್ತೆ ಇದೇ ವಿಚಾರಕ್ಕೆ ಎರಡು ಸಮುದಾಯದವರ ನಡುವೆ ಗಲಾಟೆ ನಡೆದು ರಾದ್ಧಾಂತ ಆಗಿದೆ. ಒಂದು ಸಮುದಾಯದವರ ವಿರುದ್ಧ ಹಲ್ಲೆ ನಡೆಸಿದ ಹಾಗೂ ಬೆಳೆ ನಾಶ ಮಾಡಿದ ಆರೋಪ ಕೇಳಿ ಬಂದಿದೆ. ಆದರೆ ಆ ಆರೋಪವನ್ನು ಆ ಸಮುದಾಯದವರು ಸಾರಾಸಗಟಾಗಿ ನಿರಾಕರಿಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ
Baarack Sheep: ಈ ಪರಿ ಉಣ್ಣೆ ಬೆಳೆಸಿಕೊಂಡ ಕುರಿಯನ್ನು ಎಲ್ಲಾದರೂ ನೋಡಿದ್ದೀರಾ?