1 ರೂಪಾಯಿ ಗೌರವಧನ ಸಾಕು: ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷ ಮದನ್ ಗೋಪಾಲ್
ಇಂದು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಎಂ. ಮದನ್ ಗೋಪಾಲ್, ರಾಜ್ಯ ಸರ್ಕಾರದಿಂದ ಗೌರವ ಧನವಾಗಿ ಒಂದು ರೂಪಾಯಿ ಪಡೆಯಲು ನಿರ್ಧಾರ ಮಾಡಿದ್ದಾರೆ.
ಬೆಂಗಳೂರು: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಮದನಗೋಪಾಲ್ ಸೋಮವಾರ (ಮಾರ್ಚ್ 1) ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷ ಜವಾಬ್ದಾರಿ ಸ್ವೀಕರಿಸುತ್ತೇನೆ ಆದರೆ ಯಾವುದೇ ವೇತನ, ಭತ್ಯೆ ಪಡೆಯುವುದಿಲ್ಲ. ಗೌರವಧನವಾಗಿ ಒಂದು ರೂಪಾಯಿ ಕೊಡಿ ಸಾಕು ಎಂದು ಮದನ ಗೋಪಾಲ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಭ್ರಷ್ಟಾಚಾರ ಮತ್ತು ಸರ್ಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಇಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಇಂತಹ ಅಧಿಕಾರಿಗಳು ಸಿಗುವುದು ಬಹಳ ಅಪರೂಪ. ಇನ್ನಾದರೂ ಸರ್ಕಾರದ ಹಣ ಈ ರೀತಿಯ ನಿಷ್ಟಾವಂತ ಅಧಿಕಾರಿಗಳಿಂದ ಬಡವರ ನೆರವಿಗೆ ಬರಲಿ ಎನ್ನುವುದು ನಮ್ಮ ಆಶಯ.
ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮದನಗೋಪಾಲ್ ಇಲಾಖೆಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕ್ರಮಗಳು ಮೂಲಕ ಜನಪ್ರಿಯರಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಪ್ರಧಾನಿ ಮೋದಿ ನಾಡಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು; ಗುಜರಾತ್ ರಾಜಕೀಯದ ಒಳಗುಟ್ಟು ಉಸುರುವುದೇನು?