ಹಾಸನ, ಜುಲೈ 26: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಪರಿಣಾಮ ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಯಡಕುಮೇರಿ ನಡುವಿನ ರೈಲ್ವೆ (railway) ಹಳಿಯ ಮೇಲೆ ಮಣ್ಣು ಕುಸಿತವಾಗಿ (Landslide) ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದಾಗಿದೆ. ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಬಂದ ಆಗಿದೆ.
ಕಿಲೋ ಮೀಟರ್ ನಂಬರ್ 63ರಲ್ಲಿ ಹಳಿಯ ಮೇಲೆ ಮಣ್ಣು ಕುಸಿತವಾಗಿದೆ. ಸದ್ಯ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿಗಳು ದೌಡಾಸಿದ್ದು, ರೈಲ್ವೆ ಇಲಾಖೆ ಅಧಿಕಾರಿಗಳಿಂದ ರೈಲು ಮಾರ್ಗ ಬದಲಿಸಲಾಗಿದೆ.
ಹಾಸನ – ಹೇಮಾವತಿ ಪ್ರವಾಹಕ್ಕೆ ಹೊಳೆನರಸೀಪುರ ಪಟ್ಟಣದ ಕುವೆಂಪು ಬಡಾವಣೆಯ ಮನೆಗಳು ಜಲಾವೃತವಾಗಿವೆ. ಹೇಮಾವತಿ ನದಿ ಉಕ್ಕಿ ಹರಿದು ಸುಮಾರು 30 ಮನೆಗಳು ಜಲಾವೃತವಾಗಿವೆ. ರಾತ್ರಿ ಹೇಮಾವತಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ: ಹಾಸನ: ಧಾರಾಕಾರ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ, 700 ವರ್ಷ ಹಳೆಯ ಮಠದ ಕಟ್ಟಡ ಹಾನಿ
ಚನ್ನಪಟ್ಟಣ ರಸ್ತೆಯ ಕುವೆಂಪು ಬಡಾವಣೆಯಲ್ಲಿ ಪ್ರವಾಹ ಉಂಟಾಗಿದ್ದು, ರಾತ್ರೋ ರಾತ್ರಿ ನಿವಾಸಿಗಳು ಮನೆ ಖಾಲಿ ಮಾಡಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಪ್ರತೀ ಬಾರಿ ಮಳೆಯಾದಾಗಲು ಇದೇ ಸಮಸ್ಯೆ ಎದುರಾಗುತ್ತದೆ.
ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಬೃಹತ್ ಮರ ಬಿದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ತಾಳಗುಪ್ಪ ಕಡೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಮೇಲೆ ಅರಸಾಳು ಬಳಿ ರಾತ್ರಿ 8:35 ರ ಸುಮಾರಿಗೆ ಭಾರಿ ಗಾತ್ರದ ಮರ ಬಿದಿದೆ.
ಇದನ್ನೂ ಓದಿ: ಶೃಂಗೇರಿ ಮಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆಯುದ್ದಕ್ಕೂ ಮಣ್ಣು, ಬೃಹತ್ ಬಿರುಕು
ಬೃಹತ್ ಮರ ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಚಲಿಸುತ್ತಿದ್ದ ರೈಲಿನ ಮೇಲೆ ಮರ ಬಿದ್ದರೂ ಅನಾಹುತ ತಪ್ಪಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಸದ್ಯ ಘಟನೆಯಿಂದ ತಾಳಗುಪ್ಪ ಕಡೆ ಸಂಚರಿಸುವ ರೈಲುಗಳಲ್ಲಿ ಕೆಲ ಗಂಟೆ ವಿಳಂಬ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 pm, Fri, 26 July 24