ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದೆ. ನಿನ್ನೆಯವರೆಗೂ 315ಕ್ಕೆ ಇದ್ದ ಸೋಂಕಿತರ ಸಂಖ್ಯೆ ಇದೀಗ 353ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 38 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮೈಸೂರು 12, ಬೆಂಗಳೂರು 9, ಮಂಡ್ಯ 3, ಚಿಕ್ಕಬಳ್ಳಾಪುರ 3, ಬಳ್ಳಾರಿ ಜಿಲ್ಲೆ ಹೊಸಪೇಟೆಯ 7, ವಿಜಯಪುರದ ಇಬ್ಬರು, ದಕ್ಷಿಣ ಕನ್ನಡ, ಬೀದರ್ ಜಿಲ್ಲೆಯ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ ಇದುವರೆಗೂ 82 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 13 ಜನರು ಮೃತಪಟ್ಟಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ:
ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 12,759
ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ- 420
ದೇಶದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 1,514
ಜಗತ್ತಿನಲ್ಲಿ ಕೊರೊನಾ ಸೋಂಕಿತರ ಲೇಟೆಸ್ಟ್ ಅಪ್ಡೇಟ್ಸ್:
ಸದ್ಯ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ- 21,80,003
ಈವರೆಗೆ ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ- 1,45,417
ವಿಶ್ವದಲ್ಲಿ ನಿನ್ನೆ ಒಂದೇ ದಿನ ಮೃತಪಟ್ಟವರ ಸಂಖ್ಯೆ- 6,963
ವಿಶ್ವದಲ್ಲಿ ನಿನ್ನೆ ಒಂದೇ ದಿನ ಸೋಂಕು ತಗುಲಿದವರ ಸಂಖ್ಯೆ- 93,671
ಅಮೆರಿಕ-6,77,056 ಜನರಿಗೆ ಸೋಂಕು, 34,580 ಬಲಿ
ಇಟಲಿ-1,68,941 ಜನರಿಗೆ ಸೋಂಕು, 22,170 ಜನ ಬಲಿ
ಸ್ಪೇನ್-1,84,948 ಜನರಿಗೆ ಸೋಂಕು, 19,315 ಜನ ಬಲಿ
ಫ್ರಾನ್ಸ್-1,65,027 ಜನರಿಗೆ ಸೋಂಕು, 17,920 ಜನ ಬಲಿ
ಯುಕೆ-1,03,093 ಜನರಿಗೆ ಸೋಂಕು, 13,729 ಜನ ಬಲಿ
ಇರಾನ್-77,995 ಜನರಿಗೆ ಸೋಂಕು, 4,869 ಜನ ಬಲಿ
ಬೆಲ್ಜಿಯಂ-34,809 ಜನರಿಗೆ ಸೋಂಕು, 4,857 ಜನ ಬಲಿ
ಜರ್ಮನಿ-1,37,698 ಜನರಿಗೆ ಸೋಂಕು, 4,052 ಜನ ಬಲಿ
ಚೀನಾ-82,341 ಜನರಿಗೆ ಸೋಂಕು, 3,342 ಜನ ಬಲಿ
Published On - 1:02 pm, Fri, 17 April 20