ಸಂತೋಷ-ಸಮಾಧಾನ ಒಟ್ಟೊಟ್ಟಿಗೇ! ಉಡುಪಿ ಜಿಲ್ಲೆ ಇದರಲ್ಲೂ ನಂ.1 ಸ್ಥಾನದಲ್ಲಿದೆ

ಉಡುಪಿ: ಮಹಾಮಾರಿ ಕೊರೊನಾ ಸೋಂಕು ಕಾಲದಲ್ಲಿ ಇಂತಹ ಸುದ್ದಿಗಳು ಸಂತೋಷ-ಸಮಾಧಾನಗಳನ್ನು ಒಟ್ಟೊಟ್ಟಿಗೇ ನೀಡುತ್ತವೆ! ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಸದಾ ಮೊದಲ ಸ್ಥಾನವನ್ನೇ ಅಲಂಕರಿಸುತ್ತಿರುತ್ತದೆ. ಕೊರೊನಾ ಟೆಸ್ಟಿಂಗ್​ನಲ್ಲಿಯೂ ಉಡುಪಿ ಜಿಲ್ಲೆ ನಂಬರ್​ 1 ಸ್ಥಾನದಲ್ಲಿದೆ. ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ನಂಬರ್​ 1 ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಈವರೆಗೆ ಪ್ರತಿ ಲಕ್ಷ ಜನರಿಗೆ 34 ಟೆಸ್ಟ್ ನಡೆಸಲಾಗಿದೆ. 403 ಜನರಿಗೆ ಸ್ಯಾಂಪಲ್‌ ಟೆಸ್ಟ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೇವಲ ಮೂರು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇನ್ನು, ಈವರೆಗೆ ಇಬ್ಬರು […]

ಸಂತೋಷ-ಸಮಾಧಾನ ಒಟ್ಟೊಟ್ಟಿಗೇ! ಉಡುಪಿ ಜಿಲ್ಲೆ ಇದರಲ್ಲೂ ನಂ.1 ಸ್ಥಾನದಲ್ಲಿದೆ
Follow us
ಸಾಧು ಶ್ರೀನಾಥ್​
|

Updated on:Apr 17, 2020 | 5:21 PM

ಉಡುಪಿ: ಮಹಾಮಾರಿ ಕೊರೊನಾ ಸೋಂಕು ಕಾಲದಲ್ಲಿ ಇಂತಹ ಸುದ್ದಿಗಳು ಸಂತೋಷ-ಸಮಾಧಾನಗಳನ್ನು ಒಟ್ಟೊಟ್ಟಿಗೇ ನೀಡುತ್ತವೆ! ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಸದಾ ಮೊದಲ ಸ್ಥಾನವನ್ನೇ ಅಲಂಕರಿಸುತ್ತಿರುತ್ತದೆ. ಕೊರೊನಾ ಟೆಸ್ಟಿಂಗ್​ನಲ್ಲಿಯೂ ಉಡುಪಿ ಜಿಲ್ಲೆ ನಂಬರ್​ 1 ಸ್ಥಾನದಲ್ಲಿದೆ. ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ನಂಬರ್​ 1 ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಈವರೆಗೆ ಪ್ರತಿ ಲಕ್ಷ ಜನರಿಗೆ 34 ಟೆಸ್ಟ್ ನಡೆಸಲಾಗಿದೆ. 403 ಜನರಿಗೆ ಸ್ಯಾಂಪಲ್‌ ಟೆಸ್ಟ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೇವಲ ಮೂರು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇನ್ನು, ಈವರೆಗೆ ಇಬ್ಬರು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಕೊರೊನಾದಿಂದ ಸಾವು ಸಂಭವಿಸಿಲ್ಲ. ಇನ್ನೂ ಮುಖ್ಯವಾಗಿ ಕಳೆದ 19 ದಿನಗಳಿಂದ ಯಾವುದೇ ಕೇಸ್​ ಪತ್ತೆಯಾಗಿಲ್ಲ.

ಇಡೀ ರಾಜ್ಯದಲ್ಲಿ ಹೇಗಿದೆ ಪರಿಸ್ಥಿತಿ: ಈ ಮಧ್ಯೆ, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 359 ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇಂದು ಹೊಸದಾಗಿ 44 ಜನರಿಗೆ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಈವರೆಗೆ ಕೊರೊನಾದಿಂದ 13 ಜನ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ ಚಿಕಿತ್ಸೆ ಬಳಿಕ 88 ಸೋಂಕಿತರು ಗುಣಮುಖರಾಗಿದ್ದಾರೆ.

Published On - 5:10 pm, Fri, 17 April 20