ಛೆ! ಇದೆಂಥಾ ಪರಿಸ್ಥಿತಿ? ಜಯದೇವ ಆಸ್ಪತ್ರೆಯ 10 ಸಿಬ್ಬಂದಿಗೆ ಕ್ವಾರಂಟೈನ್!

ಛೆ! ಇದೆಂಥಾ ಪರಿಸ್ಥಿತಿ? ಜಯದೇವ ಆಸ್ಪತ್ರೆಯ 10 ಸಿಬ್ಬಂದಿಗೆ ಕ್ವಾರಂಟೈನ್!

ಬೆಂಗಳೂರು: ಕೊರೊನಾ ಸೋಂಕು ಹೇಗೆಲ್ಲಾ ಕಾಡಲಾರಂಭಿಸಿದೆ ನೋಡಿ. ಜಯದೇವ ಆಸ್ಪತ್ರೆಯ 10 ಸಿಬ್ಬಂದಿಯನ್ನು ಈಗ ಕ್ವಾರಂಟೈನ್ ಮಾಡಲಾಗಿದೆ! ಏನಾಯಿತೆಂದ್ರೆ, ಏಪ್ರಿಲ್ 14ರಂದು 252ನೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಆದ್ರೆ ಆ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮೂರು ದಿನಗಳ ನಂತರ ಆತನಿಗೆ ಸೋಂಕಿರುವುದು ಗೊತ್ತಾಗಿತ್ತು. ಹೀಗಾಗಿ ಜಯದೇವ ಆಸ್ಪತ್ರೆಯ 10 ಸಿಬ್ಬಂದಿಗೆ ಈಗ ಕ್ವಾರಂಟೈನ್ ಮಾಡಲಾಗಿದೆ. ಕ್ಯಾಶುವಲ್ಟಿ ಸಿಬ್ಬಂದಿಗೆ ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್ ಬಳಕೆಯಾಗ್ತಿದೆ. […]

sadhu srinath

|

Apr 17, 2020 | 11:22 AM

ಬೆಂಗಳೂರು: ಕೊರೊನಾ ಸೋಂಕು ಹೇಗೆಲ್ಲಾ ಕಾಡಲಾರಂಭಿಸಿದೆ ನೋಡಿ. ಜಯದೇವ ಆಸ್ಪತ್ರೆಯ 10 ಸಿಬ್ಬಂದಿಯನ್ನು ಈಗ ಕ್ವಾರಂಟೈನ್ ಮಾಡಲಾಗಿದೆ! ಏನಾಯಿತೆಂದ್ರೆ, ಏಪ್ರಿಲ್ 14ರಂದು 252ನೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಆದ್ರೆ ಆ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮೂರು ದಿನಗಳ ನಂತರ ಆತನಿಗೆ ಸೋಂಕಿರುವುದು ಗೊತ್ತಾಗಿತ್ತು. ಹೀಗಾಗಿ ಜಯದೇವ ಆಸ್ಪತ್ರೆಯ 10 ಸಿಬ್ಬಂದಿಗೆ ಈಗ ಕ್ವಾರಂಟೈನ್ ಮಾಡಲಾಗಿದೆ.

ಕ್ಯಾಶುವಲ್ಟಿ ಸಿಬ್ಬಂದಿಗೆ ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್ ಬಳಕೆಯಾಗ್ತಿದೆ. ಹಾಗಾಗಿ ಸೋಂಕಿನ ಅಪಾಯವಿಲ್ಲ ಎಂದೂ ಆಸ್ಪತ್ರೆಯ ಮೂಲಗಳು ತಿಳಿಸಿವೆ. ರೋಗಿ ದಾಖಲು ಆಗಿರಲಿಲ್ಲ, ಕೇವಲ ಕೆಲವು ಸಮಯ ವೈದ್ಯರ ಬಳಿ ಅನಾರೋಗ್ಯದ ನಿಮಿತ್ತ ಭೇಟಿಯಾಗಿ ಹೋಗಿದ್ದರು. ಆದರೂ ಮುನ್ನೆಚ್ಚರಿಕೆಯಾಗಿ ಕ್ಯಾಶುವಾಲ್ಟಿಯ 10 ಜನ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇಬ್ಬರು ವೈದ್ಯರು, 5 ಜನ ಸ್ಟಾಫ್ ನರ್ಸ್‌ಗಳು, 3 ಜನ ಗ್ರೂಪ್ ಡಿ ನೌಕಕರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಅವರನ್ನ ನಿಗಾವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow us on

Related Stories

Most Read Stories

Click on your DTH Provider to Add TV9 Kannada