ಮೂವರ ಮೇಲೆ ದಾಳಿ: ಸಿಟ್ಟಿಗೆದ್ದು ಹುಡುಕಿ ಚಿರತೆಯನ್ನೇ ಕೊಂದು ಆಂಬ್ಯುಲೆನ್ಸ್​ಗೆ ಹಾಕಿದ ಗ್ರಾಮಸ್ಥರು

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಡಿ.ಕರಡಿಗುಡ್ಡ ಗ್ರಾಮದ ಬಳಿ ಪ್ರತ್ಯಕ್ಷವಾಗಿದ್ದ ಚಿರತೆಯನ್ನು ಓಡಿಸಲು ಹೋದ ಮೂವರ ಮೇಲೆ ಇಂದು ಬೆಳಿಗ್ಗೆ ದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ವೇಳೆ ಕಂಡ ಚಿರತೆಯನ್ನು ಸಾರ್ವಜನಿಕರು ಕೊಂದು ಹಾಕಿದ್ದಾರೆ. ಆ ಮೂಲಕ ಜನರು ತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದಾರೆ.

ಮೂವರ ಮೇಲೆ ದಾಳಿ: ಸಿಟ್ಟಿಗೆದ್ದು ಹುಡುಕಿ ಚಿರತೆಯನ್ನೇ ಕೊಂದು ಆಂಬ್ಯುಲೆನ್ಸ್​ಗೆ ಹಾಕಿದ ಗ್ರಾಮಸ್ಥರು
ಮೂವರ ಮೇಲೆ ದಾಳಿ: ಸಿಟ್ಟಿಗೆದ್ದು ಹುಡುಕಿ ಚಿರತೆಯನ್ನೇ ಕೊಂದು ಆಂಬ್ಯುಲೆನ್ಸ್​ಗೆ ಹಾಕಿದ ಗ್ರಾಮಸ್ಥರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2024 | 7:18 PM

ರಾಯಚೂರು, ಜುಲೈ 07: ಜಿಲ್ಲೆಯ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ‌ (leopard) ಹೆದರಿಸಲು ಹೋದ ಮೂವರ ಮೇಲೆ ದಾಳಿ ಮಾಡಿರುವಂತಹ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಆದರೆ ಇದೀಗ ಚಿರತೆ ತಪ್ಪಿಸಿಕೊಂಡರೇ ಮತ್ತೆ ದಾಳಿ‌ ನಡೆಸುವ ಭಯದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆಯೇ ಸಾರ್ವಜನಿಕರು ಚಿರತೆ ಕೊಂದು (killed) ಹಾಕಿದ್ದಾರೆ. ಆ ಮೂಲಕ ಜನರು ತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದಾರೆ. ಬಳಿಕ ಪಶು ಆಂಬ್ಯುಲೆನ್ಸ್​ನಲ್ಲಿ ಚಿರತೆ ಹಾಕಿ ಸಾಗಾಟ ಮಾಡಲಾಗಿದೆ. ದೇವದುರ್ಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿರತೆ ಓಡಿಸಲು ಹೋದ ಮೂವರ ಮೇಲೆ ಬೆಳಿಗ್ಗೆ ದಾಳಿ ಹಿನ್ನೆಲೆ ಅರಣ್ಯ ಇಲಾಖೆ‌ ಸಿಬ್ಬಂದಿಯಿಂದ ಚಿರತೆ ಸೆರೆಗೆ ಕಾರ್ಯಾಚರಣೆ ಮಾಡಲಾಗಿತ್ತು. ಕಾರ್ಯಾಚರಣೆ ವೇಳೆ ಸಿಗದ ಚಿರತೆ ನಂತರ ಸಿಕ್ಕಿದ್ದು, ಸ್ಥಳೀಯರು ಸಾಯಿಸಿದ್ದಾರೆ.

ಬೆಮೆಲ್ ಕೈಗಾರಿಕೆ ಸುತ್ತಮುತ್ತ ಆಗಾಗ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನರು

ಕೋಲಾರ: ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿ ಪ್ರದೇಶ ಹಾಗೂ ಬೆಮೆಲ್ ಕೈಗಾರಿಕೆ ಸುತ್ತಮುತ್ತ ಆಗಾಗ ಚಿರತೆ ಪ್ರತ್ಯಕ್ಷವಾಗುವ ಮೂಲಕ ಜನರಲ್ಲಿ ಆತಂಕ ಸೃಷ್ಠಿಸಿತ್ತು. ಪ್ರತಿಷ್ಠಿತ ಬೆಮೆಲ್ ಕೈಗಾರಿಕೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಇಲ್ಲಿನ ಕಾರ್ಮಿಕರು ಭಯದ ವಾತಾವರಣದಲಲಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ರಾಯಚೂರು: ಚಿರತೆ ಹೆದರಿಸಲು ಹೋದವರ ಮೇಲೆ ಚಿರತೆ ದಾಳಿ, ಮೂವರಿಗೆ ಗಂಭೀರ ಗಾಯ

ಬೆಮೆಲ್ ಸೆಕ್ಯುರಿಟಿ ಕ್ಯಾಬಿನ್‌ನಲ್ಲಿ ಚಿರತೆ ಓಡಾಟ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ಕಾರ್ಮಿಕರಲ್ಲಿ ಆತಂಕ ನಿರ್ಮಾಣವಾಗಿತ್ತು. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬೆಮೆಲ್ ಕೈಗಾರಿಕೆ ಹಾಗೂ ಚಿನ್ನದ ಗಣಿ ಭಾಗದಲ್ಲಿ ಹೆಚ್ಚಾಗಿ ಜಿಂಕೆ ಹಾಗು ಕೃಷ್ಣ ಮೃಗಗಳಿದ್ದು, ಇವುಗಳ ಬೇಟೆಗೆ ಬಂದಿರುವ ಚಿರತೆ ಆಗಾಗ ಹೀಗೆ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಭೀತಿ ಮೂಡಿಸಿತ್ತು.

ಇದನ್ನೂ ಓದಿ: ಬೆಂಗಳೂರು: ಹಿಟ್​ ಆ್ಯಂಡ್ ರನ್​ಗೆ ಚಿರತೆ ಸಾವು ಶಂಕೆ

ಇನ್ನೂ ಚಿರತೆ ಓಡಾಟದಿಂದ ಆತಂಕಗೊಂಡಿದ್ದ ಕಾರ್ಮಿಕರು ನಿತ್ಯ ಭಯದಲ್ಲೆ ಕೆಲಸ ಮಾಡುವಂತ್ತಾಗಿತ್ತು. ಇನ್ನೂ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಟ ಇದ್ದು, ಸೆಕ್ಯೂರಿಟಿ ಕ್ಯಾಬಿನ್ ಬಳಿಯೆ ಓಡಾಟ ನಡೆಸಿರುವುದು ಬೆಮೆಲ್ ಕಾರ್ಮಿಕರಲ್ಲಿ ಮಾತ್ರವಲ್ಲದೆ ಕೆಜಿಎಫ್ ನಗರದ ಜನರಲ್ಲೂ ಆತಂಕ ಹೆಚ್ಚಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ