ಕನ್ನಡ ಕಾಯಕ ವರ್ಷಾಚರಣೆ: ತಂತ್ರಜ್ಞಾನದಲ್ಲೂ ಕನ್ನಡ ಸಮರ್ಪಕ ಬಳಕೆಗೆ ಪ್ರಾಧಾನ್ಯತೆ ಇರಲಿ
ಇಲಾಖೆಗಳಿಂದ ಹೊರಡಿಸುವ ಮಾಹಿತಿ ಪ್ರತಿಗಳನ್ನು ಕನ್ನಡದಲ್ಲೇ ಪ್ರಕಟಿಸಬೇಕು. ತಂತ್ರಜ್ಞಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಿ. ಸರ್ಕಾರಿ ಇಲಾಖೆಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಕನ್ನಡದ ಬಳಕೆ ಮಾಡಬೇಕು. ರಸ್ತೆಯ ಮಾರ್ಗಸೂಚಿ ಫಲಕಗಳು ಕನ್ನಡದಲ್ಲಿ ಇರಬೇಕು.
ಬೆಂಗಳೂರು: ಕನ್ನಡ ಕಾಯಕ ವರ್ಷಾಚರಣೆಯ ಅಂಗವಾಗಿ ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸಂಪೂರ್ಣವಾಗಿ ಕನ್ನಡದಲ್ಲೇ ಕಡತ ನಿರ್ವಹಿಸಬೇಕು. ಆಡಳಿತಕ್ಕೆ ಸಂಬಂಧಿತ ಎಲ್ಲಾ ಮಾಹಿತಿಗಳೂ ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ರೂಪಿಸಿ ಎಂದು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನೊಟೀಸ್ ಹೊರಡೊಸಿದೆ.
ಇಲಾಖೆಗಳಿಂದ ಹೊರಡಿಸುವ ಮಾಹಿತಿ ಪ್ರತಿಗಳನ್ನು ಕನ್ನಡದಲ್ಲೇ ಪ್ರಕಟಿಸಬೇಕು. ತಂತ್ರಜ್ಞಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಲು ಬೇಕಾಗುವ ಎಲ್ಲಾ ಕ್ರಮ ಕೈಗೊಳ್ಳಿ. ಸಾರ್ವಜನಿಕರಿಗೆ ಕನ್ನಡದಲ್ಲೇ ಸಂದೇಶ ಹಾಗೂ ಇ-ಮೇಲ್ ಹೋಗುವಂತೆ ನೋಡಿಕೊಳ್ಳಿ. ಮಾನವ ಸಂಪನ್ಮೂಲ ನಿರ್ವಹಣೆ (ಎಚ್ಆರ್ಎಂಎಸ್), ಟೆಂಡರ್ ತಂತ್ರಾಂಶಗಳು ಮತ್ತು ಸರ್ಕಾರಿ ಆ್ಯಪ್ಗಳನ್ನು ಕನ್ನಡದಲ್ಲೇ ಸಿದ್ಧಪಡಿಸಿ ಬಳಕೆಗೆ ತರುವಂತೆ ನೊಟೀಸ್ ನೀಡಿದೆ. (Kannada Kayaka Varsha)
ಸರ್ಕಾರಿ ಇಲಾಖೆಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಕನ್ನಡದ ಬಳಕೆ ಮಾಡಬೇಕು. ರಸ್ತೆಯ ಮಾರ್ಗಸೂಚಿ ಫಲಕಗಳು ಕನ್ನಡದಲ್ಲಿ ಇರಬೇಕು. ಜಿಲ್ಲೆಯ ಪ್ರಮುಖ ರಸ್ತೆಗಳು, ಆಸ್ಪತ್ರೆಗಳಿಗೆ ಕನ್ನಡದ ಫಲಕಗಳನ್ನು ಹಾಕಿ. ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಎಂದು ಸೂಚನೆ ನೀಡಿದೆ.
Published On - 11:08 am, Sat, 28 November 20