AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಪಂಪ್ ಸೆಟ್​ಗೆ ಆಧಾರ್ ಜೋಡಣೆಯಿಂದ ಅಣ್ತಮ್ಮಂದಿರ ಮಧ್ಯ ಗಲಾಟೆ: ಬೇಡವೇ ಬೇಡ ಎಂದ ರೈತರು

ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ್ಯಾಂತ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿದೆ. ಆದರೆ ಈಗ ಉಚಿತ ವಿದ್ಯುತ್ ಪಡೆಯುತ್ತಿರುವ ರೈತರು ತಮ್ಮ ಕೃಷಿ ಪಂಪ್ ಸೆಟ್ ನ ಆರ್​ಆರ್​ ನಂಬರ್​ಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಇದು ರೈತರಿ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಬೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ಮಾಡಿದ್ದಾರೆ.

ಕೃಷಿ ಪಂಪ್ ಸೆಟ್​ಗೆ ಆಧಾರ್ ಜೋಡಣೆಯಿಂದ ಅಣ್ತಮ್ಮಂದಿರ ಮಧ್ಯ ಗಲಾಟೆ: ಬೇಡವೇ ಬೇಡ ಎಂದ ರೈತರು
ಕೃಷಿ ಪಂಪ್ ಸೆಟ್​ಗೆ ಆಧಾರ್ ಜೋಡಣೆಯಿಂದ ಅಣ್ತಮ್ಮಂದಿರ ಮಧ್ಯ ಗಲಾಟೆ: ಬೇಡವೇ ಬೇಡ ಎಂದ ರೈತರು
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Sep 04, 2024 | 8:51 PM

Share

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 04: ರಾಜ್ಯ ಸರ್ಕಾರ ಅದ್ರಲ್ಲೂ ಇಂಧನ ಇಲಾಖೆ ರೈತರಿಗೆ (Farmers) ಉಚಿತ ವಿದ್ಯುತ್ ಸರಬರಾಜು ಮಾಡುತ್ತಿದೆ. ಆದರೆ ಈಗ ರೈತರ ಕೃಷಿ ಪಂಪ್‍ಸೆಟ್​ಗಳಿಗೆ ಉಚಿತ ವಿದ್ಯುತ್ ಪಡೆಯುತ್ತಿರುವ ರೈತರು ಕೃಷಿ ಪಂಪ್‍ಸೆಟ್​ಗೆ ಇಂಧನ ಇಲಾಖೆಯಲ್ಲಿ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಇದರಿಂದ ಮನೆಯಲ್ಲಿ ಅಣ್ಣ-ತಮ್ಮಂದಿರ ನಡುವೆಯೇ ಜಗಳ ತಂದಿಡುವ ಕೆಲಸ ಇಂಧನ ಇಲಾಖೆ ಮಾಡುತ್ತಿದೆ ಅಂತ ರೈತರು ಹೋರಾಟಕ್ಕಿಳಿದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಬೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ್ಯಾಂತ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿದೆ. ಆದರೆ ಈಗ ಉಚಿತ ವಿದ್ಯುತ್ ಪಡೆಯುತ್ತಿರುವ ರೈತರು ತಮ್ಮ ಕೃಷಿ ಪಂಪ್ ಸೆಟ್ ನ ಆರ್​ಆರ್​ ನಂಬರ್​ಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. ರಾಜ್ಯಾದ್ಯಾಂತ ಕಳೆದ 2-3 ತಿಂಗಳುಗಳಿಂದ ಆಧಾರ್ ಜೋಡಣೆ ಮಾಡುವ ಕಾಯಕವನ್ನ ಬೆಸ್ಕಾಂ ಇಲಾಖೆ ಅಧಿಕಾರಿ ಸಿಬ್ಬಂದಿಗಳು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮ್ಯಾಟ್ರಿಮೋನಿ, ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರಿಗೆ ಗಾಳ; ಮದುವೆ ಆಗುವುದಾಗಿ ನಂಬಿಸಿ ಹಣದ ಜೊತೆ ಎಸ್ಕೇಪ್​ ಆಗ್ತಿದ್ದವಳ ಬಂಧನ

ಇಂಧನ ಇಲಾಖೆಯ ಈ ಹೊಸ ನಿಯಮದ ವಿರುದ್ದ ಸಿಡೆದಿದ್ದಿರುವ ರೈತರು ಕೃಷಿ ಪಂಪ್ ಸೆಟ್​ಗಳಿಗೆ ಆಧಾರ್ ಲಿಂಕ್ ಮಾಡಿ ನಂತರ ಮೀಟರ್ ಅಳವಡಿಸಿ, ಮುಂದೆ ಉಚಿತ ಸ್ಕೀಂ ರದ್ದು ಮಾಡಿ ಶುಲ್ಕ ವಸೂಲಿ ಮಾಡುವ ಹುನ್ನಾರ ಅಂತ ಆರೋಪಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಧರಣಿ ಕುಳಿತು ಪ್ರತಿಭಟಿಸಿದರು. ಅಲ್ಲೇ ಪಾತ್ರೆ ಸಾಮಾನು, ಸೌದೆ, ಅಕ್ಕಿ, ತರಕಾರಿ ತಂದು ಅಡುಗೆ ಮಾಡಿ ಊಟವನ್ನ ಸವಿದರು. ಸರ್ಕಾರ ಈಗಾಗಲೇ ರೈತರಿಗೆ ಉಚಿತವಾಗಿ ನೀಡುತ್ತಿದ್ದ ವಿದ್ಯುತ್ ಸಂಪರ್ಕ ಯೋಜನೆ ಮಾಡಿ ರೈತರಿಂದಲೇ ಹೊಸ ವಿದ್ಯುತ್ ಸಂಪರ್ಕ ನೀಡಲು ಎರಡೂವರೆ ಲಕ್ಷ ವಸೂಲಿ ಮಾಡುತ್ತಿದೆ. ಈಗ ಮುಂದುವರೆದ ಭಾಗವಾಗಿ ಎಲ್ಲಾ ಕೃಷಿ ಪಂಪ್ ಸೆಟ್ ಗಳಿಗೂ ಆಧಾರ್ ಲಿಂಕ್ ಮಾಡಿ ಹಣ ಕೊಳ್ಳೆ ಹೊಡೆಯುವ ಷಡ್ಯಂತ್ರ ರೂಪಿಸಿದೆ.

ಇನ್ನೂ ಒಂದೇ ಮನೆಯಲ್ಲಿ ಅಣ್ಣ-ತಮ್ಮಂದಿರು ಇದ್ದರೆ ಅಂತಹವರ ಮನೆಯಲ್ಲಿ ಒಂದು ಕೊಳವೆಬಾವಿ ಇರುತ್ತೆ, ಆ ಪಂಪ್ ಸೆಟ್ ಅಣ್ಣನ ಹೆಸರಿಗೆ ಲಿಂಕ್ ಮಾಡಿದರೆ ತಮ್ಮನಿಗೆ ಕೋಪ, ತಮ್ಮನಿಗೆ ಮಾಡಿದರೆ ಅಣ್ಣನಿಗೆ ಕೋಪ, ಹೀಗೆ ಅಣ್ಣ ತಮ್ಮಂದಿರ ನಡುವೆಯೇ ಜಗಳ ಹಚ್ಚುವ ಕೆಲಸ ಇಲಾಖೆ ಮಾಡುತ್ತಿದೆ ಅಂತ ರೈತರು ಆರೋಪಿಸುತ್ತಿದ್ದು ಇದನ್ನ ಆಧಿಕಾರಿಗಳು ಅಲ್ಲಗಳೆಯುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಸೌಂಡ್ ಕಿರಿಕಿರಿಗೆ ಬ್ರೇಕ್​;​ ಸೈಲೆನ್ಸರ್​ಗಳ ಮೇಲೆ ರೋಡ್ ರೋಲರ್ ಹತ್ತಿಸಿ ಎಚ್ಚರಿಕೆ

ರೈತರಿಗೆ ಎಷ್ಟು ವಿದ್ಯುತ್ ಪೂರೈಕೆ ಮಾಡ್ತಿದ್ದೀವಿ ಅನ್ನೋ ಲೆಕ್ಕ ಸಿಗಲಿ, ಯಾವ ಯಾವ ರೈತರಿಗೆ ಉಚಿತ್ ವಿದ್ಯುತ್ ಕೊಡ್ತಿದ್ದೀವಿ ಅನ್ನೋ ದಾಖಲೆ ಇರಲಿ ಹಾಗೂ ಇದರ ಅನ್ವಯ ಸರ್ಕಾರ ಇಲಾಖೆಗೆ ಹಣ ತುಂಬಬೇಕಾಗುತ್ತದೆ. ಅದಕ್ಕಾಗಿಯೇ ಈ ಆಧಾರ್ ಜೋಡಣೆ ಅನ್ನೋದು ಅಧಿಕಾರಿಗಳ ವಾದ. ಆದರೆ ರೈತರು ಮಾತ್ರ ಇದೆಲ್ಲ ಮುಂದೊಂದು ದಿನ ಇಲಾಖೆ ಖಾಸಗೀಕರಣ ಮಾಡಿ ರೈತರ ಬಳಿ ಬಿಲ್ ಪಡೆಯುವ ಉದ್ದೇಶ ಇದೆ ಅಂತ ಆರೋಪಿಸುತ್ತಿದ್ದು ಮುಂದೆನಾಗುತ್ತೋ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ